Advertisement

ಕೋವಿಡ್ ಜಾಗೃತಿ ಕಿರುಚಿತ್ರ ಬಿಡುಗಡೆ

01:15 PM May 28, 2020 | Naveen |

ಚಿಕ್ಕಮಗಳೂರು: ಜಿಲ್ಲೆಯ ಜನರಲ್ಲಿ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಛಾಯಾಚಿತ್ರಗ್ರಾಹಕ ಡಿ.ವಿ.ಸಂಜಯ್‌ ಪರಿಕಲ್ಪನೆಯ ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಜಾಗೃತಿ ಕಿರುಚಿತ್ರವನ್ನು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹಾಗೂ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಬುಧವಾರ ಬಿಡುಗಡೆಗೊಳಿಸಿದರು.

Advertisement

ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಸಮಯ ಕೋವಿಡ್ ಸೋಂಕು ಇರಲಿಲ್ಲ. ಇತ್ತೀಚೆಗೆ ಜಿಲ್ಲೆಗೆ ಮಹಾರಾಷ್ಟ್ರದಿಂದ ಹಿಂದಿರುಗಿದವರಲ್ಲಿ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಜನತೆ ಮತಷ್ಟು ಎಚ್ಚರಿಕೆಯಿಂದ ಸುರಕ್ಷತೆಯಿಂದ ಇರಬೇಕು. ಸರ್ಕಾರ ಹೇಳಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ವೃದ್ಧರು ಮಕ್ಕಳು ಮನೆಯಿಂದ ಹೊರ ಬರದೇ ಇರುವುದು ಸೂಕ್ತ. ಜಿಲ್ಲೆಯ ಜನತೆ ಎಚ್ಚರ ವಹಿಸಿ ರೋಗ ಹರಡದಂತೆ ಜಾಗರೂಕತೆ ವಹಿಸಬೇಕು. ಕೋವಿಡ್ ಸೋಂಕಿನ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಕಿರುಚಿತ್ರ ನಿರ್ಮಿಸಿ ಜಾಗೃತಿ ಮೂಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದರು.

ಕಿರುಚಿತ್ರ ಗಾಯಕ ಸಾಯಿ ಸತೀಶ್‌ ರಚಿಸಿ ಹಾಡಿರುವ ಒಂದು ಜಾಗೃತಿ ಗೀತೆ ಮತ್ತು 13 ನಿಮಿಷಗಳ ಜಾಗೃತಿ ಸಂದೇಶಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಜಿಪಂ ಇಒ ಎಸ್‌.ಪೂವಿತಾ, ವಿಧಾನ ಪರಿಷತ್‌ ಶಾಸಕ ಪ್ರಾಣೇಶ್‌, ಉಪನ್ಯಾಸಕಿ ಅಜ್ಜಂಪುರ ಜಿ.ಶೃತಿ, ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜಯಚಂದ್ರ, ನವೀನ್‌, ಲಕ್ಷ್ಮೀ ಸೇರಿದಂತೆ ಕಿರುಚಿತ್ರದಲ್ಲಿ ಹಲವರು ಜಾಗೃತಿ ಸಂದೇಶ ನೀಡಿದ್ದಾರೆ.

ಕರ್ನಾಟಕ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಪರಿಷತ್‌ ಅಧ್ಯಕ್ಷ ಬಿ.ಕೆ.ಸುಂದರೇಶ್‌ ಅವರ ಮಾರ್ಗದರ್ಶನದಲ್ಲಿ ಚಿತ್ರ ನಿರ್ಮಿಸಲಾಗಿದೆ. ಆಶ್ರಯ್‌ ಎಂ.ಸಿ. ಛಾಯಾಗ್ರಹಣ ಮಾಡಿದ್ದಾರೆ. ಪ್ರದೀಪ್‌ ಮತ್ತಿಕೆರೆ, ಪ್ರಶಾಂತ್‌ ಛತ್ರಪತಿ, ಸತೀಶ್‌ ಜಿ, ಶಿಕ್ಷಕ, ಚರಣ್‌ ಎಸ್‌.ಕೆ.ಪ್ರೇಂ, ಸತೀಶ್‌ ಪ್ರಭು, ಗೌರೀಶ್‌ ಮುಂತಾದವರು ಸಹಕಾರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next