ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆನಾಮಪತ್ರ ಸಲ್ಲಿಕೆ ಕಡೆಯ ದಿನವಾದ ಮಂಗಳವಾರಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಜಿಲ್ಲಾ ಧಿಕಾರಿಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಜಿಲ್ಲಾ ಬಿಜೆಪಿ ಕಚೇರಿಯಿಂದಪಕ್ಷದ ಕಾರ್ಯಕರ್ತರುಮತ್ತು ಮುಖಂಡರ ಜೊತೆಕಾಲ್ನಡಿಗೆಯೊಂದಿಗೆ ಜಿಲ್ಲಾ ಧಿಕಾರಿಕಚೇರಿಗೆ ಆಗಮಿಸಿದ ಎಂ.ಕೆ.ಪ್ರಾಣೇಶ್ ಜಿಲ್ಲಾ ಧಿಕಾರಿ ಹಾಗೂಚುನಾವಣಾಧಿ ಕಾರಿ ಕೆ.ಎನ್.ರಮೇಶ್ ಅವರನ್ನು ಭೇಟಿ ಮಾಡಿನಾಮಪತ್ರ ಸಲ್ಲಿಸಿ ದರು.ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ ಡಿ.ಎನ್. ಜೀವರಾಜ್, ಕಡೂರುಶಾಸಕ ಬೆಳ್ಳಿಪ್ರಕಾಶ್, ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಜೊತೆಯಲ್ಲಿದ್ದರು. ನಾಮಪತ್ರ ಸಲ್ಲಿಸಿ ಜಿಲ್ಲಾ ಧಿಕಾರಿಕಚೇರಿಯಿಂದ ಹೊರ ಬರುತ್ತಿದ್ದಂತೆ ಮುಖಂಡರುಶುಭ ಹಾರೈಸಿದರು.
ಪಕ್ಷದ ಮುಖಂಡರು ಮತ್ತುಕಾರ್ಯಕ ರ್ತರು ಎಂ.ಕೆ. ಪ್ರಾಣೇಶ್ ಪರ ಘೋಷಣೆಕೂಗಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದಎಂ.ಕೆ. ಪ್ರಾಣೇಶ್, ಈ ಚುನಾವಣೆಯಲ್ಲಿ ಮತದಾರರು ನನ್ನನ್ನು 2ನೇ ಬಾರಿ ಗೆಲ್ಲಿಸುವ ವಿಶ್ವಾಸವಿದೆ.ನನ್ನ ಅಧಿ ಕಾರ ಅವ ಧಿಯಲ್ಲಿ ಬೇದಭಾವ ಮಾಡದೆಪûಾತೀತವಾಗಿ ನಡೆದುಕೊಂಡಿದ್ದೇನೆ ಎಂದರು.ನನ್ನ ಅವ ಧಿಯಲ್ಲಿ ಜಿಲ್ಲೆಯ 196 ಗ್ರಾಪಂಗಳಿಗೆಜನರೇಟರ್ ನೀಡಿದ್ದೇನೆ.
ಗ್ರಾಪಂ ಆರ್ಥಿಕ ವಾಗಿಸಬಲರು ಮತ್ತು ದುರ್ಬಲ ಸದಸ್ಯರನ್ನು ಹೊಂದಿರುವಏಕೈಕ ಸ್ಥಳೀಯ ಸಂಸ್ಥೆಯಾಗಿದ್ದು, ಬಿಜೆಪಿ ಸರ್ಕಾರಅಧಿ ಕಾರಕ್ಕೆ ಬಂದ ನಂತರ ಸದಸ್ಯರಿಗೆ ಗೌರವಧನನೀಡುವ ಮೂಲಕ ಆರ್ಥಿಕ ಶಕ್ತಿ ಹಾಗೂ ಕೆಲಸಮಾಡುವ ಹುಮ್ಮಸ್ಸು ತುಂಬುವ ಕೆಲಸ ನಮ್ಮ ಸರ್ಕಾರಮಾಡಿತು ಎಂದರು.ನನ್ನ ಅವ ಧಿಯಲ್ಲಿ ಗ್ರಾಪಂ ಸದಸ್ಯರಿಗೆ ಗೌರವ ಧನಹೆಚ್ಚಿಸಬೇಕೆಂದು ಪರಿಷತ್‌ನಲ್ಲಿ ಹೋರಾಟ ಮಾಡಿದ್ದೆ.ಅದರ ಪ್ರತಿಫಲ 500 ಇದ್ದ ಗೌರವಧನವನ್ನು1,000ರೂ.ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಏರಿಕೆ ಮಾಡಿದರು.
ಇತ್ತೀಚೆಗೆ ನಡೆದ ಸದನದಲ್ಲಿ ಗ್ರಾಪಂ ಸದಸ್ಯರಿಗೆ2,500ರೂ. ಗೌರವಧನ ನೀಡಬೇಕೆಂದು ಆಗ್ರಹಿಸಿದ್ದು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಸಚಿವರು ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದುಮುಂದಿನ ದಿನಗಳಲ್ಲಿ ಗೌರವಧನ ಹೆಚ್ಚಳವಾಗುವವಿಶ್ವಾಸವಿದೆ. ಗ್ರಾಪಂಗಳಲ್ಲಿ ಮೂಲ ಸೌಕರ್ಯಗಳಕೊರತೆ ಇದ್ದು, ಸದಸ್ಯನಾಗಿ ಆಯ್ಕೆಯಾದಲ್ಲಿ ಈ ಬಗ್ಗೆಗಮನ ಹರಿಸುವುದಾಗಿ ತಿಳಿಸಿದರು.ನನ್ನ ಅ ಧಿಕಾರ ಅವಧಿ ಯಲ್ಲಿ ದರ್ಪ ತೋರಿಲ್ಲ,ಎಲ್ಲಾ ಗ್ರಾಪಂ ಸದಸ್ಯರೊಂದಿಗೆ ಸೌರ್ಜನ್ಯದಿಂದನಡೆದುಕೊಂಡಿದ್ದೇನೆ. ಪûಾತೀತವಾಗಿ ಕಂಡಿದ್ದೇನೆ.ನನ್ನ ಇತಿಮಿತಿಯೊಳಗೆ ಕೆಲಸ ಮಾಡಿದ ತೃಪ್ತಿಇದ್ದು, ನನ್ನ ಕೆಲಸವನ್ನು ಗುರುತಿಸಿ ಸರ್ಕಾರಉಪಸಭಾಪತಿಯನ್ನಾಗಿ ಮಾಡಿದ್ದು, ನನ್ನ ಕೆಲಸಕ್ಕೆಸಾಕ್ಷಿಯಾಗಿದೆ ಎಂದರು. ಬಿಜೆಪಿಮುಖಂಡರುಮತ್ತು ಕಾರ್ಯಕರ್ತರು ಇದ್ದರು