Advertisement

Chhattisgarh; ಆದಿವಾಸಿಗಳು ಹಿಂದೂಗಳಲ್ಲ ಎಂದು ವ್ಯಾಪಕ ಮತಾಂತರ: ಸಿಎಂ ವಿಷ್ಣು ದೇವ್

05:28 PM Jan 17, 2024 | Team Udayavani |

ಗುಂಡರ್ದೇಹಿ(ಬಲೋದ್): ಆದಿವಾಸಿಗಳು ಹಿಂದೂಗಳಲ್ಲ ಎಂದು ದಾರಿ ತಪ್ಪಿಸಲಾಗುತ್ತಿದ್ದು ಬುಡಕಟ್ಟು ಪ್ರದೇಶಗಳಲ್ಲಿ ಧಾರ್ಮಿಕ ಮತಾಂತರವನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ ಎಂದು ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಕಳವಳ ವ್ಯಕ್ತ ಪಡಿಸಿದ್ದಾರೆ.

Advertisement

ಇಂದು ಬಲೋಡ್‌ನ ಗುಂಡರ್‌ದೇಹಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 173 ಕೋಟಿ ರೂ.ಗೂ ಹೆಚ್ಚು ಮೊತ್ತದ 83 ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿದರು. ಇದರಲ್ಲಿ 4.900 ಕೋಟಿ ರೂ.ವೆಚ್ಚದ 23 ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ 168.18 ಕೋಟಿ ರೂ.ವೆಚ್ಚದ 60 ವಿವಿಧ ಕಾಮಗಾರಿಗಳ ಉದ್ಘಾಟನೆಯೂ ನಡೆಸಲಾಯಿತು.

”ಬುಡಕಟ್ಟು ಜನರು ಮಾಂಸ ಮತ್ತು ಮದ್ಯವನ್ನು ಸೇವಿಸುತ್ತಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಎಲ್ಲ ರೀತಿಯಲ್ಲೂ ದುರ್ಬಲರಾಗಿದ್ದಾರೆ. ರಾಮಚರಿತಮಾನಗಳ ವಿತರಣೆ ಮಾಡುವ ಮೂಲಕ ಮಾಂಸ, ಮದ್ಯ ಮತ್ತು ಧಾರ್ಮಿಕ ಮತಾಂತರವನ್ನು ನಿಲ್ಲಿಸಬಹುದು” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮರ್ಥ ಮಾರ್ಗದರ್ಶನದಲ್ಲಿ ಛತ್ತೀಸ್‌ಗಢವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನನ್ನ ಏಕೈಕ ಉದ್ದೇಶವಾಗಿದೆ. ನನ್ನ ಈ ಪ್ರಯತ್ನ ನಿರಂತರವಾಗಿ ಮುಂದುವರಿಯುತ್ತದೆ. ನನ್ನ ಇಡೀ ಜೀವನವನ್ನು ರಾಜ್ಯದ ಪ್ರತಿಯೊಂದು ವರ್ಗದ ಮತ್ತು ನಾಗರಿಕರ ಕಲ್ಯಾಣಕ್ಕಾಗಿ ಮುಡಿಪಾಗಿಡುತ್ತೇನೆ ಎಂದು ವಿಷ್ಣು ದೇವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next