Advertisement
ಸೋಮವಾರದ ಐಪಿಎಲ್ ಮುಖಾಮುಖೀಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟಿಗೆ 188 ರನ್ ಪೇರಿಸಿದರೆ, ಸ್ಯಾಮ್ಸನ್ ಪಡೆ 9 ವಿಕೆಟಿಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದೂ ಅರ್ಧ ಶತಕ ಕಂಡುಬರದಿದ್ದುದು ಈ ಪಂದ್ಯದ ವಿಶೇಷ.
Related Articles
33 ರನ್ ಮಾಡಿದ ಡು ಪ್ಲೆಸಿಸ್ ಅವರದೇ ಚೆನ್ನೈ ಸರದಿಯ ಗರಿಷ್ಠ ವೈಯಕ್ತಿಕ ಮೊತ್ತ. ರಾಯುಡು 27, ಅಲಿ 26 ರನ್ ಹೊಡೆದರು. ಅಂತಿಮ 3 ಓವರ್‌ಗಳಲ್ಲಿ ಚೆನ್ನೈ ಮೊತ್ತದಲ್ಲಿ ದಿಢೀರ್ ಏರಿಕೆ ಕಂಡುಬಂತು.
Advertisement
ಋತುರಾಜ್ ಗಾಯಕ್ವಾಡ್ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗೆ ರವಾನಿಸಿ ಚೆನ್ನೈಗೆ ಶುಭಾರಂಭ ಒದಗಿಸಿದರು. ಆದರೆ ಪವರ್ ಪ್ಲೇ ಅವಧಿಯೊಳಗೆ ಆರಂಭಿಕರಿಬ್ಬರ ಆಟವೂ ಮುಗಿಯಿತು. 10 ರನ್ ಮಾಡಿದ ಗಾಯಕ್ವಾಡ್ ಅವರನ್ನು ಔಟ್ ಮಾಡುವ ಮೂಲಕ ಮುಸ್ತಫಿಜುರ್ ರಾಜಸ್ಥಾನ್‌ಗೆ ಮೊದಲ ಯಶಸ್ಸು ತಂದಿತ್ತರು.
ಮತ್ತೋರ್ವ ಓಪನರ್ ಫಾ ಡು ಪ್ಲೆಸಿಸ್ ಸಿಡಿದು ನಿಲ್ಲುವ ಸೂಚನೆ ನೀಡಿದರು. ಉನಾದ್ಕತ್ ಮೇಲೆರಗಿ ಹೋಗಿ ಬೌಂಡರಿ, ಸಿಕ್ಸರ್ ಸುರಿಮಳೆಗೈದರು. ಆದರೆ 6ನೇ ಓವರ್‌ನ “ಸೌತ್ ಆಫ್ರಿಕನ್ ಬ್ಯಾಟಲ್’ನಲ್ಲಿ ಕ್ರಿಸ್ ಮಾರಿಸ್ ಗೆದ್ದು ಬಂದರು. 17 ಎಸೆತಗಳಿಂದ 33 ರನ್ (4 ಬೌಂಡರಿ, 2 ಸಿಕ್ಸರ್) ಬಾರಿಸಿದ ಡು ಪ್ಲೆಸಿಸ್ ಅವರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ 2 ವಿಕೆಟಿಗೆ 46 ರನ್ ಗಳಿಸಿತು.
ಮುಂದಿನದು ಮೊಯಿನ್ ಅಲಿ ಅವರ ಅಬ್ಬರದ ಆಟ. ಸುರೇಶ್ ರೈನಾ ಜತೆಯಲ್ಲಿದ್ದರೂ ಹೆಚ್ಚಿನ ಸ್ಟ್ರೈಕ್ ಪಡೆದುಕೊಳ್ಳುತ್ತ ಹೋದ ಅಲಿ ಚೆನ್ನೈಗೆ ಹೊಸ ಭರವಸೆ ಮೂಡಿಸಿದರು; 20 ಎಸೆತಗಳಿಂದ 26 ರನ್ ಬಾರಿಸಿದರು (1 ಬೌಂಡರಿ, 2 ಸಿಕ್ಸರ್). ರಾಹುಲ್ ತೇವಟಿಯಾ ಮೊದಲ ಓವರ್‌ನಲ್ಲೇ ಈ ಬಿಗ್ ವಿಕೆಟ್ ಹಾರಿಸಿದರು. ಅಲಿ ಸಾಹಸದಿಂದ ಚೆನ್ನೈ ಮೊದಲ 10 ಓವರ್‌ಗಳಲ್ಲಿ 3 ವಿಕೆಟಿಗೆ 82 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
ಅಂತಿಮ 3 ಓವರ್‌ನಲ್ಲಿ 44 ರನ್ಆದರೆ 14ನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಅವಳಿ ಆಘಾತ ನೀಡುವುದರೊಂದಿಗೆ ರಾಜಸ್ಥಾನ್ ಮೇಲುಗೈ ಸಾಧಿಸಿತು. ಅಂಬಾಟಿ ರಾಯುಡು (27) ಮತ್ತು ಸುರೇಶ್ ರೈನಾ (18) ವಿಕೆಟ್ ಪತನ ಚೆನ್ನೈಗೆ ಹಿನ್ನಡೆಯಾಗಿ ಪರಿಣಮಿಸಿತು. 15 ಓವರ್ ಅಂತ್ಯಕ್ಕೆ ಧೋನಿ ಪಡೆ 5 ವಿಕೆಟ್ ನಷ್ಟಕ್ಕೆ 127 ರನ್ ಮಾಡಿತ್ತು. ಡೆತ್ ಓವರ್‌ಗಳಲ್ಲಿ ಒಟ್ಟುಗೂಡಿದ ನಾಯಕ ಧೋನಿ ಮತ್ತು ರವೀಂದ್ರ ಜಡೇಜ ಸಿಡಿಯಲು ವಿಫಲರಾದರು. ಸ್ಕೋರ್ ಪಟ್ಟಿ
ಚೆನ್ನೈ ಸೂಪರ್‌ಕಿಂಗ್ಸ್
ಗಾಯಕ್ವಾಡ್ ಸಿ ದುಬೆ ಬಿ ಮುಸ್ತಫಿಜುರ್ 10
ಫಾ ಡು ಪ್ಲೆಸಿಸ್ ಸಿ ಪರಾಗ್ ಬಿ ಮಾರಿಸ್ 33
ಮೊಯಿನ್ ಅಲಿ ಸಿ ಪರಾಗ್ ಬಿ ತೇವಟಿಯಾ 26
ಸುರೇಶ್ ರೈನಾ ಸಿ ಮಾರಿಸ್ ಬಿ ಸಕಾರಿಯಾ 18
ರಾಯುಡು ಸಿ ಪರಾಗ್ ಬಿ ಸಕಾರಿಯಾ 27
ರವೀಂದ್ರ ಜಡೇಜ ಸಿ ಸಂಜು ಬಿ ಮಾರಿಸ್ 8
ಎಂ. ಎಸ್. ಧೋನಿ ಸಿ ಬಟ್ಲರ್ ಬಿ ಸಕಾರಿಯಾ 18
ಸ್ಯಾಮ್ ಕರನ್ ರನೌಟ್ 13
ಡ್ವೇನ್ ಬ್ರಾವೊ ಔಟಾಗದೆ 20
ಶಾದೂìಲ್ ಠಾಕೂರ್ ರನೌಟ್ 1
ದೀಪಕ್ ಚಹರ್ ಔಟಾಗದೆ 0
ಇತರ 14
ಒಟ್ಟು (9 ವಿಕೆಟಿಗೆ) 188
ವಿಕೆಟ್ ಪತನ: 1-25, 2-45, 3-78, 4-123, 5-125, 6-147, 7-163, 8-174, 9-180.
ಬೌಲಿಂಗ್;
ಜೈದೇವ್ ಉನಾದ್ಕತ್ 4-0-40-0
ಚೇತನ್ ಸಕಾರಿಯಾ 4-0-36-3
ಮುಸ್ತಫಿಜುರ್ ರೆಹಮಾನ್ 4-0-37-1
ಕ್ರಿಸ್ ಮಾರಿಸ್ 4-0-33-2
ರಾಹುಲ್ ತೇವಟಿಯಾ 3-0-21-1
ರಿಯಾನ್ ಪರಾಗ್ 1-0-16-0 ರಾಜಸ್ಥಾನ್ ರಾಯಲ್ಸ್
ಜಾಸ್ ಬಟ್ಲರ್ ಬಿ ಜಡೇಜ 49
ಮನ್ ವೋಹ್ರಾ ಸಿ ಜಡೇಜ ಬಿ ಕರನ್ 14
ಸಂಜು ಸ್ಯಾಮ್ಸನ್ ಸಿ ಬ್ರಾವೊ ಬಿ ಕರನ್ 1
ಶಿವಂ ದುಬೆ ಎಲ್‌ಬಿಡಬ್ಲ್ಯು ಬಿ ಜಡೇಜ 17
ಡೇವಿಡ್ ಮಿಲ್ಲರ್ ಎಲ್‌ಬಿಡಬ್ಲ್ಯು ಬಿ ಅಲಿ 2
ರಿಯಾನ್ ಪರಾಗ್ ಸಿ ಜಡೇಜ ಬಿ ಅಲಿ 3
ತೇವಟಿಯಾ ಸಿ ಗಾಯಕ್ವಾಡ್ ಬಿ ಬ್ರಾವೊ 20
ಕ್ರಿಸ್ ಮಾರಿಸ್ ಸಿ ಜಡೇಜ ಬಿ ಅಲಿ 0
ಉನಾದ್ಕತ್ ಸಿ ಜಡೇಜ ಬಿ ಠಾಕೂರ್ 24
ಚೇತನ್ ಸಕಾರಿಯಾ ಔಟಾಗದೆ 0
ಮುಸ್ತಫಿಜುರ್ ಔಟಾಗದೆ 0
ಇತರ 13
ಒಟ್ಟು (9 ವಿಕೆಟಿಗೆ) 143
ವಿಕೆಟ್ ಪತನ: 1-30, 2-45, 3-87, 4-90, 5-92, 6-95, 7-95, 8-137, 9-143.
ಬೌಲಿಂಗ್;
ದೀಪಕ್ ಚಹರ್ 3-0-32-0
ಸ್ಯಾಮ್ ಕರನ್ 4-0-24-2
ಶಾರ್ದೂಲ್ ಠಾಕೂರ್ 3-0-20-1
ರವೀಂದ್ರ ಜಡೇಜ 4-0-28-2
ಡ್ವೇನ್ ಬ್ರಾವೊ 3-0-28-1
ಮೊಯಿನ್ ಅಲಿ 3-0-7-3