Advertisement

ಗ್ರಾಮಸ್ಥರೇ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ

07:31 AM Mar 09, 2019 | |

ಚೇಳೂರು: ಗ್ರಾಮಗಳ ಅನೇಕ ಮೂಲಭೂತ ಸೌಲಭ್ಯಗಳನ್ನು ಗ್ರಾಮವಿಕಾಸ ಯೋಜನೆಯ ಮುಖಾಂತರ ಮಾಡಿಸುತ್ತಿರುವುದು ಸರ್ಕಾರದ ಯೋಜನೆಯಾಗಿದೆ. ಈ ಕಾಮಗಾರಿ ನಡೆಯುವಾಗ ಸಾರ್ವಜನಿಕರು ಸಹಕಾರ ನೀಡಿ ನಿಮ್ಮ ಗ್ರಾಮದಲ್ಲಿ ಉತ್ತಮವಾದ ಅಭಿವೃದ್ಧಿಯ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂದು ಸಣ್ಣಕೈಗಾರಿಕ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಹೇಳಿದರು.

Advertisement

ಹಾಗಲವಾಡಿ ಹೋಬಳಿ ಶಿವಪುರ ಪಂಚಾಯತಿಯ ಗಳಿಗೇಕೆರೆ ಮತ್ತು ಅಪ್ಪಣ್ಣನಹಳ್ಳಿಯ ಗ್ರಾಮಗಳಿಗೆ ಕೆಆರ್‌ಐಡಿಎಲ್‌ ವತಿಯಿಂದ 2017-18 ಸಾಲಿನ ಮುಖ್ಯಮಂತ್ರಿಗಳ ಗ್ರಾಮ ವಿಕಾಸದ ಕ್ರಿಯಾಯೋಜನೆಯಲ್ಲಿ  2 ಗ್ರಾಮಕ್ಕೂ ತಲಾ 100 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು ಆ ಕಾಮಗಾರಿಗಳ ಪ್ರಾರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಯೋಜನೆಯಲಿ ಗ್ರಾಮದೊಳಗಿನ ಪರಿಸರವನ್ನು ಉತ್ತಮ ಪಡಿಸಲು ರಸ್ತೆ ಚರಂಡಿಗೆ ಶೇ.50 ಗ್ರಂಥಾಲಯ, ಸಾಹಿತಿ ಕಲಾದರ ಸ್ಮಾರಕ, ಸಬಾಭವನ, ಬಯಲು ರಂಗಮಂದಿರ ನಿರ್ಮಾಣ ಶೇ.12, ಯುವಕ ಯುವತಿ ಮಂಡಲಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಶೇ.12, ಸೌರ ಬೆಳಕು ದೀಪಗಳ ಆಳವಡಿಕೆ ಶೇ.3, ವೈಜ್ಞಾನಿಕ ಹಾಗೂ ಅಧುನಿಕ ರೀತಿಯಲ್ಲಿ ಸಂರಕ್ಷಣೆ ಮಾಡುವ ಘಟಕಗಳ ನಿರ್ಮಾಣಕ್ಕೆ ಶೇ.10,

ಗ್ರಾಪಂ ನಡವಳಿಕೆಗಳ ಟೆಲಿವಿಷನ್‌ ಮುಖಾಂತರ ನೇರ ಪ್ರಸಾರ ಹಾಗೂ ಮೂಲ ಸೌಕರ್ಯಕ್ಕೆ ಶೇ.2, ದೇವಾಲಯಗಳ ಜೀಣೋದ್ಧಾರ ಶೇ.6, ಫ್ಲೆಕಿ ಫ‌ಂಡ್‌ಗೆ ಶೇ.5 ಭಾಗದಲ್ಲಿ ಕೆಲಸಗಳು ನೆಡೆಯ ಬೇಕಾಗಿದೆ ಇದು ಅವರಿಗೆ ನೀಡಿರುವ ಅವಧಿಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳತ್ತಾವೆ. ಮೊದಲಿಗೆ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತದೆ. ಈ ಕಾಮಗಾರಿ ನಡೆಯುವಾಗ ಸಾರ್ವಜನಿಕರು ಸಹಕಾರ ನೀಡಿ ಎಂದರು.

ಸಚಿವರಿಗೆ ಮುತ್ತಿಗೆ: ನಮ್ಮ ಗ್ರಾಮದಲ್ಲಿ ಕುಡಿಯಲು ನೀರು ಇಲ್ಲ, ನೀರು ಬೇಕಾದರೆ ಸುಮಾರು ದೂರ ಹೊಗಬೇಕು. 5 ರಿಂದ 6 ದಿನಗಳಿಗೊಮ್ಮೆ ನೀರು ಬೀಡುತ್ತಾರೆ. ನಮ್ಮ ಗ್ರಾಮದಲ್ಲಿ 300ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದೇವೆ. ಜೊತೆಗ ಸರ್ಕಾರಿ ಶಾಲೆಯು ಸಹ ಇದ್ದು ಹಾಗೂ ಸಾರ್ವಜನಿಕರಿಗೆ ಸಮುದಾಯ ಭವನವಿಲ್ಲ ಹೀಗೆ ಅನೇಕ ರೀತಿಯ ಸೌಲಭ್ಯಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

Advertisement

ಸ್ಥಳದಲ್ಲಿಯೇ ಸೂಚನೆ ನೀಡಿದ ಸಚಿವ: ಸ್ಥಳದಲ್ಲಿಯೇ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮೊದಲು ಈ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಶಿವಪುರದಿಂದ ಗಳಿಗೇಕೆರೆಯ ಸಂಪರ್ಕದ ರಸ್ತೆಗೆ ಜಲ್ಲಿ ಹಾಕಿ ಸುಮಾರು ತಿಂಗಳದರೂ ಡಾಂಬರೀಕರಣ ಮಾಡದೇ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ.

ಆದಷ್ಟು ಬೇಗ ಡಾಂಬರೀಕರಣ ಮಾಡವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರು. ಪಿಡಿಒ ಕವಿತಾ, ಗುತ್ತಿಗೆದಾರ ಈಶ್ವರಯ್ಯ, ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಗುರುರೇಣುಕಾರಾಧ್ಯ, ಗ್ರಾಪಂ ಸದಸ್ಯರಾದ ಮೋಹನ್‌ಕುಮಾರ್‌, ಗೀತಾ, ಪಾರ್ವತಮ್ಮ, ರೇಣುಕಮ್ಮ, ಸಾಕಮ್ಮ, ಸಿದ್ದಲಿಂಗಮೂರ್ತಿ, ರಾಜಕುಮಾರ್‌, ನಿಗಮದ ನಂಜರಾಜಯ್ಯ, ಮಂಜು ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next