Advertisement

Booker: ಪಟ್ಟಿಯಲ್ಲಿ ಭಾರತೀಯ ಮೂಲದ ಸಾಹಿತಿ ಚೇತನ ಮಾರು ಅವರ ಚೊಚ್ಚಲ ಕೃತಿ

10:26 PM Sep 22, 2023 | Team Udayavani |

ವಾಷಿಂಗ್ಟನ್‌: ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಬುಕರ್‌ ಪ್ರಶಸ್ತಿಯ 2023ನೇ ಸಾಲಿನ ಅಂತಿಮ ಪಟ್ಟಿಗೆ ಭಾರತೀಯ ಮೂಲದ ಸಾಹಿತಿ ಚೇತನ ಮಾರು ಅವರ ಚೊಚ್ಚಲ ಕೃತಿ ಸೇರ್ಪಡೆಗೊಂಡಿದೆ. ಗುಜರಾತಿ ಮೂಲದ ಗೋಪಿ ಎನ್ನುವ 11ರ ಬಾಲಕಿ, ಬ್ರಿಟಿಷರ ಪರಿಸರದಲ್ಲಿ ವಲಸಿಗಳಾಗಿ ಕ್ರೀಡೆಯೊಂದರ ಮೇಲೆ ಮನಸ್ಸಿಟ್ಟು ತನ್ನ ಗುರಿಸಾಧಿಸಲು ಹೆಣಗಾಡುವ, ಸವಾಲುಗಳನ್ನು ಎದುರಿಸುವಂಥ ಕಥಾವಸ್ತುವನ್ನು ಒಳಗೊಂಡಿರುವ ಪುಸ್ತಕವೇ ” ವೆಸ್ಟರ್ನ್ ಲೈನ್‌” .

Advertisement

ಕ್ರೀಡೆಯೊಂದನ್ನು ಭಾವನಾತ್ಮಕ ಸಂಬಂಧಗಳೊಂದಿಗೆ ಬೆಸೆದಿರುವ ಈ ಪುಸ್ತಕವನ್ನು ಪ್ರಶಸ್ತಿಯ ನಾಮನಿರ್ದೇಶನಗಳ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ ಎಂದು ಬುಕರ್‌ ಪ್ರಶಸ್ತಿಯ ತೀರ್ಪುಗಾರರ ಸಮಿತಿ ಮಾಹಿತಿ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next