Advertisement

ಮುಖ್ಯಮಂತ್ರಿ ಸಿದರಾಮಯ್ಯ ಅವರಿಗೆ ಸಮ್ಮಾನ 

12:58 PM Jan 08, 2018 | |

ಬೆಳ್ತಂಗಡಿ: ಐದು ಬಾರಿ ಶಾಸಕರಾದ ಕೆ. ವಸಂತ ಬಂಗೇರ ಅವರು ಜಿಲ್ಲೆಯ ಹಿರಿಯ ನಾಯಕ. ಸದಾ ಕ್ಷೇತ್ರದ ಕುರಿತೇ ಚಿಂತಿಸುವ, ಮುಲಾಜಿಲ್ಲದ, ನೇರ ನುಡಿಯ, ಹೊಗಳಿಕೆಯ ಮಾತಿಲ್ಲದ, ಸ್ವಾರ್ಥವಿಲ್ಲದ ಪ್ರಾಮಾಣಿಕ ರಾಜಕಾರಣಿ. ಆದ್ದರಿಂದ ಈ ಬಾರಿಯೂ ಅವರನ್ನೇ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅವರು ರವಿವಾರ ತಾ| ಕ್ರೀಡಾಂಗಣದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಸಂತ ಬಂಗೇರ ಮಾಡಿದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

Advertisement

1983ರಿಂದ ನಾನು ಬಂಗೇರರನ್ನು ನೋಡುತ್ತಿದ್ದೇನೆ. ನಾನು ಮತ್ತು ಬಂಗೇರ ಒಂದೇ ಅವಧಿಯಲ್ಲಿ ವಿಧಾನಸಭೆ ಪ್ರವೇಶಿಸಿದ್ದು. ಉತ್ತಮ ಸ್ನೇಹಿತ, ವಿಶ್ವಾಸ, ನಂಬಿಕೆಗೆ ಅರ್ಹ ವ್ಯಕ್ತಿ. ಬಂಗೇರರೇ ಜನರಿಗೆ ಆಸ್ತಿ ಎಂದು ತಿಳಿಸಿದರು.

ಬಹಳ ದಿನಗಳಿಂದ ಬೆಳ್ತಂಗಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು. ಅಂತೆಯೇ ಇಂದು ಬಂದಿದ್ದೇನೆ. 500
ಕೋ. ರೂ. ಕೇಳಿದ್ದಾರೆ, 100 ಕೋ. ರೂ. ಆದರೂ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಕೊಡುವುದಾಗಿ ಭರವಸೆ ಕೊಟ್ಟಿದ್ದೇನೆ. ಇಂಥವರು ಶಾಸಕರಾಗದೇ ಇನ್ನು ಯಾರು ಆಗಬೇಕು. ದ.ಕ.ದ ಹಿರಿಯ ನಾಯಕ ಮಂತ್ರಿಯಾಗಬೇಕಿತ್ತು. ಈ ಸಲ ಗೆಲ್ಲಿಸಿ. ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು. ಆದರೆ ನಾನೇ ಒತ್ತಾಯ ಮಾಡಿ ಒಪ್ಪಿಸಿದ್ದೇನೆ. ಅವರು ಹೇಳಿದ ಎಲ್ಲ ಕೆಲಸ ಮಾಡಿ ಕೊಡುತ್ತೇನೆ. ಅವರ ಯಾವುದೇ ಕಡತಗಳನ್ನು ಹಿಂದಿರುಗಿಸಿಲ್ಲ ಎಂದರು.

ಸಿಎಂಗೆ ಸಮ್ಮಾನ
ಸಮಾರಂಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ಜಿಲ್ಲಾ ವಿಭಾಗ ಅಧ್ಯಕ್ಷ ಪಿ. ಧರಣೇಂದ್ರ ಕುಮಾರ್‌, ತಾಲೂಕಿನ ಎಚ್‌. ಪದ್ಮಕುಮಾರ್‌ ಮೊದಲಾದವರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿಯ ಖಡ್ಗವನ್ನು ಯಾತ್ರೆಯ ವಿಜಯವನ್ನು ಹಾರೈಸಿ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘದ ಪರವಾಗಿ ಪ್ರಕಾಶ್‌ ಶೆಟ್ಟಿ ನೊಚ್ಚ, ಪುರುಷೋತ್ತಮ್‌ ಅವರು ಸಮ್ಮಾನಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಸಚಿವರಾದ ಬಿ. ರಮಾನಾಥ ರೈ,ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಕೆ. ಪ್ರತಾಪಚಂದ್ರ ಶೆಟ್ಟಿ, ಸುಜಿತಾ ವಿ. ಬಂಗೇರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಬಿ.ಎಚ್‌. ಖಾದರ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ವಿ. ಕಿಣಿ, ಜಿ.ಪಂ. ಸದಸ್ಯರಾದ ಸಾಹುಲ್‌ ಹಮೀದ್‌ ಕೆ.ಕೆ., ಪಿ. ಧರಣೇಂದ್ರ ಕುಮಾರ್‌, ಶೇಖರ ಕುಕ್ಕೇಡಿ, ನಮಿತಾ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾದ ಜಯಶೀಲಾ ಶಿರ್ಲಾಲು, ಕೇಶವತಿ ತಣ್ಣೀರುಪಂತ, ಓಬಯ್ಯ ಹೊಸಂಗಡಿ, ಪ್ರವೀಣ್‌ ಗೌಡ ಕಳಿಯ, ರೂಪಲತಾ ನಾರಾವಿ, ಸುಜಾತಾ ರೈ, ಸುಶೀಲಾ ಪಡಂಗಡಿ, ಸೆಬಾಸ್ಟಿಯನ್‌ ವಿ.ಟಿ., ವಿನುಷಾ ಅಳದಂಗಡಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌, ಉಪಾಧ್ಯಕ್ಷ ಜಗದೀಶ್‌ ಡಿ., ಸದಸ್ಯರಾದ ಸಂತೋಷ್‌ ಕುಮಾರ್‌ ಜೈನ್‌, ಮಮತಾ ವಿ. ಶೆಟ್ಟಿ, ಮುಸ್ತರ್‌ಜಾನ್‌ ಮೆಹಬೂಬ್‌, ಎಪಿಎಂಸಿ ಅಧ್ಯಕ್ಷ ಸತೀಶ್‌ ಕೆ. ಕಾಶಿಪಟ್ಣ, ಪಕ್ಷದ ಮುಖಂಡರಾದ ಮಮತಾ ಗಟ್ಟಿ, ರಾಜಶೇಖರ ಕೋಟ್ಯಾನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿನಂದನ್‌ ಹರೀಶ್‌ ಕುಮಾರ್‌, ಕೆ. ಎಸ್‌. ಯೋಗೀಶ್‌
ಕುಮಾರ್‌ ನಡಕರ, ಎಚ್‌. ಪದ್ಮಕುಮಾರ್‌, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ ಭಾಗವಹಿಸಿದ್ದರು. ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

Advertisement

ಗೈರಾದವರು
ಕಾಗೋಡು ತಿಮ್ಮಪ್ಪ, ರಾಮಲಿಂಗಾ ರೆಡ್ಡಿ, ಎಚ್‌. ಕೆ. ಪಾಟೀಲ್‌, ಟಿ.ಬಿ. ಜಯಚಂದ್ರ, ಡಾ| ಎಚ್‌.ಸಿ. ಮಹದೇವಪ್ಪ, ಡಿ.ಕೆ. ಶಿವಕುಮಾರ್‌, ಈಶ್ವರ ಬಿ. ಖಂಡ್ರೆ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕರಾದ ಕೆ. ಅಭಯಚಂದ್ರ, ಶಕುಂತಲಾ ಶೆಟ್ಟಿ, ಜೆ. ಆರ್‌. ಲೋಬೋ, ಎಸ್‌. ಅಂಗಾರ, ಬಿ.ಎ. ಮೊದಿನ್‌ ಬಾವಾ, ಕ್ಯಾ| ಗಣೇಶ್‌ ಕಾರ್ಣಿಕ್‌, ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಗೈರು ಹಾಜರಾಗಿದ್ದರು.

ಸಿಎಂ ಚಾಲನೆ ನೀಡಿದ ಅಭಿವೃದ್ಧಿ ಯೋಜನೆಗಳು
ಉದ್ಘಾಟನೆ

13 ಕೋ. ರೂ. ವೆಚ್ಚದ ಬೆಳ್ತಂಗಡಿ ನಗರಕ್ಕೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ, 8 ಕೋ.ರೂ. ವೆಚ್ಚದ ಬೆಳ್ತಂಗಡಿ ಮಿನಿ ವಿಧಾನಸೌಧ ಕಟ್ಟಡ, ರೂ. 371.55 ಲಕ್ಷದ ನಮ್ಮ ಗ್ರಾಮ ನಮ್ಮ ರಸ್ತೆ
ಯೋಜನೆಯಡಿ ಇಂದಬೆಟ್ಟು ಗ್ರಾಮದ ಗುರಿಪಲ್ಲ ಬೊಲ್ಲಾಜೆ ರಸ್ತೆ ಅಭಿವೃದ್ಧಿ, ರೂ. 313.40 ಲಕ್ಷದ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪಾಲೇದು ಕುದ್ರಡ್ಕ ರಸ್ತೆ ಅಭಿವೃದ್ಧಿ, ರೂ. 179 ಲಕ್ಷದ ಬೆಳ್ತಂಗಡಿ
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 1,000 ಮೆ. ಟನ್‌ ಸಾಮರ್ಥ್ಯದ ಗೋದಾಮು ಕಟ್ಟಡ ಹಾಗೂ
ಮೂಲ ಸೌಕರ್ಯ ಒದಗಿಸುವ ಕಾಮಗಾರಿ, ರೂ. 125 ಲಕ್ಷ ನಬಾರ್ಡ್‌ ಯೋಜನೆಯಡಿ ಬಂದಾರು
ಗ್ರಾಮದ ಪುತ್ತಿಲ ಮೈರೊಲ್ತಡ್ಕ ರಸ್ತೆಯ ಪುತ್ತಿಲ ಎಂಬಲ್ಲಿ ಹೊಸ ಸೇತುವೆ, ರೂ. 100 ಲಕ್ಷದ ಬೆಳ್ತಂಗಡಿ
ಮೆಸ್ಕಾಂ ಉಪ ವಿಭಾಗ ಕಚೇರಿ.

ಶಿಲಾನ್ಯಾಸ
ರೂ. 474.40 ಲಕ್ಷದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನೆರಿಯದ ಕೋಲೋಡಿ ಕೊಲ್ಮ ರಸ್ತೆಯಲ್ಲಿ 5 ಸೇತುವೆಗಳು, ರೂ. 474.30 ಲಕ್ಷದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಗುಂಡೂರಿ ಅಂಗರಕೇರಿಯ ತುಂಬಿದಪಲ್ಕೆ ರಸ್ತೆಯಲ್ಲಿ ಸೇತುವೆ, ರೂ. 387.40 ಲಕ್ಷ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬಂದಾರು ಗ್ರಾಮದ ಬೋಲೋಡಿ ನೈರೋಲ್ತಡ್ಕ ಗೋಳಿತ್ತಾಡಿ ರಸ್ತೆಯಲ್ಲಿ 2 ಸೇತುವೆ, ರೂ. 235.92 ಲಕ್ಷದಲ್ಲಿ ಪುಂಜಾಲಕಟ್ಟೆಯಲ್ಲಿ ನಿರ್ಮಾಣವಾಗುವ ಹೊಸ ಪೊಲೀಸ್‌ ವಸತಿಗೃಹ ಕಟ್ಟಡ, ರೂ. 213.80 ಲಕ್ಷದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪಾಲೇದು ಕುದ್ರಡ್ಕ ರಸ್ತೆಯಲ್ಲಿ 2 ಸೇತುವೆ, ರೂ. 200 ಲಕ್ಷದ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ -3ರ ವಿವಿಧ ಕಾಮಗಾರಿಗಳಿಗೆ, ರೂ. 120 ಲಕ್ಷದ ಬೆಳ್ತಂಗಡಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 250 ಮೆ. ಟನ್‌ ಸಾಮರ್ಥ್ಯದ 2 ಗೋದಾಮು ಕಟ್ಟಡ ನಿರ್ಮಾಣ, ಮುಚ್ಚು ಹರಾಜು ಕಟ್ಟೆ ನಿರ್ಮಾಣ ಕಾಮಗಾರಿ, ರೂ. 85 ಲಕ್ಷದ ಲಾಯಿಲ ಗ್ರಾಮದ ರಾಘವೇಂದ್ರ ಮಠದ ಬಳಿ ಸೋಮಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ.

Advertisement

Udayavani is now on Telegram. Click here to join our channel and stay updated with the latest news.

Next