Advertisement

ಛತ್ತೀಸ್‌ಗಢ : ಎಂಟು ನಕ್ಸಲರ ಹತ್ಯೆ; ಇಬ್ಬರು ಜವಾನರು ಹುತಾತ್ಮ

03:25 PM Nov 26, 2018 | udayavani editorial |

ಛತ್ತೀಸ್‌ಗಢ : ರಾಜ್ಯದ ಸುಕ್‌ಮಾ ಜಿಲ್ಲೆಯ ಸಕಲಾರ್‌ ಗ್ರಾಮದಲ್ಲಿ ಇಂದು ಸೋಮವಾರ ನಡೆದ ಎನಕೌಂಟ್‌ ನಲ್ಲಿ  ಎಂಟು ನಕ್ಸಲರ ಹತ್ಯೆ ನಡೆದಿದೆ; ಇದೇ ವೇಳೆ ಇಬ್ಬರು ಭದ್ರತಾ ಸಿಬಂದಿ ಹುತಾತ್ಮರಾಗಿರುವುದಾಗಿ ವರದಿಗಳು ತಿಳಿಸಿವೆ.

Advertisement

ಛತ್ತೀಸ್‌ಗಢದ ಜಿಲ್ಲಾ ಪೊಲೀಸ್‌ ಮೀಸಲು ಪಡೆ (ಡಿಆರ್‌ಜಿ)ಮತ್ತು ಸಿಆರ್‌ಪಿಎಫ್ನ 206 ಮತ್ತು 208 ಕೋಬ್ರಾ ದಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು. 

ಎನ್‌ಕೌಂಟರ್‌ನಲ್ಲಿ ಒಬ್ಬ ಮಾವೋ ಉಗ್ರ ಗಂಭೀರವಾಗಿ ಗಾಯಗೊಂಡಿದ್ದು ಆತನಿಂದ ಭಮಾå… ಗನ್‌ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಕ್‌ಮಾ ಎಸ್‌ಪಿ ಅಭಿಷೇಕ್‌ ಮೀಣ ತಿಳಿಸಿದ್ದಾರೆ. 

ಎನ್‌ಕೌಂಟರ್‌ ನಡೆದ ಪ್ರದೇಶದಲ್ಲಿ ಇನ್ನೂ ಅಡಗಿಕೊಂಡಿರಬಹುದಾದ ನಕ್ಸಲರಿಗೆ ಭದ್ರತಾ ಶೋಧ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು ಭದ್ರತಾ ಸಿಬಂದಿಗಳ  ಮೃತ ದೇಹಗಳನ್ನು  ಸಾಗಿಸುವ ಕೆಲಸವೂ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ. 

ನಿನ್ನೆ ಭಾನುವಾರವಷ್ಟೇ ಭದ್ರತಾ ಪಡೆಗಳು ಬಿಜಾಪೂರ ಜಿಲ್ಲೆಯಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್‌ ಸಿಬಂದಿ ಗಾಯಗೊಂಡಿದ್ದರು. 

Advertisement

ನಿನ್ನೆ ಭಾನುವಾರ ಡಿಆರ್‌ಜಿ ಮತ್ತು ವಿಶೇಷ ಕಾರ್ಯ ಪಡೆಯ ಸಿಬಂದಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಗಂಗಲೂರ್‌ ಮತ್ತು ಮಾದ್ದೇಡ್‌ ನಲ್ಲಿ ಗುಂಡಿನ ಕಾಳಗ ಏರ್ಪಟ್ಟಿತ್ತು. 

ಡಿಆರ್‌ಜಿ ಮತ್ತು ಎಸ್‌ಟಿಎಫ್ ನ ಜಂಟಿ ಪಡೆಗಳು ನೀಲಮಾಡು ಮತ್ತು ಕೋರಿಂಜೆಡ್‌ ನಲ್ಲಿನ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್‌ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್‌ ಸುಪರಿಂಟೆಂಡೆಂಟ್‌ ಮೋಹಿತ್‌ ಗರ್ಗ್‌ ತಿಳಿಸಿದ್ದಾರೆ. 

ನಕ್ಸಲರ ವಿರುದ್ಧ  ಸುಮಾರು 40 ನಿಮಿಷಗಳ ಕಾಲ ನಡೆದಿದ್ದ ಗುಂಡಿನ ಕಾಳಗದಲ್ಲಿ ಓರ್ವ ಡಿಆರ್‌ಜಿ ಜವಾನನಿಗೆ  ಕುತ್ತಿಗೆಗೆ ಗುಂಡೇಟು ತಗಲಿದೆ; ಆತನನ್ನು ಆಸ್ಪತ್ರೆಗೆ ಒಯ್ಯಲಾಗುತ್ತಿದೆ ಎಂದು ಗರ್ಗ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next