Advertisement

ಚೆಲ್ಸಿಯಾ ಪುಟ್ಟ ನಗರದಲ್ಲಿ ಸೋಂಕಿತರ ಪ್ರತ್ಯೇಕಿಸುವ ಸವಾಲು

11:59 AM Apr 29, 2020 | sudhir |

ಚೆಲ್ಸಿಯಾ: ಇಂಗ್ಲೆಂಡ್‌ನ‌ ಮ್ಯಾಸಚೂಸೆಟ್ಸ್‌ನ ಒಂದು ಪುಟ್ಟ ನಗರ ಚೆಲ್ಸಿಯಾ. ದಕ್ಷಿಣಕ್ಕೆ ಥೇಮ್ಸ… ನದಿಯಿಂದ ಸುತ್ತುವರಿದಿದೆ. ನದಿಯ ಮುಂಭಾಗವು ಚೆಲ್ಸಿಯಾ ಸೇತುವೆಯಿಂದ ಚೆಲ್ಸಿಯಾ ಒಡ್ಡು, ಚೆಯೆನ್‌ ವಾಕ್‌, ಲಾಟ್ಸ್‌ ರಸ್ತೆ ಮತ್ತು ಚೆಲ್ಸಿಯಾ ಬಂದರಿನ ಉದ್ದಕ್ಕೂ ಸಾಗುತ್ತದೆ. ಜನನಿಬಿಡ ನಗರವಾದ ಇಲ್ಲಿ ವಲಸಿಗರೇ ಹೆಚ್ಚಿದ್ದು, ಅಮೆರಿದಲ್ಲಿನ ನಿವಾಸಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ವಾಸಿಸುವ ಶೇ. 6.53ರಷ್ಟು ಮಂದಿ ಜನಿಸಿದ್ದು ಅಮೆರಿಕದಲ್ಲಿ. ಅವರ ಕುಟುಂಬ ಇಲ್ಲಿ ನೆಲೆಸಿದೆ. ಈಗ ಕೋವಿಡ್‌ 19ನಿಂದ ಜರ್ಝರಿತವಾಗಿದೆ.

Advertisement

ಈ ನಗರವನ್ನು ವೈರಸ್‌ನಿಂದ ರಕ್ಷಿಸಲು ಅಧಿಕಾರಿಗಳು ತೀವ್ರ ಶ್ರಮಿಸುತ್ತಿದ್ದಾರೆ. ಆದರೆ ಸಣ್ಣದೊಂದು ಆಶಾಕಿರಣ ಬಿಟ್ಟರೆ ಬೇರ್ಯಾವ ಸಾಧ್ಯತೆಯೂ ತೋರುತ್ತಿಲ್ಲ. ಇಲ್ಲಿನ ಹೌಸಿಂಗ್‌ ಸೊಸೈಟಿಯೊಂದು ಅಮೆರಿಕದ ವಲಸಿಗರಿಂದಲೇ ತುಂಬಿದ್ದು, ಅಲ್ಲಿ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ ಅವರನ್ನು ಪ್ರತ್ಯೇಕಿಸಲು ಸಾಧ್ಯವಾಗದೆ ಇಡೀ ನಗರ ಭೀತಿಯಿಂದ ಇದೆ. ದೊಡ್ಡ ಸಮಸ್ಯೆಯಾಗಿ ತಲೆದೋರಿರುವುದೂ ಇದೇ ಎಂದು ವರದಿ ಮಾಡಿದೆ ದಿ ನ್ಯೂಯಾರ್ಕ್‌ ಟೈಮ್ಸ್‌.

ಮ್ಯಾಸಚೂಸೆಟ್ಸ್‌ನಲ್ಲಿ ಸೋಂಕಿನ ಪ್ರಮಾಣ ಕಳೆದ ವಾರ ಒಂದು ಲಕ್ಷಕ್ಕೆ 3,841ಕ್ಕೆ ತಲುಪಿತ್ತು. ಇದು ರಾಜ್ಯವ್ಯಾಪಿ ಸರಾಸರಿಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದ್ದು, ವೈರಸ್‌ನ ಭೀತಿ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಚೆಲ್ಸಿಯಾ ಎಂಬ ಎರಡು ಚದರ ಮೈಲಿಗಿಂತಲೂ ಕಡಿಮೆ ಪ್ರದೇಶವಿರುವ ಪುಟ್ಟ ನಗರದಲ್ಲಿ 40,000 ಜನರಿದ್ದು, ಇಲ್ಲಿ ಸುಮಾರು 1,447 ಸೋಂಕಿತರಿರುವುದು ದೃಢಪಟ್ಟಿದೆ. ಈ ಜನದಟ್ಟಣೆಯೇ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಲು ತೀರಾ ಕಷ್ಟವಾಗಿದೆ. ಯಾಕೆಂದರೆ ಒತ್ತೂತ್ತಾಗಿ ನಿವಾಸಿಗಳು ಇರಬೇಕಾದ ಅನಿವಾರ್ಯತೆ ಉದ್ಭವಿಸಿದೆ.

ಇಲ್ಲಿನ ವಸತಿ ಪ್ರಾಧಿಕಾರದ ನಿರ್ದೇಶಕ ಪಾಲ್‌ ನೋವಿಕಿ ಎಂಬವರು ಜನರನ್ನು ಸೋಂಕಿನಿಂದ ರಕ್ಷಿಸಲು ಹಾಗೂ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತೀವ್ರ ಹೆಣಗಾಡುತ್ತಿದ್ದಾರೆ. ಕೆಲವು ಸೋಂಕಿತರು ಯಾವ ಮನೆಯಲ್ಲಿÉದ್ದಾರೆ, ಅವರನ್ನು ಹೇಗೆ ಗುರುತಿಸುವುದು ಹಾಗೂ ಪ್ರತ್ಯೇಕಿಸುವುದು ಎಂದೇ ತಿಳಿಯದ ಸ್ಥಿತಿ ನೆಲೆಸಿದೆಯಂತೆ.

ಅಪಾರ್ಟ್‌ಮೆಂಟ್‌ನಲ್ಲಿರುವ ಕೆಲವರಿಗೆ ಸೋಂಕಾಗಿದ್ದು, ಅವರು ಯಾರು ಎಂಬುದನ್ನು ತಿಳಿಯಲಾಗದೇ ಆಡಳಿತವೂ ಕಂಗಾಲಾಗಿದೆ. ಯಾರನ್ನು ಎಲ್ಲಿ ಪ್ರತ್ಯೇಕಿಸುವುದು ಎಂಬುದೇ ತಿಳಿಯದೇ ಗೊಂದಲಕ್ಕೀಡಾಗಿದೆ.

Advertisement

ಇಲ್ಲಿ ಅಮೆರಿಕದವರು ಹೆಚ್ಚಿದ್ದು, ಅವರ ಮೂಲಕವೇ ವೈರಸ್‌ ಹರಡುತ್ತಿದೆ ಎಂಬ ಆರೋಪಕ್ಕೂ ಗುರಿಯಾಗಬೇಕಿದೆ. ಆದರೆ ಇಲ್ಲಿ ವೈದ್ಯಕೀಯ ಗೌಪ್ಯತೆಯನ್ನು ಕಾಪಾಡುವುದರಿಂದ ಸೋಂಕಿತರನ್ನು ಪತ್ತೆ ಮಾಡುವುದು ಬಾವಿಯಿಂದ ಸಣ್ಣ ಕಡ್ಡಿಯನ್ನು ಪ್ರತ್ಯೇಕಿಸಿದಂತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದ್ದರಿಂದ ಅಮೆರಿಕವು ಅನಾರೋಗ್ಯ ಪೀಡಿತರನ್ನು ಕುಟುಂಬದಿಂದ ಸ್ವಯಂಪ್ರೇರಣೆಯಿಂದ ಬೇರ್ಪಡಿಸಲು ಸಹಕರಿಸಬೇಕು ಎಂಬ ಆಗ್ರಹವೂ ಬಲವಾಗಿ ಕೇಳಿಬರುತ್ತಿದೆ.

ಹೀಗೆ ಸೋಂಕು ಕಂಡು ಬಂದವರಿಗೆ ನಗರದ ಅಧಿಕಾರಿಗಳು ಒಂದು ಸಲಹೆ ನೀಡಿದ್ದರು. ಕುಟುಂಬದವರು ಹಾಗೂ ಆಸುಪಾಸಿನವರಿಗೆ ಸೋಂಕು ಹರಡುವುದನ್ನು ತಡೆಯಲು ಸೋಂಕಿತರು ರವೇರಾದಲ್ಲಿರುವ 157 ಕೊಠಡಿಗಳಿಗೆ ತೆರಳುವಂತೆ ಕೇಳಿಕೊಂಡರು. ಆದರೆ 10 ದಿನಗಳ ಅವಧಿಯಲ್ಲಿ ಚೆಲ್ಸಿಯಾದ ಕೇವಲ 14 ಜನರು ಮಾತ್ರ ಆ ಹೊಟೇಲಿಗೆ ಸ್ಥಳಾಂತರಗೊಂಡಿದ್ದಾರಂತೆ. ಸೋಂಕಿನ ಅಪಾಯದ ಬಗ್ಗೆ ತಿಳಿದಿದ್ದರೂ ಹೆಚ್ಚಿನವರು ಮನೆಯಲ್ಲಿಯೇ ಇರುತ್ತಾರೆ ಎನ್ನುತ್ತದೆ ಸ್ಥಳೀಯ ಆಡಳಿತ. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವೇ ಆಗುತ್ತಿಲ್ಲ. ತಾನು ನಡೆಸುತ್ತಿರುವ ಹೊಟೇಲೊಂದರ ಕಾರ್ಮಿಕನೂ ಈ ಬಗ್ಗೆ ತನ್ನ ಮಾತನ್ನು ಕೇಳುತ್ತಿಲ್ಲ ಎನ್ನುತ್ತಾರೆ.

ಸ್ಥಳೀಯ ಆಡಳಿತದ ಮುಖ್ಯಸ್ಥರು. ಈಗಿನ ಹವಾಮಾನ ಕೂಡ ವೈರಸ್‌ ಹರಡಲು ಪೂರಕವಾಗಿದೆ ಎಂಬ ಆತಂಕ ಸ್ಥಳೀಯರದ್ದು.

ಸೋಂಕಿನ ಲಕ್ಷಣವಿಲ್ಲ
ಕಳೆದ ವಾರ ಮ್ಯಾಸಚೂಸೆಟ್ಸ್‌ನ ಜನರಲ್‌ ಆಸ್ಪತ್ರೆಯ ಸಂಶೋಧಕರು ಚೆಲ್ಸಿಯಾದ ಸುಮಾರು 200 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂವರಲ್ಲಿ ಒಬ್ಬರಿಗೆ ಸೋಂಕಿರುವುದು ತಿಳಿದು ಬಂದಿದೆ. ಅವರೆಲ್ಲರೂ ಆರೋಗ್ಯವಂತರಾಗಿಯೇ ಇದ್ದರು. ಆದರೆ ಅವರ್ಯಾರಿಗೂ ಸೋಂಕಿನ ಲಕ್ಷಣವೇ ಅನುಭವಕ್ಕೆ ಬಂದಿರಲಿಲ್ಲವಂತೆ! ಇವರು ತಮ್ಮ ಸುತ್ತಮುತ್ತಲಿನವರಿಗೆ ಸೋಂಕು ಹರಡಲಿದ್ದಾರೆ ಎಂದು ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಜಾನ್‌ ಐಫ್ರೆಟ್‌ ಹೇಳಿದ್ದು, ಇಲ್ಲಿ ಸೋಂಕು ನಿಯಂತ್ರಣ ದೊಡ್ಡ ಸವಾಲಿನ ಕೆಲಸ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next