Advertisement

Chikal Kalo Festival ಗೋವಾದಲ್ಲಿ ಸಂಭ್ರಮದ ಆಚರಣೆ

02:49 PM Jun 29, 2023 | Team Udayavani |

ಪಣಜಿ: ಗೋವಾದ ಮಾರ್ಶೆಲ್‍ ನ ಶ್ರೀ ದೇವಕಿ ಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಅಂಗವಾಗಿ ಪ್ರತಿ ವರ್ಷ ಪದ್ಧತಿಯಂತೆಯೇ ಚಿಕಲ್ ಕಾಲೋ ಉತ್ಸವವನ್ನು ಆಚರಿಸಲಾಯಿತು.  ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸಿ ಪಾಲ್ಗೊಂಡರು.

Advertisement

ಚಿಕಲ್ ಕಾಲೋ ಉತ್ಸವದ ಸಂಪ್ರದಾಯವು 400 ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತದೆ. ಆರಂಭದಲ್ಲಿ, ಗೋವಾದ ಚೋಡನ್‍ನಲ್ಲಿ ಹಬ್ಬವನ್ನು ಆಚರಿಸಲಾಯಿತು. ಆದರೆ ನಂತರ ಇದನ್ನು ಮಾರ್ಶೆಲ್‍ ನ ಶ್ರೀ ದೇವಕಿ ಕೃಷ್ಣ ದೇವಸ್ಥಾನದಲ್ಲಿ ಆಚರಿಸಲಾಯಿತು. ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯಲ್ಲಿ ಉತ್ಸವವು ದೇವಾಲಯದ ಜತೆಗೆ ಸ್ಥಳಾಂತರಗೊಂಡಿತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ಹಬ್ಬ ಯಾವಾಗ ಆರಂಭವಾಗುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ ಎನ್ನುತ್ತಾರೆ ಸ್ಥಳೀಯರು.

ಸರಳವಾಗಿ ಹೇಳುವುದಾದರೆ,  ಈ ಸಮಯದಲ್ಲಿ ಅನೇಕ ಮನರಂಜನೆಯ ಆಟಗಳನ್ನು ಆಡಲಾಗುತ್ತದೆ. ಹಾಗೂ ‘ಜೈ ವಿಠ್ಠಲ್, ಹರಿ ವಿಠ್ಠಲ್’ ಘೋಷಣೆ ಮೊಳಗುತ್ತದೆ.


ಆಷಾಢ ಏಕಾದಶಿಯಂದು ಚಿಕಲ್ ಕಾಲೋ ಉತ್ಸವವನ್ನು ಮಾರ್ಶೆಲ್‍ ನ ದೇವಕಿ ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಆಚರಿಸಲಾಯಿತು. ಆಷಾಢ ಏಕಾದಶಿಯಂದು ಮಾರ್ಶೆಲ್‍ ನಲ್ಲಿರುವ ಶ್ರೀ ದೇವಕಿ ಕೃಷ್ಣ ದೇವಸ್ಥಾನದಲ್ಲಿ ಆರತಿ ಮಾಡಲಾಗುತ್ತದೆ. 24 ಗಂಟೆಗಳ ನಂತರ, ದೇವಾಲಯದ ಎದುರಿನ ಮೈದಾನದಲ್ಲಿ ಚಿಕಲ್ ಕಾಲೋ ಉತ್ಸವ ನಡೆಯುತ್ತದೆ. ಎಲ್ಲಾ ಪುರುಷರು, ಯುವಕರು, ಹಿರಿಯರು ಮತ್ತು ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ.  ಹಾಫ್ ಪ್ಯಾಂಟ್ ನಲ್ಲಿ ದೇಹಕ್ಕೆ ಎಣ್ಣೆ ಹಚ್ಚಿ ಕೆಸರಿನಲ್ಲಿ ಉರುಳುವ ಹಬ್ಬವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next