Advertisement

ಪರಿಸರ ಕಾಳಜಿಗೆ ಚಿಗುರು ಚಿಂತನೆ

06:44 AM Jun 13, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಪರಿಸರ ಮಹತ್ವದ ಕುರಿತು ಅರಿವು ಮೂಡಿಸಲು ಜಿಪಂ ಸಹಯೋಗದೊಂದಿಗೆ ಮಕ್ಕಳಿಗಾಗಿ “ಚಿಗುರು ಚಿಂತನೆ” ಸ್ಪರ್ಧೆ ಏರ್ಪಡಿಸಲಾಗಿದೆ  ಎಂದು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಪಂ ಸಹಯೋಗದೊಂದಿಗೆ ರೂಪಿಸಿರುವ ಚಿಗುರು ಚಿಂತನೆ ಕಾರ್ಯಕ್ರಮದ ಪೋಸ್ಟರ್‌  ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿಯೊಂದು ಶಾಲೆಯಲ್ಲಿಯೂ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಲ್ಲಿನ ಸ್ವತ್ಛ ಮತ್ತು ಹಸಿರು ಚಿಕ್ಕಬಳ್ಳಾಪುರದ ಬಗ್ಗೆ ಹೊಸ ಕಲ್ಪನೆ ಅರಿತು ಚಿತ್ರೀಕರಣ ಮಾಡಿ ಎಂದರು.

ಬಹುಮಾನ ಎಷ್ಟು?: ಶಿಕ್ಷಕರು ಆಸಕ್ತಿಯಿರುವ ಮಕ್ಕಳಿಗೆ ಅವಕಾಶ ನೀಡಬೇಕು, ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ.5,000, ದ್ವಿತೀಯ 3000 ರೂ. ಹಾಗೂ ತೃತೀಯ ಬಹುಮಾನವಾಗಿ 2000 ರೂ. ನೀಡಲಾಗುವುದು ಎಂದು  ವಿದ್ಯಾರ್ಥಿಗಳಿಗೆ ತಿಳಿಸಿ  ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕುಎಂದರು. ಶಾಲೆಗಳಲ್ಲಿ ಸಸಿಗಳನ್ನು ನೆಡಬೇಕು ಮತ್ತು ಬಿಸಿಯೂಟಕ್ಕೆ ಸಂಬಂಧಿಸಿದ ಸೊಪ್ಪು ತರಕಾರಿಗಳ ಕೈತೋಟ ಬೆಳೆಸಲು ಪ್ರೋತ್ಸಾಹ ನೀಡಬೇಕು.

ನರೇಗಾ ಯೋಜನೆಯಡಿ ಬರುವಂತಹ ಯೋಜನೆಗಳ  ಮೂಲಕ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ನಿರ್ಮಿಸಲು ಒತ್ತು ನೀಡಿ ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಶ್‌, ಅಧಿಕಾರಿಗಳಾದ  ಶಿವಲಿಂಗಯ್ಯ, ಲಕ್ಷ್ಮಿಕಾಂತ್‌, ಮಹಮದ್‌ ಖಲೀಲ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next