Advertisement
10 ಕೆಜಿ ಸ್ಫೋಟಕವನ್ನು ಕಬ್ಬಿಣದ ಪೈಪ್‌ನಲ್ಲಿ ಇರಿಸಲಾಗಿತ್ತು. ಇದನ್ನು ಪೈಪ್ ಬಾಂಬ್ ಎಂದು ಕರೆಯುತ್ತಾರೆ. ಕಂಕರ್ ಜಿಲ್ಲೆಯ ಕೊಯಲಿಬೀಡ ಪೊಲೀಸ್ ಠಾಣೆ ವ್ಯಾಪ್ತಿಯ ತೇಕಪರ್ ಗ್ರಾಮದಲ್ಲಿ ಜಿಲ್ಲಾ ಮೀಸಲು ಪಡೆಯು(ಡಿಆರ್‌ಜಿ) ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅರಣ್ಯದಿಂದ ಕೂಡಿದ ಬೆಟ್ಟದಲ್ಲಿ ಪೊದೆಗಳ ಅಡಿಯಲ್ಲಿ ಅಡಗಿಸಿಟ್ಟ ಸ್ಫೋಟಕವನ್ನು ಗಸ್ತು ಪಡೆ ಪತ್ತೆಹಚ್ಚಿತು. ಭದ್ರತಾ ಪಡೆಗಳನ್ನು ಗುರಿಯಾಸಿ ಮಣ್ಣಿನ ಅಡಿಯಲ್ಲಿ ಇದನ್ನು ಹೂತಿಡಲಾಗಿತ್ತು. ನಂತರ ಬಾಂಬ್ ನಿಷ್ಕ್ರಿಯದಳವು ಪೈಪ್ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಭದ್ರತಾ ಪಡೆಗಳಿಂದ ಪೈಪ್ ಬಾಂಬ್ ನಿಷ್ಕ್ರಿಯ
07:26 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.