Advertisement

ಡುಪ್ಲೆಸಿಸ್, ವ್ಯಾಟ್ಸನ್ ಬೊಂಬಾಟ್ ಆಟ ; ಚೆನ್ನೈಗೆ 10 ವಿಕೆಟ್ ಜಯ

12:56 AM Oct 05, 2020 | Hari Prasad |

ದುಬಾಯಿ: ಫಾಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ ಕಿಂ‍ಗ್ಸ್ ಇಲೆವನ್ ಪಂಜಾಬ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯವನ್ನು ಸಂಪಾದಿಸಿದೆ.

Advertisement

ಪಂಜಾಬ್ ನೀಡಿದ 179 ರನ್ ಗಳ ಸವಾಲನ್ನು ಬೆನ್ನಟ್ಟಿದ ಚೆನ್ನೈ 17.4 ಓಬರ್ ಗಳಲ್ಲಿ 181 ರನ್ ಗಳಿಸುವ ಮೂಲಕ ಈ ಭರ್ಜರಿ ಜಯವನ್ನು ಸಂಪಾದಿಸಿತು.

ಚೆನ್ನೈ ಪರ ಭರ್ಜರಿ ಓಪನಿಂಗ್ ಜೊತೆಯಾಟ ನೀಡಿದ ಈ ಆಸೀಸ್ ಜೋಡಿ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು.

ಫಾ ಡು’ಪ್ಲೆಸಿಸ್ 53 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿದರು. ಇದರಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಇನ್ನೋರ್ವ ಓಪನರ್ ಶೇನ್ ವ್ಯಾಟ್ಸನ್ 53 ಎಸೆತಗಳಲ್ಲಿ 83 ರನ್ ಬಾರಿಸಿದರು. ವ್ಯಾಟ್ಸನ್ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next