Advertisement

IPL ಜಿದ್ದಾಜಿದ್ದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ

07:36 PM Apr 30, 2023 | Team Udayavani |

ಚೆನ್ನೈ : ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ಭಾನುವಾರ ನಡೆದ ಐಪಿಎಲ್ ನ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್ ಗಳ ಜಯಭೇರಿ ಬಾರಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಡೆವೊನ್ ಕಾನ್ವೇ 92 ರನ್ (52 ಎಸೆತ) ಭರ್ಜರಿ ಆಟವಾಡಿದರು. ಋತುರಾಜ್ ಗಾಯಕ್ವಾಡ್ 37, ಶಿವಂ ದುಬೆ 28 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಪಂಜಾಬ್ ಕೊನೆಯ ಓವರ್ ವರೆಗೆ ಹೋರಾಟ ಸಂಘಟಿಸಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕೊನೆಯ ಓವರ್ ನಲ್ಲಿ 9 ರನ್ ಗಳ ಅಗತ್ಯವಿತ್ತು. ಕ್ರೀಸ್ ನಲ್ಲಿದ್ದ ಸಿಕಂದರ್ ರಜಾ ಗೆಲುವು ಸಾಧ್ಯವಾಗಿಸಿದರು. ಕೊನೆಯ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿತ್ತು. ರಜಾ ಮೂರು ರನ್ ಗಳಿಸಿ ಗೆಲುವು ಸಾಧ್ಯವಾಗಿಸಿದರು. ಪ್ರಭಾಸಿಮ್ರಾನ್ ಸಿಂಗ್ 42, ನಾಯಕ ಶಿಖರ್ ಧವನ್ 28, ಲಿಯಾಮ್ ಲಿವಿಂಗ್ಸ್ಟೋನ್ 40, ಸ್ಯಾಮ್ ಕರ್ರಾನ್ 29, ಜಿತೇಶ್ ಶರ್ಮಾ 21 ರನ್ ಗಳ ಕೊಡುಗೆ ನೀಡಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ರಜಾ 13(7) ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next