ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಮುಂತಾದ ಉಪಯುಕ್ತ ಮೌಲ್ಯಗಳನ್ನು ಸಮಾಜಕ್ಕೆ ಒದಗಿಸುವ ಉದ್ದೇಶದಿಂದ 1969ರಲ್ಲಿ ಕಾರ್ಯಾರಂಭಿಸಿದ ಸಿದ್ದಾಪುರ (ಉ.ಕ.)ದ ಶಿಕ್ಷಣ ಪ್ರಸಾರಕ ಸಮಿತಿ ತನ್ನ ಸಾಧನೆ, ಸೇವೆ, ಶೈಕ್ಷಣಿಕ ಕೊಡುಗೆಗಳ ಮೂಲಕ ಇಂದು ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಎನ್ನುವ ಹೆಮ್ಮೆಗೆ ಪಾತ್ರವಾಗಿದೆ.
ಗ್ರಾಮೀಣ ಪ್ರದೇಶವಾದ ತಾಲೂಕಿನ ವಿದ್ಯಾರ್ಥಿಗಳು ಪ್ರೌಢ ಮತ್ತು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾದ ಸ್ಥಿತಿ ಗಮನಿಸಿದ ಶ್ರೀ ಗಣೇಶ ಹೆಗಡೆ ದೊಡ್ಮನೆಯವರು ತಮ್ಮ ಒಡನಾಡಿಗಳೊಂದಿಗೆ ಸಂಯೋಜಿಸಿದ ಶಿಕ್ಷಣ ಪ್ರಸಾರಕ ಸಮಿತಿ ಪಟ್ಟಣದಲ್ಲಿ ಎರಡು ಪ್ರೌಢಶಾಲೆ, ಗ್ರಾಮೀಣ ಪ್ರದೇಶದಲ್ಲಿ ಮೂರು ಪ್ರೌಢಶಾಲೆಗಳನ್ನು ಸ್ಥಾಪಿಸಿ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯವನ್ನು ಹಸನಾಗಿಸಿತು. ನಂತರದಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು, ಆಯುರ್ವೇದ ಕಾಲೇಜು ಸ್ಥಾಪಿಸಿದ್ದಲ್ಲದೇ ಶಿಶು ವಿಹಾರ, ಪ್ರಾಥಮಿಕ ಶಾಲೆಗಳನ್ನೂ ಆರಂಭಿಸಿ ಒಂದೇ ಸೂರಿನಡಿ ಎಲ್ಲ ಹಂತದ ಶಿಕ್ಷಣ ದೊರೆಯುವ ಸೌಲಭ್ಯ ಒದಗಿಸಿರುವುದು ಒಂದು ವಿಶಿಷ್ಠ ಮತ್ತು ವಿಸ್ಮಯದ ಸಂಗತಿ ಕೂಡ. ನಗರಪ್ರದೇಶದಲ್ಲಿ ಸುಲಭ ಸಾಧ್ಯವಾಗುವುದನ್ನು ಪುಟ್ಟ ಊರಾದ ಸಿದ್ದಾಪುರದಂಥ ಗ್ರಾಮೀಣ ಭಾಗದಲ್ಲಿ ಸಾಧಿ ಸುವುದು ಸುಲಭದ ಮಾತಲ್ಲ. ಆದರೆ ಗಣೇಶ ಹೆಗಡೆಯವರಂಥ ಮುತ್ಸದ್ಧಿಗಳ ಚಿಂತನಶೀಲತೆ, ವಿನಾಯಕರಾವ್ ಜಿ.ಹೆಗಡೆಯವರ ಪರಿಶ್ರಮ ಈ ಸಾಧನೆಯ ಹಿಂದಿದೆ. ಇಂದು ದೇಶ-ವಿದೇಶಗಳಲ್ಲಿ ಎಲ್ಲ ಬಗೆಯ ಉದ್ಯೋಗ, ವ್ಯವಹಾರದಲ್ಲಿ ಶ್ರೇಯಸ್ಸು ಪಡೆದ ಅದೆಷ್ಟೋ ಸಾವಿರ ಜನರಿದ್ದಾರೆ. ಅವರಿಗೆಲ್ಲ ಅಂಥದೊಂದು ಸಿದ್ಧಿ ದೊರಕುವುದರ ಹಿಂದೆ ಶಿಕ್ಷಣ ಪ್ರಸಾರಕ ಸಮಿತಿ ಇದೆ ಎನ್ನುವುದು ನಿತ್ಯ ಸತ್ಯದ ಸಂಗತಿ.
ಶಿಕ್ಷಣ ಪ್ರಸಾರಕ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಗಣೇಶ ಹೆಗಡೆ ದೊಡ್ಮನೆಯವರ ಕತೃìತ್ವಶಕ್ತಿಯ ಆಧಾರದೊಂದಿಗೆ ಈಗಿನ ಅಧ್ಯಕ್ಷರಾದ ವಿನಾಯಕರಾವ್ ಜಿ.ಹೆಗಡೆ ದೊಡ್ಮನೆಯವರ ದಕ್ಷ ಮಾರ್ಗದರ್ಶನದಲ್ಲಿ ಆರಂಭಗೊಂಡದ್ದು ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ. 2016ರಲ್ಲಿ ಆರಂಭಗೊಂಡ ಈ ಮಹಾವಿದ್ಯಾಲಯದ ಅಭಿವೃದ್ಧಿಗೆ ಉಪಾಧ್ಯಕ್ಷರಾದ ಡಾ|ಶಶಿಭೂಷಣ ಹೆಗಡೆ ದೊಡ್ಮನೆಯವರ ಸೂಕ್ತ ಸಲಹೆ-ಸಹಕಾರ ಕೂಡ ಹೆಚ್ಚಿನದಾಗಿದೆ.
2016ರಲ್ಲಿ ಆರಂಭಗೊಂಡ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಆರಂಭದಲ್ಲಿ ಆಡಳಿತಾಧಿ ಕಾರಿಯಾಗಿ ನಿವೃತ್ತ ಮುಖ್ಯಾಧ್ಯಾಪಕ ವಿ.ವಿ.ನಾಯಕ, ಪ್ರಾಚಾರ್ಯರಾಗಿ ಜಿ.ವಿ.ಹೆಗಡೆ ಕಾರ್ಯ ನಿರ್ವಹಿಸಿ ಮಹಾವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದರು. ನಂತರದಲ್ಲಿ 25 ವರ್ಷಗಳ ಸುದಿಧೀರ್ಘ ಅನುಭವ ಹೊಂದಿದ, ವಿದ್ಯಾರ್ಥಿ ಸ್ನೇಹಿ ಪ್ರೋ|ಯು.ಟಿ.ಹೆಗಡೆ ಪ್ರಾಚಾರ್ಯರಾಗಿ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡು ಮಹಾವಿದ್ಯಾಲಯ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮ ವಹಿಸಿದರು. ಅವರ ಮಾರ್ಗದರ್ಶನದಲ್ಲಿ ಕ್ರಿಯಾಶೀಲರಾದ ಯುವ ಉಪನ್ಯಾಸಕ ಸಮೂಹ ಕೂಡ ಮಹಾವಿದ್ಯಾಲಯದ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಕಾರ್ಯನಿರತವಾಗಿದೆ.
ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವೈಶಿಷ್ಟ್ಯಗಳು
ಉತ್ತಮ ಕಲಿಕಾ ಪರಿಸರದಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ಅತ್ಯಾಧುನಿಕ ಕಲಿಕಾ ವ್ಯವಸ್ಥೆ
ಸಿಇಟಿ, ನೀಟ್ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನನಿತ್ಯ ಕಡಿಮೆ ವೆಚ್ಚದಲ್ಲಿ ತರಬೇತಿ
ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ, ಪ್ರಗತಿಯ ವಿಚಾರ ನಿರಂತರವಾಗಿ ಪಾಲಕರಿಗೆ ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು
ಸುಸಜ್ಜಿತ ಪ್ರಯೋಗಾಲಯ, ಗ್ರಂಥ ಭಂಡಾರ ಹಾಗೂ ಪರಿಣಾಮಕಾರಿ ಪಾಠ-ಪ್ರವಚನ
ಶಿಸ್ತು, ಸಮಯ ಪಾಲನೆ, ಹಾಜರಾತಿಗೆ ಆದ್ಯತೆ
ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳು, ವಿಶಾಲ ಕ್ರೀಡಾಂಗಣ
ಚೇತನಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಾಧನೆಗಳು
2017-18 ಸಿಂಧೂರ ಹೆಗಡೆ- 600-580,ಶೇ.96.66
2018-19 ಭಾಗ್ಯಲಕ್ಷ್ಮೀ ಹೆಗಡೆ- 600-528, ಶೇ.87
2019-20 ಕಾವ್ಯ ಹೆಗಡೆ- 600-561, ಶೇ.93
2020-21 ಅವನಿ ಶಶಿಭೂಷಣ ಹೆಗಡೆ-600-600, ಶೇ.100
ಲಭ್ಯವಿರುವ ವಿಷಯ ಸಂಯೋಜನೆಗಳು:
ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ
ಭೌತ ಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಕಶಾಸ್ತ್ರ
ಭಾಷಾ ವಿಷಯಗಳು: ಕನ್ನಡ, ಇಂಗ್ಲೀಷ್, ಸಂಸ್ಕೃತ
ಸಂಪರ್ಕಿಸಿ:
ಮಹಾವಿದ್ಯಾಲಯದ ದೂರವಾಣಿ : 7019867295 ಪ್ರಾಚಾರ್ಯರು: 9449265838