Advertisement

ಹಾಲಿ ಸಿಜೆಐ ಚಿಕ್ಕಪ್ಪಗೆ ಸಿಜೆಐ ಹುದ್ದೆ ತಪ್ಪಿಸಿದ್ದುಇಂದಿರಾ ವಿರುದ್ಧದ ತೀರ್ಪು!

11:00 PM Nov 11, 2024 | Team Udayavani |

ನವದೆಹಲಿ: ಸಿಜೆಐ ಆಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ನ್ಯಾ|ಸಂಜೀವ್‌ ಖನ್ನಾ ಅವರ ಚಿಕ್ಕಪ್ಪ ಹಂಸರಾಜ್‌ ಖನ್ನಾ ಇಂದಿರಾ ಗಾಂಧಿ ವಿರುದ್ಧ ತೀರ್ಪು ನೀಡಿದ್ದರಿಂದ ಹುದ್ದೆ ತಪ್ಪಿಸಿಕೊಂಡಿದ್ದರು.

Advertisement

ತುರ್ತು ಪರಿಸ್ಥಿತಿ ವೇಳೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಎಚ್‌.ಆರ್‌.ಖನ್ನಾ 1976ರಲ್ಲಿ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವಂತಿಲ್ಲ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು. ಇದು ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರಿಗೆ ಹಿನ್ನಡೆ ತಂದೊಡ್ಡಿತ್ತು. ಬಳಿಕ ಇಂದಿರಾ ಗಾಂಧಿ ಅವರು ಹಿರಿತನವನ್ನೂ ಗಮನಿಸದೇ ಮತ್ತೊಬ್ಬರನ್ನು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಿದರು.

ಹೀಗಾಗಿ ಎಚ್‌.ಆರ್‌.ಖನ್ನಾ ಹುದ್ದೆ ತಪ್ಪಿಸಿಕೊಂಡಿದ್ದರು. ಈಗ ಅವರ ಅಣ್ಣನ ಮಗ ಸಂಜೀವ್‌ ಖನ್ನಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next