Advertisement

ವಿಚಲಿತರಾಗುತ್ತಿದ್ದಾರೆ….; ಚೇತನ್ ಭಗತ್ ರೊಂದಿಗೆ ಸಮರಕ್ಕಿಳಿದ ಉರ್ಫಿ ಜಾವೇದ್ !

05:23 PM Nov 28, 2022 | Team Udayavani |

ಮುಂಬಯಿ: ಈ ದೇಶದ ಯುವಕರು ನಟಿ  ಉರ್ಫಿ ಜಾವೇದ್ ಳಿಂದ ವಿಚಲಿತರಾಗುತ್ತಿದ್ದಾರೆ ಎಂದು ಖ್ಯಾತ ಲೇಖಕ ಚೇತನ್ ಭಗತ್ ಹೇಳಿದ್ದಾರೆ ಎಂಬ ವಾಟ್ಸಾಪ್ ಸಂದೇಶ ವೈರಲ್ ಆಗಿರುವುದು ಹ್ಯಾಟ್ ಬ್ಯೂಟಿ ಯನ್ನು ಕೆರಳಿಸಿದ್ದು ಸಾಮಾಜಿಕ ತಾಣದಲ್ಲಿ ಸಮರಕ್ಕೆ ಕಾರಣವಾಗಿದೆ.

Advertisement

ತಮ್ಮ ಫೋಟೋಗಳೊಂದಿಗೆ ಯುವಕರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ದೂಷಿಸಿರುವ ಚೇತನ್ ಭಗತ್ ಅವರ ಕಾಮೆಂಟ್‌ಗೆ ಉರ್ಫಿ ಜಾವೇದ್ ಪ್ರತಿಕ್ರಿಯಿಸಿದ್ದು, ಚೇತನ್ ನಂತಹ ಪುರುಷರು ಯಾವಾಗಲೂ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ದೂಷಿಸುತ್ತಾರೆ. ನೀವು ವಿಕೃತರಾಗಿರುವುದರಿಂದ ಅದು ಹುಡುಗಿಯ ತಪ್ಪು ಅಥವಾ ಅವಳು ಏನು ಧರಿಸಿದ್ದಾಳೆ ಎಂದು ಅರ್ಥವಲ್ಲ. ಅನಾವಶ್ಯಕವಾಗಿ ನನ್ನನ್ನು ಸಂಭಾಷಣೆಗೆ ಎಳೆಯುವುದು, ನನ್ನ ಬಟ್ಟೆಗಳು ಚಿಕ್ಕ ಹುಡುಗರನ್ನು ಹೇಗೆ ವಿಚಲಿತಗೊಳಿಸುತ್ತವೆ ಎಂಬುದರ ಕುರಿತು ಕಾಮೆಂಟ್ ಮಾಡುವುದು (ಕೀಳು ಪದ ಬಳಕೆ) ವಿಷಯ ಎಂದು ಹೇಳುವುದು. ನೀವು ಹುಡುಗಿಯರಿಗೆ ಸಂದೇಶ ಕಳುಹಿಸುವುದು ಅವರಿಗೆ ಅಡ್ಡಿಯಾಗುವುದಿಲ್ಲವೆ ಚೇತನ್ ಭಗತ್? ಎಂದು ಪ್ರಶ್ನಿಸಿದ್ದಾರೆ.

ಟೀಕೆಗೆ ಪ್ರತಿಕ್ರಿಯಿಸಿದ ಉರ್ಫಿ, ಅವರನ್ನು ವಿಕೃತ ಎಂದು ಕರೆದು ‘ಮೀ ಟೂ’ ಚಳವಳಿಯ ಸಂದರ್ಭದಲ್ಲಿ 2018 ರಲ್ಲಿ ಸೋರಿಕೆಯಾದ ಚೇತನ್ ಭಗತ್ ಅವರ ಮೇಲೆ ಆಪಾದಿಸಲಾಗಿದ್ದ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಚೇತನ್ ಕೂಡ ತನ್ನ ವಾಟ್ಸಾಪ್ ಸಂದೇಶಗಳನ್ನು ಸೋರಿಕೆ ಮಾಡಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿಗೆ ಚೇತನ್ ಭಗತ್ ಅವರು “ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸಲು ಗಂಟೆಗಟ್ಟಲೆ ಕಳೆಯುವ ಯುವಕರಿಗೆ, ವಿಶೇಷವಾಗಿ ಹುಡುಗರಿಗೆ ಫೋನ್ ದೊಡ್ಡ ಅಡ್ಡಿಯಾಗಿದೆ. ಉರ್ಫಿ ಜಾವೇದ್ ಯಾರೆಂದು ಎಲ್ಲರಿಗೂ ತಿಳಿದಿದೆ… ಆಕೆಯ ಫೋಟೋಗಳನ್ನು ನೀವು ಏನು ಮಾಡುತ್ತೀರಿ? ಇದು ನಿಮ್ಮ ಪರೀಕ್ಷೆಯಲ್ಲಿ ಬರುತ್ತದೆಯೇ ಅಥವಾ ನೀವು ಕೆಲಸದ ಸಂದರ್ಶನಕ್ಕೆ ಹೋದಾಗ ಸಂದರ್ಶಕರಿಗೆ ಅವರ ಎಲ್ಲಾ ಬಟ್ಟೆಗಳ ಕುರಿತು ನಿಮಗೆ ತಿಳಿದಿದೆ ಎಂದು ಹೇಳುತ್ತೀರಾ? ಎಂದು ಪ್ರಶ್ನಿಸಿದ್ದರು.

ಚೇತನ್, ವಾಟ್ಸಾಪ್ ಸಂದೇಶಗಳ ಬಗ್ಗೆ ಟ್ವೀಟ್ ಮಾಡಿ ಅವುಗಳನ್ನು ‘ನಕಲಿ’ ಎಂದು. ಆಕೆಯ ಕುರಿತು ಎಂದೂ ‘ಟೀಕೆ’ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಸಮರ ತೀವ್ರ ವಾಗುತ್ತಿದ್ದಂತೆ ”ನಾನು ಹಾಗೆ ಮಾಡಿದ್ದೇನೆ ಎಂದು ಹರಡುತ್ತಿರುವ ಯಾರೊಂದಿಗೂ ನಾನು ಮಾತನಾಡಿಲ್ಲ,ಚಾಟ್ ಮಾಡಿಲ್ಲ,ಭೇಟಿ ಮಾಡಿಲ್ಲ,ಪರಿಚಿತನಾಗಿಲ್ಲ. ಇದು ನಕಲಿ. ಒಂದು ಸುಳ್ಳು.ಹಾಗೂ ಒಂದು ಅನಗತ್ಯ ವಿಚಾರ .ಯಾರನ್ನೂ ಟೀಕಿಸಿಲ್ಲ.ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಿ ಮತ್ತು ಫಿಟ್‌ನೆಸ್ ಮತ್ತು ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಜನರಿಗೆ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next