Advertisement
ದೇವಾಲಯಗಳ ಬೀಡು ಚಿಂತಾಮಣಿನೆರೆಯ ಆಂಧ್ರಪ್ರದೇಶದ ಅಂಚಿಗೆ ಆನಿಕೊಂಡಿರುವ ವ್ಯವಹಾರಿಕ ನಾಡು ಚಿಂತಾಮಣಿ. ಇಲ್ಲಿನ ಮೂಡಣಬಾಗಿಲು, ಶತಶೃಂಗ ಪರ್ವತಗಳು, ಕುರುಡುಮಲೈ, ನಂದೀದುರ್ಗ, ವಿದುರಾಶ್ವತ ಮಹಾಕ್ಷೇತ್ರಗಳ ಮಧ್ಯೆ ಪೂರ್ಣಚಂದ್ರ ತೇಜಸ್ಸಿನಂತೆ ಕಂಗೋಳಿಸುತ್ತಿರುವುದೇ ಗುಡಿ ‘ಆಲಂಬಗಿರಿ’.
ಚಿಂತಾಮಣಿ ನಗರದ ದಕ್ಷಿಣ ದಿಕ್ಕಿಗೆ 6 ಕಿಲೋ ಮೀಟರ್‌ಗಳ ದೂರದಲ್ಲಿರುವ ಆಲಂಬಗಿರಿ ಗ್ರಾಮ, ಕೈವಾರ ಕ್ಷೇತ್ರಕ್ಕೆ 10 ಕಿ.ಮೀ.ಗಳು ಹಾಗೂ ಚಿನ್ನಸಂದ್ರಕ್ಕೆ 3 ಕಿ.ಮೀ.ಗಳ ಅಂತರದಲ್ಲಿದೆ. ಹಸಿರು ಬನಸಿರಿಯ ಮಡಿಲಲ್ಲಿ, ನಿಸರ್ಗ ಸಂಪತ್ತಿನ ಮಹಾನ್‌ಗುಡಿಯಲ್ಲಿ ಗಿರಿಕಂದರಗಳ ಮಧ್ಯೆ, ಗಂಧರ್ವ ಕಲೆಗಳ ಬೀಡಾಗಿದೆ ಆಲಂಬಗಿರಿ ಕ್ಷೇತ್ರ. ಪೂರ್ವಕ್ಕೆ ಮನಸೆಳೆವ ಕುರುಬೂರು ಬೆಟ್ಟಗಳ ಸಾಲು, ಪಶ್ಚಿಮಕ್ಕೆ ಮಡಬಹಳ್ಳಿ ತಿಟ್ಟುಗಳು, ಕಾಡು ಕೊಂಗನಹಳ್ಳಿ (ಚನ್ನಕೇಶವಪುರ) ದಿಣ್ಣೆ, ಮೈಲಾರಪುರ ಗಿರಿಶಿಖರಗಳ ನಡುವೆ ವರ್ಷ ಪೂರ್ತಿ ಬತ್ತದಿರುವ ವೆಂಕಟತೀರ್ಥ (ಚಿಲುಮೆ) ಪ್ರಕೃತಿಯ ವಿಸ್ಮಯಗಳÇÉೊಂದೆನಿಸಿದೆ.
ಆಲಂಬಗಿರಿ ಗ್ರಾಮದ ನೈರುತ್ಯಕ್ಕಿರುವ ಬೆಟ್ಟ-ಗುಡ್ಡಗಳನ್ನು ಆಧ್ಯಾತ್ಮಿಕ ಕೋನದಲ್ಲಿ ಗಮನಿಸಿದಾಗ ಶ್ರೀ ವೆಂಕಟೇಶ್ವರ ಸ್ವಾಮಿಯ ನಾಮದಂತೆ ಕಂಗೊಳಿಸುತ್ತವೆ. ಈ ಬೆಟ್ಟದಲ್ಲಿ ಶ್ರೀ ಕಲ್ಕಿ ವೆಂಕಟರಮಣ ಸ್ವಾಮಿ (ಶ್ರೀಮನ್ನಾರಾಯಣ) ತಪೋಧ್ಯಾನದಿಂದ ಬಳಲಿದ್ದಾ ಗ ಕುಡಿಯಲು ನೀರು ಕಾಣದೆ ಪರಿತಪಿಸುತ್ತಿದ್ದರಂತೆ. ಆಗ ಸಾಕ್ಷಾತ್ ಪರಶಿವ, ಪರಮೇಶ್ವರ (ಶ್ರೀ ಗುರುಸ್ವರೂಪಿ ಗುರುಮೂರ್ತೇಶ್ವರ ಸ್ವಾಮಿ) ಪ್ರತ್ಯಕ್ಷನಾಗಿ ನಾರಾಯಣ ಸ್ವರೂಪ ಶ್ರೀ ವೆಂಕಟರಮಣನಿಗೆ ತನ್ನ ಜಟೆಯಲ್ಲಿದ್ದ ಗಂಗೆಯನ್ನು ನೀಡಿದ್ದರೆಂಬ ಪ್ರತೀತಿ ಇದೆ. ಅದರ ಕುರುಹಾಗಿದೆ ಇಲ್ಲಿರುವ ಸದಾ ಬತ್ತದ ವೆಂಕಟತೀರ್ಥ ಚಿಲುಮೆ. ಈ ಅಧ್ಯಾತ್ಮ ಸತ್ಯದ ಕುರುಹು ಎನ್ನುವಂತೆ ಬೆಟ್ಟಕ್ಕೆ ಅನಿಕೊಂಡಂತೆ ನಿರ್ಮಿಸಿರುವ ಶಂಕು ಮತ್ತು ಚಕ್ರ ಇಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಪವಾಡ ಸದೃಶ ಶ್ರೀ ಗುರುಮೂರ್ತೇಶ್ವರ ಸ್ವಾಮಿ
ಸಾಕ್ಷಾತ್ ಗುರು ಸ್ವರೂಪನಾದ ಗುರುಮೂರ್ತೇಶ್ವರ ಸ್ವಾಮಿ ದೇವಾಲಯ ಎರಡೂವರೆ ದಶಕಗಳ ಹಿಂದೆ ಆಲಂಬಗಿರಿಯಲ್ಲಿ ಸ್ಥಾಪನೆಗೊಂಡಿದ್ದೇ ಒಂದು ಪವಾಡ. ಗ್ರಾಮದ ಈಶಾನ್ಯದಲ್ಲಿ ಈಶ್ವರ ನೆಲೆಸಿದ ನಂತರ ದೈವದತ್ತವಾಗಿ ವಾಸ್ತುಪುರುಷ ಜಾಗೃತನಾಗಿ ಗ್ರಾಮದ ಅಭಿವೃದ್ಧಿಗೆ ಆಸ್ಪದ ನೀಡಿದ ಎನ್ನುವುದರಲ್ಲಿ ಅತಿಶಯೋಕ್ತಿಯಲ್ಲ. ಇಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಕಲ್ಕಿ ವೆಂಕಟರಮಣ ಸ್ವಾಮಿ ದೇವಾಲಯ ಜೀಣೋದ್ಧಾರ ಕಾರ್ಯ ನಡೆದು ವೈಭವದಿಂದ ಮೆರೆಯುತ್ತಿರುವುದೆ ಸ್ಪಷ್ಟ ಚಿತ್ರಣ.
Related Articles
Advertisement
ಅದ್ಧೂರಿ ಬ್ರಹ್ಮರಥೋತ್ಸವಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಕ್ತಾದಿಗಳಿಗೆ ಇರುವುದೆಂದೇ ಶ್ರೀ ಗುರುಮೂತೇಶ್ವರ. ದೂರದ ಊರುಗಳಿಂದ ಬಂದು ತಮ್ಮ ಹರಕೆ ತೀರಿಸಿ ಶ್ರೀ ಗುರುಮೂತೇìಶ್ವರ ಸ್ವಾಮಿ ಮತ್ತು ಪ್ರಸನ್ನ ಪಾರ್ವತಾಂಬೆಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಪ್ರತಿ ಸಲದಂತೆ ಈ ಬಾರಿ ಶಿವರಾತ್ರಿ ಪೂಜಾ ವಿಧಿ ವಿಧಾನಗಳು ಫೆ.23 ರಿಂದ ಆರಂಭವಾಗಿ ಫೆ.28ರಂದು ಮುಗಿಯಲಿವೆ. ಪ್ರಮುಖವಾಗಿ 24 ರಂದು ಶಿವರಾತ್ರಿ ಅಭಿಷೇಕ ಪೂಜೆಗಳಾದರೆ ಬ್ರಹ್ಮರಥೋತ್ಸವ ಮಾಘ ಬಹುಳ ಚತುರ್ದಶಿ ಶನಿವಾರ ಫೆ.25 ರಂದು ನಡೆಯಲಿದೆ ಎಂದು ಪ್ರಧಾನ ಅರ್ಚಕ ಸತ್ಯನಾರಾಯಣ ಶರ್ಮ ಹೇಳುತ್ತಾರೆ. ಗೋಪಾಲ್ ತಿಮ್ಮಯ್ಯ