Advertisement

ಚಿಕನ್‌ ಫಾಕ್ಸ್‌ ಸಂತ್ರಸ್ತರಿಗೆ ಸಾಂತ್ವಾನ

12:07 PM Feb 09, 2022 | Team Udayavani |

ಚಿತ್ತಾಪುರ: ತಾಲೂಕಿನ ನಾಲವಾರ ಗ್ರಾಮದಲ್ಲಿ ಚಿಕನ್‌ ಫಾಕ್ಸ್‌ ರೋಗಕ್ಕೆ ಬಲಿಯಾದ ಇಬ್ಬರು ಬಾಲಕರ ಕುಟುಂಬಕ್ಕೆ ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಬಿಜೆಪಿ ಕಚೇರಿಯಲ್ಲಿ ವೈಯಕ್ತಿಕವಾಗಿ 20 ಸಾವಿರ ರೂ. ನೀಡಿ ಸಾಂತ್ವನ ಹೇಳಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕನ್‌ ಫಾಕ್ಸ್‌ ರೋಗ ಏಳೆಂಟು ಜನರಲ್ಲಿ ಕಾಣಿಸಿ ಕೊಂಡಿದೆ ಎಂದು ತಿಳಿದುಬಂದಿದೆ. ಆದ್ದರಿಂದ ನುರಿತ ವೈದ್ಯರು ನಾಲವಾರ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಶಾಸಕ ಪ್ರಿಯಾಂಕ್‌ ಖರ್ಗೆ ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗಿ ಸೂಕ್ತ ಪರಿಹಾರ ದೊರಕಿಸಲು ಯತ್ನಿಸಬೇಕು ಎಂದು ಒತ್ತಾಯಿಸಿದರು.

ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ಶರಣಪ್ಪ ನಾಟೀಕಾರ, ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ, ಪ್ರಭು ಗಂಗಾಣಿ, ರಮೇಶ ಬೊಮ್ಮನಳ್ಳಿ, ಬಿಜೆಪಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ವಾಡಿ ನಗರಾಧ್ಯಕ್ಷ ಶಿವರಾಮ ಪವಾರ, ರವೀಂದ್ರ ಸಜ್ಜನಶೆಟ್ಟಿ, ಸುರೇಶ ಬೆನಕನಳ್ಳಿ, ಮಹೇಶ ಬಟಗೇರಿ, ಸಾಬಣ್ಣ ಜಾಲಗಾರ, ಅಂಬು ಹೋಳಿಕಟ್ಟಿ, ಅಂಬಾದಾಸ ಚವ್ಹಾಣ, ಶಶಿ ಭಂಡಾರಿ, ತಿಪ್ಪಣ್ಣ ಇವಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next