Advertisement
ರಾಜಕೀಯವಾಗಿ ಪ್ರಬಲ ಅಹಿಂದ ನಾಯಕ ಆರ್.ಎಲ್.ಜಾಲಪ್ಪ 4 ಬಾರಿ ಸಂಸದರಾಗಿದ್ದ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ರಾಜಕೀಯ ಪುನರ್ ಜನ್ಮ ಕೊಟ್ಟ ಕ್ಷೇತ್ರವಿದು.
Related Articles
ಕ್ಷೇತ್ರದಲ್ಲಿ ರಾಜಕೀಯವಾಗಿ ಒಕ್ಕಲಿಗರು, ಬಲಿಜಿಗರು ಪ್ರಾಬಲ್ಯ ಹೊಂದಿದ್ದಾರೆ. ಆದರೆ ಇಲ್ಲಿ ಬಹುತೇಕರು ಅಹಿಂದ ವರ್ಗದ ಅಲ್ಪಸಂಖ್ಯಾಕರೇ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಮೊದಲ ಹಾಗೂ ಕಳೆದ ಚುನಾವಣೆಯಲ್ಲಿ ಎಂ.ವಿ. ಕೃಷ್ಣಪ್ಪ ಮತ್ತು ಬಿ.ಎನ್. ಬಚ್ಚೇಗೌಡರಂಥ ಒಕ್ಕಲಿಗರು ಗೆದ್ದಿದ್ದು ಬಿಟ್ಟರೆ, ಉಳಿದಂತೆ ವಿ.ಕೃಷ್ಣರಾವ್, ಪ್ರಸನ್ನಕುಮಾರ್, ಆರ್.ಎಲ್.ಜಾಲಪ್ಪ, ವೀರಪ್ಪ ಮೊಲಿ ಹಲವು ಬಾರಿ ಸಂಸದರಾಗಿದ್ದಾರೆ. ವಿಶೇಷ ಅಂದರೆ ಕ್ಷೇತ್ರದಲ್ಲಿ ವಿ.ಕೃಷ್ಣ ರಾವ್ (1984ರಿಂದ 1991) ಹಾಗೂ ಜಾಲಪ್ಪ 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಬಳಿಕ 1998ರಿಂದ 2004ರ ವರೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2009, 2014ರಲ್ಲಿ ಮೊಯ್ಲಿ ಸತತ ಗೆಲುವು ಪಡೆದರು. ಆದರೆ 2019ರಲ್ಲಿ 3ನೇ ಬಾರಿಗೆ ಗೆಲುವು ಪಡೆಯಲಾಗಲಿಲ್ಲ.
Advertisement
ಪಕ್ಷಗಳ ಬಲಾಬಲಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಯಲಹಂಕ ಹಾಗೂ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ಕಳೆದ ಚುನಾವಣೆಯಲ್ಲಿ ಯಲಹಂಕದಲ್ಲಿ ಮಾತ್ರ ಶಾಸಕರನ್ನು ಹೊಂದಿ ಬಿಜೆಪಿ ಇಡೀ ಲೋಕಸಭಾ ಕ್ಷೇತ್ರವನ್ನು ಗೆದ್ದಿಕೊಂಡಿತು. ಈ ಕ್ಷೇತ್ರ ಕಾಂಗ್ರೆಸ್ ಕೋಟೆ. ಒಂದು ಕಾಲಕ್ಕೆ ಎಡಪಕ್ಷಗಳ ಪ್ರಭಾವದಿಂದ ಇಲ್ಲಿ ಬಿಜೆಪಿ ರಾಜಕೀಯವಾಗಿ ನೆಲೆಯೂರಲು ಸಾಧ್ಯವಾಗಿರಲಿಲ್ಲ. ಮೋದಿ ನಾಮಬಲ ಹಾಗೂ ಮೊಲಿ ವಿರುದ್ಧದ ಅಲೆಯಿಂದ 2019ರಲ್ಲಿ ಗೆದ್ದ ಬಿಜೆಪಿ ಈಗ ಮತ್ತೆ ಅದೇ ಮೋದಿ ಅಲೆಯನ್ನು ನೆಚ್ಚಿಕೊಂಡಿದೆ. ಕಾಂಗ್ರೆಸ್ ಈ ಬಾರಿ 8ರ ಪೈಕಿ 7 ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿದೆ. ಜಾತಿ ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಅಹಿಂದ ವರ್ಗ ಹೆಚ್ಚು ಪ್ರಾಬಲ್ಯ ಹೊಂದಿತ್ತು. ಇತ್ತೀಚೆಗೆ ಒಕ್ಕಲಿಗರ ಪ್ರಾಬಲ್ಯ ರಾಜಕೀಯವಾಗಿ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಕ್ಕಿಂತ ಇಲ್ಲಿ ಪಕ್ಷ ರಾಜಕಾರಣವೇ ಸದಾ ಮೇಲುಗೈ ಸಾಧಿಸುತ್ತಿದೆ. – ಕಾಗತಿ ನಾಗರಾಜಪ್ಪ