Advertisement

ನೊರೆ ಕೆರೆಗಳ ಪರಿಶೀಲಿಸಿದ ನಗರಾಭಿವೃದ್ಧಿ ಸಮಿತಿ

01:31 PM Jun 07, 2017 | |

ಮಹದೇವಪುರ: ಕೇಂದ್ರ ನಗರಾಭಿವೃದ್ದಿ ಸಮಿತಿ ಅಧ್ಯಕ್ಷ ಪಿನಾಕಿ ಮಿಶ್ರಾ ಮತ್ತು ಸಂಸದೀಯ ಸಲಹಾ ಸಮಿತಿ ಸದಸ್ಯರು ಮಂಗಳವಾರ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ನೊರೆ ಹಾಗೂ ಬೆಂಕಿಯ ಕಾರಣಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿವೆ. ಈ ವಿಚಾರವಾಗಿ ಎನ್‌ಜಿಟಿಯಲ್ಲೂ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಂಗಳವಾರ ಕೇಂದ್ರ ನಗರಾಭಿವೃದ್ದಿ ತಂಡ ಎರಡು ಕೆರೆಗಳನ್ನೂ ಪರಿಶೀಲಿಸಿದ್ದು ಕೆರೆಗಳಾ ಸ್ವಚ್ಚತಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದಿವೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಪಿನಾಕಿ ಮಿಶ್ರಾ, “ನಾವಿದ್ದ ಸ್ಥಳದಿಂದ ಈ ಕೆರೆ ಬಳಿಗೆ ಬರಲು 3 ಗಂಟೆಗಳು ಬೇಕಾದವು. ಇದರಲ್ಲೇ ತಿಳಿಯುತ್ತದೆ ಸಂಚಾರ ದಟ್ಟಣೆ ಸಮಸ್ಯೆ ಎಷ್ಟಿದೆ ಎಂದು. ಅಲ್ಲದೆ, ವಾಯು ಮಾಲಿನ್ಯದ ಬಗ್ಗೆಯೂ ಅರಿವಾಗುತ್ತದೆ. ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿಗೆ ಬೆಳ್ಳಂದೂರು, ವರ್ತೂರು ಕೆರೆಗಳ ನೊರೆ, ಮಾಲಿನ್ಯ ಅಪಖ್ಯಾತಿ ತಂದುಕೊಟ್ಟಿರುವುದು ಬೇಸರದ ಸಂಗತಿ,’ ಎಂದರು. 

“ಸಂಸದ ಪಿ.ಸಿಮೋಹನ್‌ ಅವರು ಕೇಂದ್ರ ಸಚಿವ ನಿತಿನ್‌ಗಡ್ಕರಿಯೊಂದಿಗೆ ಬೆಂಗಳೂರು ನಗರದಲ್ಲಿನ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಸಮಸ್ಯೆಗಳ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿ ಅಭಿವೃದ್ದಿಗೆ ಶ್ರಮಿಸಲಾಗುವುದು,’ ಎಂದರು.

“ಹಸಿರು ನ್ಯಾಯಾಧಿಕರಣ ಅದೇಶವನ್ನು ಎಲ್ಲರೂ ಪಾಲಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಪ್ಲಾಂಟ್‌ಗಳನ್ನು ಕಡ್ಡಾಯಗೊಳಿಸಿದ್ದರೂ ಯಾರೊಬ್ಬರು ಸರಿಯಾಗಿ ನಿಯಮ ಪಾಲಿಸುತ್ತಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ,’ ಎಂದು ಹೇಳಿದರು. 

Advertisement

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, “ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಕೇಂದ್ರ ನಗರಾಭಿವೃದ್ದಿ ಸಮಿತಿಯನ್ನು ಇಲ್ಲಿಗೆ ಕರೆಸಲಾಗಿದೆ. ಇವರ ಮುಖಾಂತರ ಇನ್ನಷ್ಟು ಒತ್ತಡ ತಂದು ಅಭಿವೃದ್ಧಿಯತ್ತ ಗಮನಹರಿಸಲಾಗುತ್ತಿದೆ,’ ಎಂದರು. 

ರಾಜ್ಯಸಬಾ ಸದಸ್ಯ ಕೆ.ಸಿ ರಾಮಮೂರ್ತಿ, ಶಾಸಕ ಅರವಿಂದಲಿಂಬಾವಳಿ, ಪಾಲಿಕೆ ಸದಸ್ಯರಾದ ಎಸ್‌.ಮುನಿಸ್ವಾಮಿ,ಪುಷ್ಪ$ಮಂಜುನಾಥ್‌, ಆಶಾಸುರೇಶ್‌, ಪಾಲಿಕೆ, ಬಿಡಿಎ ಮತ್ತು ಮೆಟ್ರೋ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next