Advertisement
ಅಂತಿಮ ಸುತ್ತಿನ ಹೋರಾಟದಲ್ಲಿ ಭಾರತ “ಬಿ’ ತಂಡವು ಜರ್ಮನಿ ತಂಡವನ್ನು 3-1 ಅಂತರದಿಂದ ಸೋಲಿಸಿದೆ. “ಬಿ’ ತಂಡವು ಒಟ್ಟಾರೆ 18 ಅಂಕ ಗಳಿಸಿ ಈ ಸಾಧನೆ ಮಾಡಿತು. ಚೆಸ್ ಒಲಿಂಪಿಯಾಡ್‌ನಲ್ಲಿ ಇದು ಭಾರತಕ್ಕೆ ಸಿಕ್ಕಿದ ಎರಡನೇ ಕಂಚಿನ ಪದಕವಾಗಿದೆ. 2014ರ ಋತುವಿನಲ್ಲೂ ಭಾರತ ಕಂಚು ಜಯಿಸಿತ್ತು.
ಅಗ್ರ ಶ್ರೇಯಾಂಕದ ಭಾರತ “ಎ’ ವನಿತಾ ತಂಡವು 11ನೇ ಸುತ್ತಿನಲ್ಲಿ ಅಮೆರಿಕ ವಿರುದ್ಧ 1-3 ಅಂತರದಿಂದ ಸೋತು ಆಘಾತಕ್ಕೆ ಒಳಗಾಯಿತು. ಕೊನೆರು ಹಂಪಿ ನೇತೃತ್ವದ ತಂಡ ಮೂರನೇ ಸ್ಥಾನ ಪಡೆಯಿತು. ಯುದ್ಧದಿಂದ ಜರ್ಜ ರಿತವಾಗಿರುವ ಉಕ್ರೇನ್ ತಂಡವು ಜಾರ್ಜಿಯಾ ತಂಡವನ್ನು ಸೋಲಿಸಿ ವನಿತಾ ವಿಭಾಗದಲ್ಲಿ ಚಿನ್ನ ಜಯಿಸಿತು.
Related Articles
ಭಾರತಕ್ಕೆ 7 ಪದಕ
ತಂಡ ವಿಭಾಗದಲ್ಲಿ ಕಂಚು ಗೆದ್ದಿರುವ ಭಾರತ ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ ಸಹಿತ ಏಳು ಪದಕ ಜಯಿಸಿದೆ. ಗುಕೇಶ್ ಮತ್ತು ಸರಿನ್ ಅನುಕ್ರಮವಾಗಿ ಅಗ್ರ ಮತ್ತು ಎರಡನೇ ಬೋರ್ಡ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಅರ್ಜುನ್ ಎರಿಗೈಸಿ ಬೆಳ್ಳಿ ಗೆದ್ದರೆ ಆರ್, ಪ್ರಜ್ಞಾನಂದ, ಆರ್. ವೈಶಾಲಿ, ತನಿಯಾ ಸಚ್‌ದೇವ್ ಮತ್ತು ದಿವ್ಯಾ ದೇಶ್‌ಮುಖ್ ಕಂಚು ಗೆದ್ದಿದ್ದಾರೆ.
Advertisement
ಮುಕ್ತ ಮತ್ತು ವನಿತೆಯರ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಸಾಧನೆಗಾಗಿ ಭಾರತವು ಪ್ರತಿಷ್ಠಿತ ಗಪ್ರಿಂದಾಶ್ವಿಲಿ ಕಪ್ ಗೆದ್ದುಕೊಂಡಿತು. ಭಾರತವು ಇದೇ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿ ಗಮನ ಸೆಳೆದಿದೆ.