Advertisement

ಚೇತೇಶ್ವರ್‌ ಪೂಜಾರ ಫಿಫ್ಟಿಗೆ 174 ಎಸೆತ!

08:30 AM Jan 10, 2021 | Team Udayavani |

ಟೆಸ್ಟ್‌ ಸ್ಪೆಷಲಿಸ್ಟ್‌ ಖ್ಯಾತಿಯ ಚೇತೇಶ್ವರ್‌ ಪೂಜಾರ ಈಗೀಗ ಅಗತ್ಯಕ್ಕಿಂತಲೂ ಹೆಚ್ಚು ರಕ್ಷಣಾತ್ಮಕ ಆಟವಾಡುತ್ತಿದ್ದಾರೆ. ಇದರಿಂದ ಅವರ ಜತೆಗಾರನ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ ಎಂಬುದು ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅನಿಸಿಕೆ.

Advertisement

ಮೂರನೇ ದಿನದಾಟದಲ್ಲೂ ಪೂಜಾರ ಇದೇ ಲಯದಲ್ಲಿ ಸಾಗಿದರು. ಅರ್ಧ ಶತಕವೊಂದನ್ನು ಹೊಡೆದರೂ ಇದಕ್ಕೆ ಭರ್ತಿ 174 ಎಸೆತಗಳನ್ನು ಎದುರಿಸಿದರು. ಇದು ಟೆಸ್ಟ್‌ನಲ್ಲಿ ಪೂಜಾರ ದಾಖಲಿಸಿದ ಅತ್ಯಂತ ನಿಧಾನ ಗತಿಯ ಹಾಫ್‌ ಸೆಂಚುರಿಯಾಗಿದೆ.

ಆದರೆ ಈ ಹಾದಿಯಲ್ಲಿ ಅವರು ವಿಹಾರಿ ಮತ್ತು ರಿಷಭ್‌ ಪಂತ್‌ ಜತೆ ಅರ್ಧ ಶತಕದ ಜತೆಯಾಟ ನಿಭಾಯಿಸಿದ್ದರು.

ದ. ಆಫ್ರಿಕಾ ಎದುರಿನ 2018ರ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ 173 ಎಸೆತಗಳಿಂದ ಫಿಫ್ಟಿ ಪೂರೈಸಿದ್ದು ಪೂಜಾರ ಅವರ ದಾಖಲೆಯಾಗಿತ್ತು. ಹಾಗೆಯೇ ಆಸ್ಟ್ರೇಲಿಯ ಎದುರೇ 2017ರ ರಾಂಚಿ ಟೆಸ್ಟ್‌ನಲ್ಲಿ 155 ಎಸೆತಗಳಿಂದ ಅರ್ಧ ಶತಕ ಬಾರಿಸಿದ್ದರು.

ಪಂತ್‌ ವಿಶಿಷ್ಟ  ದಾಖಲೆ :

Advertisement

ಭಾರತದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ವಿಶಿಷ್ಟ ಬ್ಯಾಟಿಂಗ್‌ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯದಲ್ಲಿ ಆಡಲಾದ ಸತತ 9 ಟೆಸ್ಟ್‌ ಇನ್ನಿಂಗ್ಸ್‌ ಗಳಲ್ಲಿ 25 ಪ್ಲಸ್‌ ರನ್‌ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 8 ಸಲ ಈ ಸಾಧನೆಗೈದ ಇಂಗ್ಲೆಂಡ್‌ ಲೆಜೆಂಡ್‌ ವ್ಯಾಲಿ ಹ್ಯಾಮಂಡ್‌, ವಿಂಡೀಸ್‌ ಸೂಪರ್‌ಸ್ಟಾರ್‌ ವಿವ್‌ ರಿಚರ್ಡ್ಸ್‌ ಮತ್ತು ಭಾರತದವರೇ ಆದರುಸಿ ಸುರ್ತಿ ಅವರ ದಾಖಲೆ ಮುರಿದರು. 9 ಇನ್ನಿಂಗ್ಸ್‌ಗಳಲ್ಲಿ ಪಂತ್‌ ಗಳಿಕೆ ಹೀಗಿದೆ: 25, 28, 36, 30, 39, 33, ಅಜೇಯ 159, 29 ಮತ್ತು 36 ರನ್‌.

Advertisement

Udayavani is now on Telegram. Click here to join our channel and stay updated with the latest news.

Next