Advertisement

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

07:05 PM Oct 29, 2020 | Mithun PG |

ದುಬೈ: ಐಪಿಎಲ್ 49ನೇ ಪಂದ್ಯದಲ್ಲಿ, ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಅಧಿಕೃತವಾಗಿ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ.

Advertisement

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ  ಬೌಲಿಂಗ್ ಆಯ್ದುಕೊಂಡಿದ್ದಾರೆ.

ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲುಂಡ ಕೆಕೆಆರ್ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮಾರ್ಗನ್ ಬಳಗ 12 ಪಂದ್ಯಗಳಿಂದ 6 ಗೆಲುವು ಸಾಧಿಸಿ 12 ಅಂಕಗಳಿಸಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಕೆಕೆಆರ್ ಫ್ಲೇ ಆಫ್ ಹಾದಿ ಸುಗಮವಾಗಲಿದೆ.

ಇನ್ನು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ, ಇಂದು ಕೋಲ್ಕತ್ತಾಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಗೆಲ್ಲುವ ಉತ್ಸಾಹದಲ್ಲಿದೆ.

ಆಡುವ ಹನ್ನೊಂದರ ಬಳಗ

Advertisement

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ ವಾಡ್ , ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ಎನ್ ಜಗದೀಸನ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಕರ್ನ್ ಶರ್ಮಾ, ದೀಪಕ್ ಚಹರ್, ಲುಂಗಿ ಎನ್ ಗಿಡಿ

ಕೋಲ್ಕತಾ ನೈಟ್ ರೈಡರ್ಸ್: ಶುಭ್ ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯೊನ್ ಮಾರ್ಗನ್ (ನಾಯಕ), ಸುನಿಲ್ ನರೈನ್, ರಿಂಕು ಸಿಂಗ್, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯೂಸನ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next