ಬಾಕು (ಅಜರ್ ಬೈಜಾನ್): ಚೆಸ್ ವಿಶ್ವಕಪ್ ಫೈನಲ್ ಇದೀಗ ರೋಚಕ ಘಟ್ಟ ತಲುಪಿದೆ. ಮೊದಲೆರಡು ಕ್ಲಾಸಿಕ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಭಾರತದ ಆರ್.ಪ್ರಜ್ಞಾನಂದ ಮತ್ತು ವಿಶ್ವದ ನಂ 1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಅವರು ಇಂದು ಟೈ ಬ್ರೇಕರ್ ಆಡಲಿದ್ದಾರೆ. ಗುರುವಾರದ ಪಂದ್ಯದಲ್ಲಿ ವಿಜೇತರ ನಿರ್ಧಾರ ಆಗಲಿದೆ.
ಬುಧವಾರ ಕಾರ್ಲ್ ಸನ್ ಬಿಳಿ ಕಾಯಿಯೊಂದಿಗೆ ಹಾಗೂ ಪ್ರಜ್ಞಾನಂದ ಕಪ್ಪು ಕಾಯಿಯೊಂದಿಗೆ ಹೋರಾಟ ಆರಂಭಿಸಿದ್ದರು. ಇಲ್ಲಿ ಕಾರ್ಲ್ ಸನ್ ಅತ್ಯುತ್ತಮ ನಡೆಗಳ ಮೂಲಕ ಭಾರತೀಯನಿಗೆ ಕೌಂಟರ್ ನೀಡುವಲ್ಲಿ ಯಶಸ್ವಿಯಾದರು. ಆದರೆ 22 ನಡೆಗಳ ಬಳಿಕವೂ ಪಂದ್ಯ ಸಮಬಲದಲ್ಲೇ ಇತ್ತು. 30 ನಡೆಗಳ ಬಳಿಕ ಪಂದ್ಯವನ್ನು ಡ್ರಾಗೊಳಿಸಲಾಯಿತು.
ಇದನ್ನೂ ಓದಿ:Landslide: ಭಾರಿ ಮಳೆಗೆ ನಲುಗಿದ ಹಿಮಾಚಲ: ಕುಸಿದು ಬಿದ್ದ ಕಟ್ಟಡ, ಹಲವರು ಸಿಲುಕಿರುವ ಶಂಕೆ
ಗುರುವಾರದ ಟೈ ಬ್ರೇಕರ್‌ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ್ಯಾಪಿಡ್ ಗೇಮ್ ಗಳನ್ನು ಆಡಲಿದ್ದಾರೆ. ಇಲ್ಲಿಯೂ ವಿಜೇತರ ನಿರ್ಧಾರವಾಗದೇ ಹೋದರೆ ಮತ್ತೆ ತಲಾ 5 ನಿಮಿಷಗಳ 2 ರ್ಯಾಪಿಡ್ ಗೇಮ್ ಗಳ ಅವಕಾಶ ನೀಡಲಾಗುತ್ತದೆ. ಈ ರ್ಯಾಪಿಡ್ ಗೇಮ್ ಗಳೂ ಡ್ರಾಗೊಂಡರೆ ಸಡನ್ ಡೆತ್ ಮೂಲಕ ಒಂದು ಬ್ಲಿಟ್ಜ್ ಗೇಮ್ ಆಡಲಾಗುತ್ತದೆ. ಇಲ್ಲಿ ಗೆದ್ದವರು ಚಾಂಪಿಯನ್ ಆಗಿ ಮೂಡಿಬರಲಿದ್ದಾರೆ. ಹೀಗಾಗಿ ಗುರುವಾರದ ಚದುರಂಗ ಸಮರ ಅತ್ಯಂತ ರೋಚಕವಾಗಿ ಸಾಗುವುದರಲ್ಲಿ ಅನುಮಾನವಿಲ್ಲ.
ಸೆಮಿಫೈನಲ್‌ನಲ್ಲೂ ಪ್ರಜ್ಞಾನಂದ ಟೈ ಬ್ರೇಕರ್‌ನಲ್ಲಿ ಗೆಲುವು ಕಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇಬ್ಬರೂ ಟೈ ಬ್ರೇಕರ್ ಮೂಲಕವೇ ಫಲಿತಾಂಶ ಪಡೆಯಲು ನಿರ್ಧರಿಸಿರಲೂಬಹುದು