Advertisement

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

11:49 AM Apr 29, 2024 | Team Udayavani |

ಬೆಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ಯಾಂಕ್‌ನ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ನ ಮುಖ್ಯ ಕ್ಯಾಷಿಯರ್‌ ಹಾಗೂ ಎಲ್‌ಐಸಿ ಏಜೆಂಟ್‌ಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯದ ಜೈಲು ಶಿಕ್ಷೆ, ಲಕ್ಷಾಂತರ ರೂ. ದಂಡ ವಿಧಿಸಿದೆ.

Advertisement

ಬಳ್ಳಾರಿಯ ಹೊಸಪೇಟೆ ತಾಲೂಕಿನ ಅಣೆಕಟ್ಟು ರಸ್ತೆ ಶಾಖೆಯ ರಾಷ್ಟ್ರೀಕೃತ ಬ್ಯಾಂಕ್‌ನ ಮುಖ್ಯ ಕ್ಯಾಷಿಯರ್‌ ಎಸ್‌.ಗೋಪಾಲಕೃಷ್ಣ ಮತ್ತು ಎಲ್‌ಐಸಿ ಏಜೆಂಟ್‌ ಕೆ.ರಾಘವೇಂದ್ರಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿರುವ ಸಿಬಿಐ ಕೋರ್ಟ್‌, ಕ್ಯಾಷಿಯರ್‌ ಗೋಪಾಲಕೃಷ್ಣನಿಗೆ 2,10 ಲಕ್ಷ ರೂ. ದಂಡ ಹಾಗೂ ಎಲ್‌ಐಸಿ ಏಜೆಂಟ್‌ ರಾಘವೇಂದ್ರಗೆ 1.60 ಲಕ್ಷ ರೂ. ದಂಡ ವಿಧಿಸಿದೆ.

ಆರೋಪಿಗಳ ಪೈಕಿ ಗೋಪಾಲಕೃಷ್ಣ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು 2016ರ ಅಪನಗದೀಕರಣ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂ ಸಿ ಬ್ಯಾಂಕ್‌ಗೆ ಸೇರಿದ 101 ಚೆಕ್‌ಗಳನ್ನು ಯಾವುದೇ ದಾಖಲೆಗಳನ್ನು ಪಡೆಯದೆ, ರಾಘವೇಂದ್ರ ನಿಗೆ ನೀಡಿದ್ದ. ಈತ ಈ ಚೆಕ್‌ಗಳನ್ನು ಬೇರೆ ಬೇರೆ ಹೆಸರಿನಲ್ಲಿ ಅದೇ ಬ್ಯಾಂಕ್‌ಗೆ ನೀಡಿ ಲಕ್ಷಾಂತರ ರೂ. ವಂಚಿಸಲು ಪ್ರಯತ್ನಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ವಂಚನೆ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next