Advertisement

ಚಿಕ್ಕಮಗಳೂರು: 55 ಹೊಸ ಕೋವಿಡ್ ಪ್ರಕರಣಗಳು; ಓರ್ವ ಸೋಂಕಿತ ಸಾವು

05:45 PM Jul 28, 2020 | keerthan |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಸಂಖ್ಯೆ ಪ್ರತಿದಿನವೂ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ಇಂದು 55 ಹೊಸ ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 758ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿಂದು ಕೋವಿಡ್ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ 58 ವರ್ಷದ ವ್ಯಕ್ತಿ ಇಂದು ಮರಣಹೊಂದಿದ್ದು, ಜಿಲ್ಲೆಯ ಸೋಂಕಿತರ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ 55 ಪ್ರಕರಣಗಳು ಪತ್ತೆಯಾಗಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ 26 ಪ್ರಕರಣಗಳು, ತರೀಕೆರೆ ತಾಲೂಕಿನಲ್ಲಿ 17 ಪ್ರಕರಣಗಳು, ಕಡೂರು ತಾಲೂಕಿನಲ್ಲಿ 7 ಪ್ರಕರಣಗಳು, ಶೃಂಗೇರಿ ತಾಲೂಕಿನಲ್ಲಿ 4 ಪ್ರಕರಣಗಳು ಕಂಡು ಬಂದರೆ, ಮೂಡಿಗೆರೆಯಲ್ಲಿ ಒಂದು ಸೋಂಕು ಪ್ರಕರಣ ದೃಢವಾಗಿದೆ.

ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 758ಕ್ಕೆ ಏರಿಕೆಯಾಗಿದ್ದ, ಇಂದು 10 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 384 ಮಂದಿ ಸೋಂಕಿನಿಂದ ಗುಣಮುಖವಾಗಿದ್ದು, ಸದ್ಯ ಜಿಲ್ಲೆಯಲ್ಲಿ 344 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next