Advertisement

Chikkodi: ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ- ಹುಕ್ಕೇರಿ

05:44 PM Nov 11, 2023 | Team Udayavani |

ಚಿಕ್ಕೋಡಿ: ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಅನುಕೂಲವಾಗಲು ಪ್ರತಿನಿತ್ಯ 4 ಬಸ್‌ಗಳನ್ನು ಬಿಡಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ದೆಹಲಿ ಪ್ರತಿನಿಧಿ ಹಾಗೂ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಸೂಚಿಸಿದರು.

Advertisement

ತಾಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಉಪನ್ಯಾಸಕರು ಮತ್ತು ಎಸ್‌ಡಿಎಂಸಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಮಜಲಟ್ಟಿ ಗ್ರಾಮದಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಸರ್ಕಾರಿ ಶಾಲೆ-ಕಾಲೇಜು ಕ್ಯಾಂಪಸ್‌ದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿಯೂ ವಿಜ್ಞಾನ ವಿಭಾಗದಲ್ಲಿ 2 ಸಾವಿರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಚಿಕ್ಕೋಡಿ ಮತ್ತು ಸಂಕೇಶ್ವರ
ಭಾಗದಿಂದ ಹೆಚ್ಚಿನ ಮಕ್ಕಳು ಮಜಲಟ್ಟಿಗೆ ಶಿಕ್ಷಣಕ್ಕೆ ಆಗಮಿಸುವುದರಿಂದ ಮಕ್ಕಳಿಗೆ ಬಸ್ಸಿನ ಕೊರತೆ ಇದೆ. ಹೀಗಾಗಿ ಮಕ್ಕಳಿಗೆ ಅನಾನುಕೂಲ ಆಗದಂತೆ ಪ್ರತಿನಿತ್ಯ 4 ಬಸ್‌ಗಳನ್ನು ಮಜಲಟ್ಟಿಗೆ ಬಿಡಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಜಲಟ್ಟಿ ಸರ್ಕಾರಿ ಗೋಮಾಳ ಜಾಗದಲ್ಲಿ ಬಸ್‌ ನಿಲ್ದಾಣ ಮಾಡಬೇಕೆಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಪ್ರಕಾಶ ಹುಕ್ಕೇರಿ ಅವರು, ಬಸ್‌ ನಿಲ್ದಾಣಕ್ಕೆ ಜಾಗ ನೀಡಬೇಕೆಂದು ತಹಶೀಲ್ದಾರ್‌ಗೆ ಸೂಚಿಸಿ ಶೀಘ್ರದಲ್ಲಿಯೇ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಭರವಸೆ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಎರಡು ಕೊಠಡಿ ಮಂಜೂರು ಮಾಡಬೇಕೆಂದು ಉಪನ್ಯಾಸಕರ ಬೇಡಿಕೆಗೆ ಸ್ಪಂದಿ ಸಿದ ಅವರು, ತಕ್ಷಣ ಪ್ರಸ್ತಾವನೆ ಸಲ್ಲಿಸಿದರೆ ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ 34 ಲಕ್ಷ ರೂ ವೆಚ್ಚದಲ್ಲಿ 2 ಕೊಠಡಿ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

Advertisement

ಬೆಳಗಾವಿ ಜಿಲ್ಲೆಯಲ್ಲಿಯೇ ಮಜಲಟ್ಟಿ ಶಿಕ್ಷಣದಲ್ಲಿ ಹೆಚ್ಚು ಪ್ರಗತಿ ಕಾಣುತ್ತಿದೆ. ಶೆ„ಕ್ಷಣಿಕವಾಗಿ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದರು.

ಉಪವಿಭಾಗಾಧಿಕಾರಿ ಎಸ್‌.ಎಸ್‌.ಸಂಪಗಾವಿ, ತಹಶೀಲ್ದಾರ್‌ ಸಿ.ಎಸ್‌.ಕುಲಕರ್ಣಿ, ಧುರೀಣ ರುದ್ರಪ್ಪ ಸಂಗಪ್ಪಗೋಳ, ಬಿಇಒ ಬಿ.ಎ.ಮೇಕನಮರಡಿ, ಪ್ರಾಚಾರ್ಯ ಆನಂದ ಕೋಳಿ, ಉಪಪ್ರಾಚಾರ್ಯ ಜೆ.ಪಿ.ತಂಗಡಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ಎಸ್‌.ಆರ್‌.ಮುಂಜಿ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next