Advertisement

ನಿಮಗೆ ಮಾನ ಮರ್ಯಾದೆ ಇದೆಯಾ? ಮುಲಾಜಿಲ್ಲದೆ ಸಸ್ಪೆಂಡ್‌ ಮಾಡ್ತೇನೆ ..

11:40 AM Jan 25, 2017 | Team Udayavani |

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿ ಹರಿಹಾಯ್ದ ಘಟನೆ ಬುಧವಾರ ನಡೆದಿದೆ. 

Advertisement

ಕುಡಿಯುವ ನೀರು ಸರಬರಾಜು ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ನಿಮಗೆ ಮಾನ ಮರ್ಯಾದೆ ಇದೆಯಾ ? ಜನರಿಗೆ ಕುಡಿಯುವ ನೀರು ಕೊಡಲಾಗದ ಮೇಲೆ ಯಾಕೆ ಇದ್ದೀರಾ ? ಅಲ್ಲಿ ಯಾಕೆ ಕೂರಬೇಕು ಎಂದು ಕೆಂಡಾಮಂಡಲವಾದರು ಎಂದು ವರದಿಯಾಗಿದೆ. 

ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ನಿಮ್ಮಿಬ್ಬರನ್ನೂ ಮುಲಾಜಿಲ್ಲದೆ ಸಸ್ಪೆಂಡ್‌ ಮಾಡುತ್ತೇನೆ ಎಂದು ಗದರಿರುವುದಾಗಿ ವರದಿಯಾಗಿದೆ. 

ಗ್ರಾಮೀಣ ನೀರು ಸರಬರಾಜು ಅಧೀಕ್ಷಕ ಪ್ರಕಾಶ್‌ ರಾಜ್‌ ಮತ್ತು ನೀರಾವರಿ ಇಲಾಖೆಯ ಇಇ ಮಂಜುನಾಥ್‌ ಅವರು ಸಿಎಂ ಆಕ್ರೋಶಕ್ಕೆ ಗುರಿಯಾದ ಅಧಿಕಾರಿಗಳು ಎಂದು ತಿಳಿದು ಬಂದಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next