ಬೇಲೂರು: ಬೇಲೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ಸುಮಾರು 3 ಕಿ.ಮೀ.ದೂರದುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಗುಂಡಿ ಬಿದ್ದಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ತಾಲೂಕಿನ ಕರಗಡ ಗ್ರಾಮವನ್ನು ದಾಟಿದ ನಂತರ ಮಾಗಡಿ ಹ್ಯಾಂಡ್‌ಪೋಸ್ಟ್ ಸಿಗುವವರಗೂ ರಸ್ತೆ ಗುಂಡಿ ಬಿದ್ದಿದ್ದು ವಾಹನ ಚಾಲನೆ ಮಾಡಲು ಭಾರಿ ಹಿಂಸೆ ಆಗುತ್ತಿದೆ.
ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ನಿಲುವುದರಿಂದ ದ್ವಿಚಕ್ರವಾಹನ ಸವಾರರು ಹೆಚ್ಚಿನ ತೊಂದರೆ ಅನುಭಸುತ್ತಿದ್ದಾರೆ. ಚಿಕ್ಕಮಗಳೂರು-ಬೇಲೂರು ನಡುವೆ ಈ 3 ಕಿ.ಮೀ.ರಸ್ತೆ ಹೊರತು ಪಡಿಸಿ ಉಳಿದಂತೆ ರಸ್ತೆ ಉತ್ತಮವಾಗಿರುವುದರಿಂದ ರಾತ್ರಿ ವೇಳೆ ಹೊರ ಊರಿನಿಂದ
ಆಗಮಿಸುವ ದ್ವಿಚಕ್ರ ಸವಾರರು ಗುಂಡಿ ಬಿದ್ದಿರುವುದನ್ನು ಗಮನಿಸಿದ ರಸ್ತೆ ಉತ್ತಮವಾಗಿದೆ ಎಂದು ವಾಹನ ಚಾಲನೆ ಮಾಡುವುದರಿಂದ ಅಪಾಯಕ್ಕೆ ಒಳಗಾಗುತ್ತಿದ್ದಾರೆ ಅಲ್ಲದೆ ಹಲವಾರು ಅಪಘಾತಗಳು ಸಂಭವಿಸಿವೆ.
ಇದನ್ನೂ ಓದಿ:ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಂತು 900 ಕೋಟಿ ರೂ.|ಎಟಿಎಂಗಳಿಗೆ ಮುಗಿ ಬಿದ್ದ ಹಳ್ಳಿಗರು
ರಸ್ತೆ ಸಾರಿಗೆ ಬಸ್‌ಗಳು ಇನ್ನಿತರ ವಾಹನಗಳಲ್ಲಿ ಪ್ರಯಾಣಿಸುವಾಗ ಗುಂಡಿ ಬಿದ್ದಿರುವುದನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಕಷ್ಟ ಸಾಧ್ಯ ವಾಗುತ್ತದೆ. ಗುಂಡಿಯೊಳಗೆ ಚಕ್ರ ಇಳಿದು ಹತ್ತುವಾಗ ವಾಹನದೊಳಗಿನ ಪ್ರಯಾಣಿಕರು ಹಿಂಸೆ ಅನುಭವಿಸುತ್ತಾರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.