ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ಮುಂಬೈ ತಂಡ, ಚೆನ್ನೈಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಇಂದಿನ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಾಗಿದ್ದು, ಹೀಗಾಗಿ ಕೀರಾನ್ ಪೊಲಾರ್ಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈಗಾಗಲೇ ಚೆನ್ನೈ ಸತತ ಸೋಲಿನಿಂದ ಕಂಗೆಟ್ಟಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿದೆ. ಧೋನಿ ಬಳಗಕ್ಕೆ ಹಿಂದೆಂದೂ ಇಂಥ ದಯನೀಯ ಸ್ಥಿತಿ ಎದುರಾಗಿರಲಿಲ್ಲ. ಬ್ಯಾಟಿಂಗ್-ಬೌಲಿಂಗ್ ಎರಡೂ ಕೂಡ ಕೈಕೊಡುತ್ತಿದೆ. ಇಂದು ಸೋತರೆ ಫ್ಲೇ ಆಪ್ ರೇಸ್ ನಿಂದ ಬಹುತೇಕ ಹೊರಬಿದ್ದಾಂತಾಗುತ್ತದೆ.
ಇನ್ನೊಂದೆಡೆ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಮುಂಬೈ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನಿಯಾಗಿದ್ದು, ಪ್ಲೇ ಆಫ್ ಬಾಗಿಲಲ್ಲಿ ಬಂದುನಿಂತಿದೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡ ಬಲಿಷ್ಟವಾಗಿದ್ದು, ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
ಇತ್ತಂಡಗಳೂ 29 ಬಾರಿ ಮುಖಾಮುಖಿಯಾಗಿದ್ದು ಮುಂಬೈ 17ರಲ್ಲಿ ಹಾಗೂ ಚೆನ್ನೈ 12 ರಲ್ಲಿ ಗೆಲುವು ಸಾಧಿಸಿದೆ.
ಆಡುವ ಹನ್ನೊಂದರ ಬಳಗ
ಚೆನ್ನೈ ಸೂಪರ್ ಕಿಂಗ್ಸ್ : ಸ್ಯಾಮ್ ಕರ್ರನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎನ್ ಜಗದೀಸನ್, ಎಂ.ಎಸ್.ಧೋನಿ (ನಾಯಕ), ರುತುರಾಜ್ ಗಾಯಕವಾಡ್, ರವೀಂದ್ರ ಜಡೇಜಾ, ದೀಪಕ್ ಚಹರ್, ಶಾರ್ದುಲ್ ಠಾಕೂರ್, ಜೋಶ್ ಹ್ಯಾಜಲ್ ವುಡ್, ಇಮ್ರಾನ್ ತಾಹಿರ್
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ , ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ನಾಯಕ), ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ