Advertisement

Chess World Cup ಫೈನಲ್‌ಗೇರಿದ ಪ್ರಜ್ಞಾನಂದ

01:04 AM Aug 22, 2023 | Team Udayavani |

ಬಾಕು (ಅಜರ್‌ಬೈಜಾನ್‌): ಇಲ್ಲಿ ನಡೆಯುತ್ತಿರುವ ಫಿಡೆ ಚೆಸ್‌ ವಿಶ್ವಕಪ್‌ ಕೂಟದಲ್ಲಿ ಭಾರತದ ಅತೀ ಕಿರಿಯ ವಯಸ್ಸಿನ ಗ್ರ್ಯಾನ್‌ ಮಾಸ್ಟರ್‌ ಆರ್‌. ಪ್ರಜ್ಞಾನಂದ ಫೈನಲ್‌ ಪ್ರವೇಶಿಸುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ 18 ವರ್ಷದ ಈ ಚೆಸ್‌ ಪ್ರತಿಭೆ ವಿಶ್ವದ ತೃತೀಯ ಶ್ರೇಯಾಂಕಿತ ಅಮೆರಿಕದ ಗ್ರ್ಯಾನ್‌ ಮಾಸ್ಟರ್‌ ಫೇಬಿಯಾನೊ ಕರುವಾನಾ ಅವರನ್ನು ಟೈಬ್ರೇಕರ್‌ನಲ್ಲಿ 3.5-2.5 ಅಂತರದಿಂದ ಪರಾಭವಗೊಳಿಸಿದರು.

ಫೈನಲ್‌ನಲ್ಲಿ ಅವರು ವಿಶ್ವದ ಅಗ್ರ ಶ್ರೇಯಾಂಕದ ನಾರ್ವೇಯ ಗ್ರ್ಯಾನ್‌ ಮಾಸ್ಟರ್‌ ಮ್ಯಾಗ್ನಸ್‌ ಕಾರ್ಲ್ಸನ್‌ ಅವರನ್ನು ಎದುರಿಸಲಿದ್ದಾರೆ. ಪಂದ್ಯದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಜ್ಞಾನಂದ, “ಪ್ರಸ್ತುತ ಕೂಟದಲ್ಲಿ ತಾನು ಸಾಗಿಬಂದ ಹಾದಿಯನ್ನು ಸ್ಮರಿಸಿಕೊಂಡು, ಕಾರ್ಲ್ಸನ್‌ ಅವರನ್ನು ಎದುರಿಸುವ ಹಂತಕ್ಕೇರುತ್ತೇನೆ ಅಂದುಕೊಂಡಿರಲಿಲ್ಲ.

ಫೈನಲ್‌ನಲ್ಲಿ ನನ್ನ ಶ್ರೇಷ್ಠ ಪ್ರದರ್ಶನ ನೀಡುತ್ತೇನೆ’ ಎಂದಿದ್ದಾರೆ. ಮಂಗಳವಾರ ಫೈನಲ್‌ ನಡೆಯಲಿದ್ದು, ಐದು ಬಾರಿಯ ವಿಶ್ವಕಪ್‌ ಚಾಂಪಿಯನ್‌ ಕಾರ್ಲ್ಸನ್‌ ಮತ್ತು ಪ್ರಜ್ಞಾನಂದ ಎದುರಾಗಲಿದ್ದಾರೆ. ಪ್ರಜ್ಞಾನಂದ ಅವರ ಸಾಧನೆಯನ್ನು ಚೆಸ್‌ ದಂತಕಥೆ ವಿಶ್ವನಾಥ ಆನಂದ್‌ ಮೆಚ್ಚುಗೆಯ ಟ್ವೀಟ್‌ ಮೂಲಕ ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next