ಚಿಕ್ಕೋಡಿ: ಶಾಂತಿ ,ಅಂಹಿಸೆ ಸಾರುವ ಜೈನ ಧರ್ಮ ಎಲ್ಲರಿಗೂ ಒಳ್ಳೆಯದನ್ನು ಬಯಸಿದೆ. ಸರಳ ಸಜ್ಜನಿಕೆಯ ಜೈನ ಸಮಾಜಕ್ಕಾಗಿ ಸರಕಾರವು ಪ್ರತ್ಯೇಕ ಜೈನ ನಿಗಮ ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ ಹಾಸ್ಟೆಲ್‌ಗಳ ಸ್ಥಾಪನೆಯಾಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆಯಾಗಬೇಕು ಎಂದು ರಾಷ್ಟ್ರಸಂತ 108 ಆಚಾರ್ಯ ಶ್ರೀ ಗುಣಧರನಂದಿಜಿ ಮಹಾರಾಜರು ಒತ್ತಾಯಿಸಿದರು.
Advertisement
ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ 33 ನೇ ದೀಕ್ಷಾ ಜಯಂತಿ ಅಂಗವಾಗಿ ಆಯೋಜಿಸಿದ್ದ ಬೃಹತ್ ಜೈನ ಸಮ್ಮೇಳನದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಜೈನ ಮುನಿಗಳ ಸುರಕ್ಷತೆ ಆಗಬೇಕು.
ಕಾರ್ಯಾಲಯಗಳು ನಿರ್ಮಾಣವಾಗಬೇಕು ಹಾಗೂ ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು ಹಾಗೂ ಜೈನ ಸಮಾಜಕ್ಕೆ ಒಳ್ಳೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ನಾಂದಣಿಯ ಶ್ರೀ ಜಿನಸೇನ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಜಿನಶಾಸನ ಉಳಿದು ಬೆಳೆಯಬೇಕು. ಜೈನ ಸಮಾಜ ಬಾಂಧವರು ಧರ್ಮ ಕ್ಷೇತ್ರಗಳನ್ನು ರಕ್ಷಿಸಲು ಒಗ್ಗೂಡಿ ಸರಕಾರದ ಮುಂದೆ ಬೇಡಿಕೆ ಇಡಬೇಕು, ವಿಹಾರದ ಸಮಯದಲ್ಲಿ ಜೈನ ಮುನಿಗಳಿಗೆ ಸರಕಾರ ರಕ್ಷಣೆ ನೀಡಬೇಕೆಂದರು.
Related Articles
Advertisement
ಅಮ್ಮಿನಭಾವಿಯ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶ್ರೀ ಆಯಿಕಾರತ್ನ 105 ಪ್ರಜ್ಞೆಮತಿ ಮಾತಾಜಿ, ಜೈನ ಸಮಾಜದ ಮುಖಂಡರಾದ ಮಾಜಿ ಸಚಿವ ವೀರಕುಮಾರ ಪಾಟೀಲ, ಉತ್ತಮ ಪಾಟೀಲ, ಸುದರ್ಶನ ಪಾಟೀಲ, ಸಂಜಯ ನಾಡಗೌಡ, ಅರುಣ ಯಲಗುದ್ರಿ, ಧುಳಗೌಡ ಪಾಟೀಲ, ಡಾ| ಎನ್.ಎ.ಮಗದುಮ್ಮ, ದಾದಾಸಾಹೇಬ ಪಾಟೀಲ, ಬಾಳಾಸಾಹೇಬ ಪಾಟೀಲ, ಅಣ್ಣಾಸಾಹೇಬ ಹಾವಲೆ, ಅಣ್ಣಾಸಾಹೇಬ ಖೊತ ಮುಂತಾದವರು ಮಾತನಾಡಿದರು.
ವೇದಿಕೆ ಮೇಲೆ ಹಾಲಸಿದ್ಧನಾಥ ಕಾರ್ಖಾನೆ ಸಂಚಾಲಕ ಜಯಕುಮಾರ ಖೋತ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಮುಂಬೈನ ಸಂಜಯ ಮುಂಡಾ, ಬಾಳಾಸಾಹೇಬ ಪಾಟೀಲ, ಡಾ ಪದ್ಮರಾಜ ಪಾಟೀಲ, ಪ್ರಕಾಶ ಪಾಟೀಲ, ಭರತೇಶ ಬನವಣೆ, ಚೇತನ ಪಾಟೀಲ, ಡಾ ಸಿ ಬಿ ಪಾಟೀಲ, ಜಿನ್ನಪ್ಪಾ ಅಸ್ಕಿ, ದೀಪಕ ಖೊತ, ಅಣ್ಣಾಸಾಹೇಬಖೊತ, ಕುಮಾರ ಕುರುಚೆ, ಕುಮಾರ ಮಗದುಮ್ಮ, ಸೋಮನಖೊತ, ಆರ್.ಬಿ.ಖೋತ, ಆಣ್ಣಾಸಾಹೇಬ ಭೆಂಡವಾಡೆ, ಸಚೀನ ಖೊತ, ಜಿತೇಂದ್ರ ಖೊತ, ವಿಕಿ ಖೊತ, ಅಮ್ಮನ್ನವರ, ಹನಿಮನಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು, ಸಮ್ಮೇಳನದಂಗವಾಗಿ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ, ಕನ್ನಡ ಸಂಗೀತಗಾರ ರಾಜೇಶ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲಕ್ಷಾಂತರ ಜೈನ ಸಮಾಜ ಬಾಂಧವರು, ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು,