Advertisement

Chikkamagaluru: ನಕ್ಸಲರ ಶರಣಾಗತಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಟೆ ಮನವಿ

03:46 PM Jan 02, 2025 | Team Udayavani |

ಚಿಕ್ಕಮಗಳೂರು: ನಕ್ಸಲರ ಶರಣಾಗತಿಗೆ ಪೊಲೀಸ್ ಇಲಾಖೆ ಮೊದಲ ಆದ್ಯತೆ. ನಿಮ್ಮ ಜತೆ ನಮ್ಮ ಸಹಕಾರವಿರುತ್ತದೆ. ಭೂಗತ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮನವಿ ಮಾಡಿದರು.

Advertisement

ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಕ್ಸಲ್ ಶರಣಾಗತಿ ಸಂಬಂಧ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. 2024ರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಸರ್ಕಾರ ನಕ್ಸಲ್ ಶರಣಾಗತಿಗೆ ಪ್ರಾಮುಖ್ಯತೆ ನೀಡಿದೆ. ಜಿಲ್ಲೆಯಲ್ಲಿ ಈ ಹಿಂದೆಯೂ ನಕ್ಸಲರು ಶರಣಾಗತರಾಗಿದ್ದಾರೆ. ಕರ್ನಾಟಕ ಸೇರಿ ಹೊರ ರಾಜ್ಯದ ನಕ್ಸಲರಿಗೂ ಶರಣಾಗತಿ ಅವಕಾಶ ನೀಡಲಾಗಿದೆ ಎಂದರು.

ಶರಣಾಗತಿಯಾಗುವ ನಕ್ಸಲರು ತಮ್ಮನ್ನು ಸಂಪರ್ಕ ಮಾಡಬಹುದು. ನಾವೂ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ.  ನಕ್ಸಲ್ ಶರಣಾಗತಿ ಮಾಡಿಸುವವರಿಗೂ ಪೊಲೀಸ್ ಇಲಾಖೆ ಬೆಂಬಲ ನೀಡುತ್ತದೆ ಎಂದ ಅವರು ಮಾಜಿ ನಕ್ಸಲರ ಸಮಸ್ಯೆ ಕುರಿತು ಜಿಲ್ಲಾಡಳಿತ ಜತೆ ಚರ್ಚಿಸಿ ಸಭೆ ಮಾಡುತ್ತೇವೆ. ಮಾಜಿ ನಕ್ಸಲರ ಸಮಸ್ಯೆಗಳಿದ್ದರೆ ತಮ್ಮನ್ನು ಖುದ್ದಾಗಿ ಭೇಟಿಯಾಗಿ ತಿಳಿಸಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next