ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಲಿದೆ. ಆದರೆ ಜೆಡಿಎಸ್ ಪಕ್ಷದಿಂದ ಗೆದ್ದ ಇಬ್ಬರು ಸದಸ್ಯರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮುಕ್ತ ಮುನಿಯಪ್ಪ ತಮ್ಮ ಅಳಲು ತೋಡಿಕೊಂಡರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅವರು ಯಾವೋದೋ ಒತ್ತಡಕ್ಕೆ ಮಣಿದು ಎಲ್ಲಿ
ಇದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಅವರು ಎಲ್ಲಿಯೆ ಇರಲಿ, ಬಿಜೆಪಿ, ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಗಳಿಗೆ ನಗರಸಭಾ ಚುನಾವಣೆಯಲ್ಲಿ ಮತ ಹಾಕುತ್ತಾರೆಂಬ ವಿಶ್ವಾಸ ಇದೆ’ ಎಂದರು.
‘ಜೆಡಿ ಎಸ್ ಪಕ್ಷದ ಸದಸ್ಯರಾದ ಆರ್.ಮಟಮಪ್ಪ ಹಾಗೂ ವೀಣಾ ರಾಮು ಅವರು ಸಾಕಷ್ಡು ಬಾರಿ ಕಾಂಗ್ರೆಸ್ ವಿರುದ್ದ ಮಾತನಾಡಿದ್ದಾರೆ. ಆದ್ದರಿಂದ ಈಗಲೇ ಎನ್ ಡಿಎ ಅಭ್ಯರ್ಥಿಗಳ ಪರವಾಗಿ ಇಬ್ಬರು ಮತ ಚಲಾಯಿಸುವ ವಿಶ್ವಾಸ ಇದೆ. ಆದರೆ ಮೂರು ದಿನದಿಂದ ಅವರು ಸಂಪರ್ಕದಲ್ಲಿ ಇಲ್ಲ’ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಕರ.ಆರ್.ರೆಡ್ಡಿ, ಮುಖಂಡರಾದ ಕಿಸಾನ್ ಕೃಷ್ಣಪ್ಪ, ದಿನೇಶ್, ನಾಗರಾಜ್, ಹನುಮಂತಪ್ಪ, ತಮ್ಮನಾಯಕನಹಳ್ಳಿ ವೆಂಕಟೇಶ, ಶಿಲ್ಪಗೌಡ ಸರಿದಂತೆ ಮತ್ತಿತರರು ಇದ್ದರು.