Advertisement

ಪ್ರಕರಣ ವಿಲೇ: ಎಸಿ ನ್ಯಾಯಾಲಯ ಮಾದರಿ

05:41 PM Oct 06, 2021 | Team Udayavani |

ಚಿಕ್ಕಮಗಳೂರು: ಅರೆನ್ಯಾಯಿಕ ಪ್ರಕರಣಗಳವಿಲೇವಾರಿಯಲ್ಲಿ ಚಿಕ್ಕಮಗಳೂರುಉಪವಿಭಾಗಾಧಿ ಕಾರಿ ನ್ಯಾಯಾಲಯ ಪ್ರಕರಣಮುಕ್ತ ನ್ಯಾಯಾಲಯವಾಗಿ ಹೊರ ಹೊಮ್ಮುವಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

Advertisement

ಉಪವಿಭಾಗಾ ಧಿಕಾರಿ ನ್ಯಾಯಾಲಯದಲ್ಲಿಇದ್ದ 3,187 ಪ್ರಕರಣಗಳಲ್ಲಿ 3,141 ಪ್ರಕರಣಇತ್ಯರ್ಥಪಡಿಸಿದ್ದು, ಈ ನ್ಯಾಯಾಲಯದ ವ್ಯಾಪ್ತಿಗೆಬಾರದ ಅಂದರೆ, ತಹಶೀಲ್ದಾರ್‌ ನ್ಯಾಯಾಲಯ,ಜಿಲ್ಲಾಧಿ ಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಪ್ರಕರಣ ಹಾಗೂ ಒಂದೇ ಸರ್ವೇ ನಂಬರಿಗೆ ಸೇರಿ2 ಬಾರಿ ಅರ್ಜಿ ಸಲ್ಲಿಸಿದ 46 ಪ್ರಕರಣಗಳನ್ನುತಿರಸ್ಕರಿಸಲಾಗಿದೆ.

ಅನೇಕ ವರ್ಷಗಳಿಂದ ಪ್ರಕರಣಶೀಘ್ರ ಇತ್ಯರ್ಥಗೊಳ್ಳದೆ ರೈತರು ದಿನನಿತ್ಯಕಂದಾಯ ಇಲಾಖೆಗೆ ಅಲೆಯುವ ಪರಿಸ್ಥಿತಿನಿರ್ಮಾಣವಾಗಿತ್ತು. ಆದರೆ, ಚಿಕ್ಕಮಗಳೂರುಉಪ ವಿಭಾಗಾಧಿ ಕಾರಿ ನ್ಯಾಯಾಲಯ 2021ನ.4ರ ಪೂರ್ವದಲ್ಲಿ ಎಲ್ಲ ಹಳೆಯ ಅರೆನ್ಯಾಯಿಕಪ್ರಕರಣಗಳನ್ನು ಇತ್ಯರ್ಥಗೊಳಿಸಿ ರಾಜ್ಯಕ್ಕೆ ಮಾದರಿನ್ಯಾಯಾಲಯ ಎನಿಸಿಕೊಂಡಿದೆ.

ಈ ಸಾಧನೆಯಹಿಂದೆ ಉಪ ವಿಭಾಗಾ ಧಿಕಾರಿ ಡಾ| ಎಚ್‌.ಎಲ್‌.ನಾಗರಾಜ್‌ ಅವರ ನಿರಂತರ ಪರಿಶ್ರಮವಿದೆ.ಡಾ| ಎಚ್‌.ಎಲ್‌. ನಾಗರಾಜ್‌ ಅವರು 2019,ನ. 4ರಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಯಾಗಿ ಅ ಧಿಕಾರ ವಹಿಸಿಕೊಂಡರು.

ಅಲ್ಲಿಂದ ಪಿಟಿಸಿಎಲ್‌ಗೆ ಸಂಬಂ ಧಿಸಿದ 2,150ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಲ್ಲದೆಪಹಣಿ ತಿದ್ದುಪಡಿ ಸಂಬಂಧ 1,150 ಪ್ರಕರಣಇತ್ಯರ್ಥಗೊಳಿಸಿದ್ದಾರೆ. 2002 ಮತ್ತು 2008ರಲ್ಲಿನಹಳೆಯ ಪ್ರಕರಣಗಳಿಗೂ ಮುಕ್ತಿ ನೀಡಿದ್ದಾರೆ.

Advertisement

ಆರ್‌ಆರ್‌ಟಿ ಪ್ರಕರಣ 2,321 ಮತ್ತು ಆರ್‌ಆರ್‌ಟಿ ರಹಿತ 866 ಪ್ರಕರಣಗಳು ಸೇರಿದಂತೆಒಟ್ಟು 3,187 ಪ್ರಕರಣಗಳಲ್ಲಿ 3,141ಪ್ರಕರಣಗಳನ್ನು ಇತ್ಯರ್ಥಪಡಿಸುವಮೂಲಕ ರಾಜ್ಯದಲ್ಲೇ ಚಿಕ್ಕಮಗಳೂರು ಉಪ ವಿಭಾಗಾ ಧಿಕಾರಿ ನ್ಯಾಯಾಲಯ ಮೊದಲಸ್ಥಾನ ಪಡೆದಂತಾಗಿದೆ.

ತಹಶೀಲ್ದಾರ್‌, ಉಪವಿಭಾಗಾಧಿ ಕಾರಿ ಹಾಗೂಜಿಲ್ಲಾ ಧಿಕಾರಿ ನ್ಯಾಯಾಲಯದಲ್ಲಿ ಅನೇಕವರ್ಷಗಳಿಂದ ಉಳಿದಿರುವ ಪ್ರಕರಣಗಳನ್ನುಶೀಘ್ರವೇ ಬಗೆಹರಿಸುವಂತೆ ಹೈಕೋರ್ಟ್‌ಆದೇಶ ನೀಡಿದೆ.

ರಾಜ್ಯ ಸರ್ಕಾರ ತಹಶೀಲ್ದಾರ್‌ನ್ಯಾಯಾಲಯದಲ್ಲಿ 3 ತಿಂಗಳು, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಧಿಕಾರಿ ಕಚೇರಿಯಲ್ಲಿ6 ತಿಂಗಳ ಮೇಲೆ ಯಾವುದೇ ಜಮೀನುಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದಂತೆ ಸೂಚನೆನೀಡಿತ್ತು.

ಸರ್ಕಾರದ ಸೂಚನೆ ಪಾಲಿಸಿಕೊಂಡು ಬಂದ ಉಪವಿಭಾಗಾ ದಿಕಾರಿ ಡಾ| ಎಚ್‌.ಎಲ್‌.ನಾಗರಾಜ್‌ ವಾರಕ್ಕೆ 2-3 ದಿನಗಳ ಕಾಲಕಡ್ಡಾಯವಾಗಿ ವಿಚಾರಣೆ ನಡೆಸಿ ಹಳೆಯಪ್ರಕರಣಗಳಿಗೆ ನೋಟಿಸ್‌ ನೀಡುವ ಮೂಲಕ ಆದ್ಯತೆ ಮೇಲೆ ಬಗೆಹರಿಸಿದ್ದರಿಂದ ಅ.4ಕ್ಕೆಯಾವುದೇ ಪ್ರಕರಣಗಳು ಬಾಕಿ ಇಲ್ಲದಂತೆ ಬಗೆಹರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಹಾಗೂರೈತರಿಗಾಗುತ್ತಿದ್ದ ಕಿರಿಕಿರಿ ತಪ್ಪಿದಾಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next