Advertisement
ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರಕಾರ ಸ್ಪಂದಿಸಲಿದೆ. ನಮ್ಮ ಬಜೆಟ್‌ನಲ್ಲೂ ಪೌರ ಕಾರ್ಮಿಕರಿಗೆ ಎರಡು ಸಾವಿರ ರೂ. ನೀಡುವುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು. ಸೇವೆ ಖಾಯಂ ಕುರಿತು ಕಾನೂನು, ಆರ್ಥಿಕ ಇಲಾಖೆ ಜತೆ ಚರ್ಚಿಸಿ ಏನೆಲ್ಲ ಸಾಧ್ಯವೋ ಆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು, ಪೌರ ಕಾರ್ಮಿಕರು ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುತ್ತಿರುವುದನ್ನು ಪ್ರಸ್ತಾವಿಸಿ ಸೇವೆ ಖಾಯಂ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. 18 ಸಾವಿರ ಪೌರ ಕಾರ್ಮಿಕರಿದ್ದು ಆ ಪೈಕಿ 1,600 ಮಂದಿ ಮಾತ್ರ ಖಾಯಂಗೊಂಡಿದ್ದಾರೆ. ಉಳಿದವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ 7,700 ರೂ. ಇದ್ದ ವೇತನ 17 ಸಾವಿರ ರೂ.ಗೆ ಏರಿಸಿದ್ದೆ. ಅವರ ಬಹುತೇಕ ಬೇಡಿಕೆಗಳು ನ್ಯಾಯಯುತವಾಗಿವೆ ಎಂದು ಹೇಳಿದರು. ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಪದಾಧಿಕಾರಿ ಬೆಂಕಿ;ಪ್ರಮುಖ ನಾಯಕರ ಜತೆ ಚರ್ಚಿಸದೇ ಪಟ್ಟಿ ಒಯ್ದರೇ ಡಿಕೆಶಿ ?
Related Articles
ಬಿಜೆಪಿಯ ಪಿ. ರಾಜೀವ್ ಮಾತನಾಡಿ, ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಲು ಬರಲಿದ್ದು ಸರಕಾರ ಈ ವಿಚಾರದಲ್ಲಿ ಮಾನವೀಯತೆಯಿಂದ ಕ್ರಮ ಕೈಗೊಳ್ಳಬೇಕು ಎಂದ ಹೇಳಿದರು.
Advertisement