Advertisement

Chef Chidambara; ಡಬ್ಬಿಂಗ್ ನಲ್ಲಿ ಬ್ಯುಸಿಯಾದ ಚಿದಂಬರ

12:19 PM Nov 05, 2023 | Team Udayavani |

ನಟ ಅನಿರುದ್ಧ್ ನಾಯಕನಾಗಿ ಅಭಿನಯಿಸಿರುವ ಹಾಗೂ ನಿರ್ದೇಶಕ ಎಂ.ಆನಂದರಾಜ್‌ ನಿರ್ದೇಶನದ “ಶೆಫ್ ಚಿದಂಬರ’ ಚಿತ್ರದ ಚಿತ್ರೀಕರಣ ಇತ್ತೀಚಿಗೆ ಮುಕ್ತಾಯವಾಗಿದೆ. ಪ್ರಸ್ತುತ ಲೂಪ್‌ ಸ್ಟುಡಿಯೋದಲ್ಲಿ ಚಿತ್ರಕ್ಕೆ ಡಬ್ಬಿಂಗ್‌ ನಡೆಯುತ್ತಿದೆ. ನಾಯಕ ಅನಿರುದ್ಧ್ ಮಾತಿನ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬುತಿದ್ದಾರೆ.

Advertisement

ಡಾರ್ಕ್‌ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ದಮ್ತಿ ಪಿಕ್ಚರ್ಸ್‌ ಲಾಂಛನದಲ್ಲಿ ರೂಪ ಡಿ.ಎನ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್‌ ಪರಶುರಾಮ್‌ ಬರೆದಿದ್ದಾರೆ.

ಉದಯಲೀಲ ಛಾಯಾಗ್ರಹಣ, ರಿತ್ವಿಕ್‌ ಮುರಳಿಧರ್‌ ಸಂಗೀತ ನಿರ್ದೇಶನ, ವಿಜೇತ್‌ ಚಂದ್ರ ಸಂಕಲನ, ವಿಕ್ರಾಂತ್‌ ರೋಣ ಖ್ಯಾತಿಯ ಆಶಿಕ್‌ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್‌ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೆಚೆಲ್‌ ಡೇವಿಡ್‌ ಅಭಿನಯಿಸಿದ್ದಾರೆ. ಶರತ್‌ ಲೋಹಿತಾಶ್ವ, ಕೆ.ಎಸ್‌ ಶ್ರೀಧರ್‌, ಶಿವಮಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next