Advertisement

Chikkanna: ಸದ್ದು ಮಾಡುತ್ತಿದೆ ‘ಉಪಾಧ್ಯಕ್ಷ’ ಟೀಸರ್

04:27 PM Oct 29, 2023 | Team Udayavani |

ಹಾಸ್ಯ ನಟ ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿರುವ “ಉಪಾಧ್ಯಕ್ಷ’ ಚಿತ್ರದ ಟೀರ್ಸ ಇತ್ತೀಚಿಗೆ ಬಿಡುಗಡೆಯಾಗಿದೆ. ಉಮಾಪತಿ ಫಿಲಂಸ್‌ ಲಾಂಛನದಲ್ಲಿ ಸ್ಮಿತ ಉಮಾಪತಿ ನಿರ್ಮಿಸಿರುವ ಹಾಗೂ ಅನಿಲ್‌ ಕುಮಾರ್‌ ನಿರ್ದೇಶಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಉಮಾಪತಿ, “ನಾನು ಕೆಲಸದೊತ್ತಡದಿಂದ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರಲಿಲ್ಲ. ಚಿತ್ರತಂಡದವರೆ ಎಲ್ಲವನ್ನು ನೋಡಿಕೊಂಡಿದ್ದಾರೆ. ಇದು ಅಧ್ಯಕ್ಷ ಚಿತ್ರದ ಮುಂದುವರೆದ ಭಾಗ. ಚಂದ್ರ ಮೋಹನ್‌ ಕಥೆ ಬರೆದಿ¨ªಾರೆ. ಚಿತ್ರಕಥೆಗೆ ನಿರ್ದೇಶಕರಾದ ಡಾ.ಸೂರಿ,

ತರುಣ್‌ ಸುಧೀರ್‌ ಮುಂತಾದವರು ಸಹಾಯ ಮಾಡಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಇಂದು ಟೀಸರ್‌ ಬಿಡುಗಡೆಯಾಗಿದೆ. ನವೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು.

“ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು ಉಪಾಧ್ಯಕ್ಷ ಚಿತ್ರದ ನಾಯಕ ಆದ ಕ್ಷಣದಿಂದ ನೋಡಿದ್ದೇನೆ. ನಾನು ಈ ಚಿತ್ರದ ನಾಯಕ ಅಂದ ಕೂಡಲೇ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ’ ಎಂದರು ನಾಯಕ ಚಿಕ್ಕಣ್ಣ.

ಈ ಚಿತ್ರವನ್ನು ಅನಿಲ್‌ ನಿರ್ದೇಶಿಸಿದ್ದಾರೆ. “ಇದು ಟೀಸರ್‌ ಬಿಡುಗಡೆ ಸಮಾರಂಭ. ನಾನು ಹೆಚ್ಚು ಹೇಳುವುದೇನಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು ಅನಿಲ್‌.

Advertisement

ಮಲೈಕಾ ಈ ಸಿನಿಮಾದ ನಾಯಕಿ. “ಧಾರಾವಾಹಿ ಗಳಲ್ಲಿ ನಟಿಸುತ್ತಿದ್ದ ನಾನು ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ’ ಎನ್ನುತ್ತಾ ಅವಕಾಶ ನೀಡಿದ್ದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next