Advertisement

Karnataka; ವಿವಿಧೆದೆ ಮಳೆ: ಸಿಂಧನೂರು,ಎನ್.ಆರ್.ಪುರದಲ್ಲಿ ಸಿಡಿಲಿಗೆ ಇಬ್ಬರು ಬಲಿ

11:38 PM Apr 13, 2024 | Vishnudas Patil |

ಬೆಂಗಳೂರು: ರಾಜ್ಯದ ವಿವಿಧಜಿಲ್ಲೆಗಳಲ್ಲಿ ಶನಿವಾರ ಬಿರುಗಾಳಿ ಸಹಿತ ಮಳೆಯಾಗಿದ್ದು ಸಿಡಿಲಿನ ಅಬ್ಬರಕ್ಕೆ ಓರ್ವ ಬಲಿಯಾಗಿದ್ದಾನೆ.

Advertisement

 ಸಿಡಿಲು ಬಡಿದು ಬಾಲಕ, ಮೇಕೆ ಸಾವು
ಸಿಂಧನೂರು ತಾಲೂಕಿನ ಮಲ್ಕಾಪುರ ಕ್ಯಾಂಪಿನಲ್ಲಿ ಶನಿವಾರ ಸಿಡಿಲು ಬಡಿದು ಕುರಿ ಮೇಯಿಸುತ್ತಿದ್ದ ಬಾಲಕ ಹಾಗೂ ಒಂದು ಮೇಕೆ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಅಮರಾಪುರ ಗ್ರಾಮದ ಶಾಂತಕುಮಾರ ಬಸವರಾಜ (16) ಮೃತ ದುರ್ದೈವಿ.

ಮಲ್ಕಾಪುರ ಕ್ಯಾಂಪಿನ ಹೊಲದಲ್ಲಿ ಕುರಿ ಮೇಯಿಸುವಾಗ ಏಕಾಏಕಿ ಗುಡುಗು-ಸಿಡಿಲು, ಮಳೆ ಸುರಿಯಲಾರಂಭಿಸಿತು. ಶಾಂತಕುಮಾರ ಮೇಲೆ ಸಿಡಿಲು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನದ ಗೋಪುರ ಹಾನಿ

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿತಾಂಡ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಗೋಪುರಕ್ಕೆ ಹಾನಿಯಾಗಿದೆ. ಬಿರುಗಾಳಿ, ಮಳೆ ಸಿಡಿಲಿಗೆ ಸಿಡಿಲಿಗೆ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. 8 ವರ್ಷದ ಹಿಂದೆ ದೇವಸ್ಥಾನದ ಗೋಪುರ ನಿರ್ಮಿಸಲಾಗಿತ್ತು.

Advertisement

ಚಿಕ್ಕಮಗಳೂರು : ಮಳೆ ಅಬ್ಬರ

ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ತೋಟಕ್ಕೆ ಹೋಗಿದ್ದ ರೈತ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಅರಳಿಕೊಪ್ಪದಲ್ಲಿ ನಡೆದಿದೆ. ಶಂಕರ್ (48) ಸಿಡಿಲು ಬಡಿದು ಮೃತ ಪಟ್ಟ ದುರ್ದೈವಿ.

ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ನಗರ , ಮಲ್ಲೇನಹಳ್ಳಿ ,ಖಾಂಡ್ಯ, ಮುತ್ತೋಡಿ ಭಾಗದಲ್ಲಿ 3 ದಿನಗಳಿಂದ ಸಂಜೆ ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಯಲುಸೀಮೆ ತರೀಕೆರೆ, ಕಡೂರಿನಲ್ಲಿ ಸಾಧಾರಣ ಮಳೆಯಾಗಿದೆ.ಬಿಸಿಲ ಝಳಕ್ಕೆ ಕಂಗಲಾಗಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next