Advertisement
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 27 ಕ್ಷೇತ್ರಗಳ 198 ವಾರ್ಡ್‌ಗಳಲ್ಲಿ ವಿವಿಧ ಇಲಾಖೆಗಳ 58 ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, 2022ರ ಜ.26ರಂದು ರಾಜ್ಯಾದ್ಯಂತ ಜನಸೇವಕ ಯೋಜನೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಇಂದು ಕರ್ನಾಟಕದ ಆಡಳಿತದಲ್ಲಿ ಮಹತ್ವದ ದಿನ. ಇದೊಂದು ಬದಲಾವಣೆಯ ಪರ್ವ ಪ್ರಾರಂಭವಾಗುವ ದಿನ. ನಾನು ಸಿಎಂ ಆದ ಸಂದರ್ಭದಲ್ಲಿಯೇ ಜನ ಪರ ಯೋಜನೆ ಜಾರಿಗೆ ತರುತ್ತೇನೆ ಎಂದು ಹೇಳಿದ್ದೆ . ವಿಜಯ ಭಾಸ್ಕರ್ ಅವರ ಆಡಳಿತ ಸುಧಾರಣಾ ಆಯೋಗದ ಶಿಪಾರಸ್ಸಿನಂತೆ ಜನಪರ ಯೋಜನೆಗಳನ್ನು ನವೆಂಬರ್ 1 ರಂದು ಜಾರಿಗೆ ತರುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Related Articles
ವಾಹನ ಮಾರಾಟಗಾರ ಹಂತದಲ್ಲಿ ನೋಂದಣಿ ಪ್ರಕ್ರಿಯೆ, ನೋಂದಣಿ, ರಹದಾರಿ ಹಾಗೂ ಚಾಲನಾ ಅನುಜ್ಞಾ ಪತ್ರ ಮತ್ತಿತರ 30 ಸೇವೆಗಳನ್ನು ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡದೇ, ಯಾರದೇ ಸಂಪರ್ಕವಿಲ್ಲದೇ ಮಧ್ಯವರ್ತಿಗಳನ್ನು ನೆಚ್ಚಿಕೊಳ್ಳದೇ ನೇರವಾಗಿ ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆಗೆ ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. 11 ಸಾರಥಿ ಸೇವೆಗಳು, 19 ವಾಹನ್ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಹೆಚ್ಚಿನ ಮಾಹಿತಿಗೆ ಜಠಿಠಿಟs://ಟಚrಜಿvಚಜಚn.ಜಟv.ಜಿn ಗೆ ಸಂಪರ್ಕಿಸಬಹುದು.
Advertisement
ಯಾವ ಇಲಾಖೆಯ ಎಷ್ಟು ಸೇವೆಗಳುಜನಸೇವಕ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ 21, ಬಿಬಿಎಂಪಿಯ 18, ಕಾರ್ಮಿಕ ಇಲಾಖೆಯ 9, ಆಧಾರ್ ಪ್ರಾಧಿಕಾರದ 4, ಪೊಲೀಸ್ ಇಲಾಖೆಯ 3, ವಿಕಲಚೇತನ-ಹಿರಿಯ ನಾಗರಿಕರ ಇಲಾಖೆ, ಆರೋಗ್ಯ ಇಲಾಖೆ ಮತ್ತು ಆಹಾರ ಇಲಾಖೆಯ ತಲಾ ಒಂದು ಸೇವೆಗಳು ಲಭ್ಯವಾಗಲಿವೆ.