Advertisement

ಕರ್ನಾಟಕದಲ್ಲಿ ಮತ್ತಷ್ಟು ಮಳೆ: ಚಿರಾಪುಂಜಿಯಲ್ಲಿ ದಾಖಲೆಯ ಮಳೆ

12:20 AM Jun 16, 2022 | Team Udayavani |

ಹೊಸದಿಲ್ಲಿ: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಮಾರುತಗಳು ಮತ್ತಷ್ಟು ಗಾಢವಾಗಿ ವಿಸ್ತರಿಸಿದ್ದು, ಅದರ ಪರಿಣಾಮ, ಈ ರಾಜ್ಯಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Advertisement

ಸದ್ಯಕ್ಕೆ ಈಶಾನ್ಯ ಹಾಗೂ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂಗೆ ಸೇರಿದ ಹಿಮಾ ಲಯಕ್ಕೆ ಹತ್ತಿರವಿರುವ ಪ್ರಾಂತಗಳಲ್ಲಿ ಮುಂದಿನ 5 ದಿನಗಳವರೆಗೆ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯ ಕಡೆಯಿಂದ ನೈರುತ್ಯ ದಿಕ್ಕಿನ ಕಡೆಗೆ ಬರವಾದ ಗಾಳಿ ಬೀಸು ತ್ತಿದೆ. ಇದು ನೈರುತ್ಯ ಮುಂಗಾರು ಮಾರುತಗಳನ್ನು ಮತ್ತಷ್ಟು ದೂರಕ್ಕೆ ಕೊಂಡೊ ಯ್ಯಲಿದ್ದು, ಕರ್ನಾಟಕ, ತಮಿಳು ನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಇದಲ್ಲದೆ, ಅಸ್ಸಾಂ, ಮೇಘಾಲಯದಲ್ಲೂ ಹೆಚ್ಚು ಮಳೆಯಾಗುತ್ತದೆ ಎಂದು ಇಲಾಖೆ ವಿವರಿಸಿದೆ.

ಚಿರಾಪುಂಜಿಯಲ್ಲಿ ದಾಖಲೆಯ ಮಳೆ
ವಿಶ್ವದಲ್ಲೇ ಅತೀ ಹೆಚ್ಚು ಮಳೆ ಸುರಿ ಯುವ ಪ್ರದೇಶವಾಗಿರುವ ಮೇಘಾ ಲಯದ ಚಿರಾಪುಂಜಿಯಲ್ಲಿ ದಾಖಲೆ ಯ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗೆ 8.30ರಿಂದ ಬುಧವಾರ ಬೆ. 8.30ರ ವರೆಗೆ ಒಟ್ಟು 811.6 ಮಿ. ಮೀ. ಮಳೆಯಾಗಿದೆ. ಇದು ಕಳೆದ 27 ವರ್ಷಗಳ ಜೂನ್‌ ತಿಂಗಳಲ್ಲಿ ಒಂದೇ ದಿನದಲ್ಲಿ ಸುರಿದ ಗರಿಷ್ಠ
ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next