Advertisement
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶ ಎಂಬ ಖ್ಯಾತಿಗೆ ಗುರಿಯಾಗಿದ್ದು, ಇದನ್ನು ಅಳಿಸಿ ಹಾಕಲು ಅಂತರ್ಜಲಮಟ್ಟವನ್ನು ವೃದ್ಧಿಗೊಳಿಸುವ ಕೆಲಸಕ್ಕೆ ಹಿಂದಿನ ಜಿಲ್ಲಾಧಿಕಾರಿಅನಿರುದ್ಧ್ ಶ್ರವಣ್ ಸಾಕಷ್ಟು ಶ್ರಮವಹಿಸಿದ್ದರು. ಜಿಲ್ಲೆಯಲ್ಲಿನ ಜಲಮೂಲಗಳು ಕೆರೆ-ಕುಂಟೆಗಳನ್ನುಸಂರಕ್ಷಣೆ ಮಾಡುವ ಜೊತೆಗೆ ಅಕ್ರಮವಾಗಿಒತ್ತುವರಿಯಾಗಿದ್ದ ಕೆರೆಗಳನ್ನು ತೆರವುಗೊಳಿಸಿ, ಬೌಂಡರಿ ಗುರುತು ಮಾಡಿದ್ದರು.
Related Articles
Advertisement
ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ರೈತರು ಮತ್ತು ಜನರ ಪಾಲಿಗ ನರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ನಿರ್ಮಿಸಿರುವ ಬಹುತೇಕ ಕಲ್ಯಾಣಿಗಳು, ಕೆರೆ-ಕುಂಟೆಗಳು, ಬಹುಕಮಾನ್ ಚೆಕ್‌ಡ್ಯಾಂಗ ಳು, ಕೃಷಿ ಹೊಂಡಗಳು ಮಳೆನೀರು ಕೊಯು ಪದ್ಧತಿ ಅಳವಡಿಸಿ ನಿರ್ಮಿಸಿರುವ ಸಂಪ್‌ಗಳು ಭರ್ತಿಯಾಗಿದೆ.
ಕಳದೆರಡು ಸಾಲಿನ ಚೆಕ್ ಡ್ಯಾಂ ವಿವರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಬಾಗೇಪಲ್ಲಿ 1, ಚಿಕ್ಕಬಳ್ಳಾಪುರ 13, ಚಿಂತಾಮಣಿ 16, ಗೌರಿಬಿದನೂರು 6, ಗುಡಿಬಂಡೆ 7, ಶಿಡ್ಲಘಟ್ಟತಾಲೂಕಿನಲ್ಲಿ 32 ಒಟ್ಟು 75 ಬಹುಕಮಾನ್ ಚೆಕ್ ಡ್ಯಾಂಗಳ ನಿರ್ಮಾಣ ಮಾಡಿದ್ದು, 2021-22ನೇಸಾಲಿನಲ್ಲಿ ಚಿಂತಾಮಣಿ 2, ಗೌರಿಬಿದನೂರು 1, ಶಿಡ್ಲಘಟ್ಟ 7 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಎಲ್ಲವೂ ತುಂಬಿ ಹರಿಯುತ್ತಿದ್ದು, ನೋಡಲು ಜನ ಮುಗಿಬೀಳುತ್ತಿದ್ದಾರೆ.
ಚೆಕ್ ಡ್ಯಾಂ ಶೇ.80 ಭರ್ತಿ: ಚಿಕ್ಕಬಳ್ಳಾಪುರ ಜಿಲ್ಲೆಯೂ ಬರಪೀಡಿತ ಪ್ರದೇಶವಾಗಿದೆ. ಜಲ ಸಂರಕ್ಷಣೆ ಮಾಡಲು ಆರ್.ಡಿ.ಪಿ.ಆರ್ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್‌ಹೇಳಿದರು. ಈ ಹಿಂದೆ ನಿರ್ಮಿಸಿರುವ ಚೆಕ್ ಡ್ಯಾಂಗಳು ಇತ್ತೀಚಿಗೆ ಸುರಿದ ಮಳೆಯಿಂದ ಶೇ.80 ರಿಂದ 90 ತುಂಬಿದ್ದು, ಇದರಿಂದ ಅಂತರ್ಜಲದಮಟ್ಟ ವೃದ್ಧಿ ಆಗಿದೆ. ಪೋಷಕಕಾಲುವೆ ಅಭಿವೃದ್ಧಿಗೊಳಿಸಲಾಗಿದೆ. ವ್ಯರ್ಥವಾಗಿ ಹರಿಯುವ ನೀರು ತಡೆಗಟ್ಟಿ, ನಿಂತಿರುವನೀರು ಇಂಗಿಸುವ ಕೆಲಸವನ್ನು ಕೈಗೊಂಡಿದೆ ಎಂದು ಹೇಳಿದರು.ಚೆಕ್‌ಡ್ಯಾಂಗಳಸುತ್ತಮುತ್ತಲಿನಪ್ರದೇಶದಲ್ಲಿ ಕೊಳವೆಬಾವಿಗಳು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರ್‌ವೆಲ್ ಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.
ನರೇಗಾ ಯೋಜನೆಯಡಿ ನಿರ್ಮಿಸಿರುವಕೆರೆ-ಕುಂಟೆಗಳು,ಕಲ್ಯಾಣಿಗಳು ಮತ್ತು ಬಹುಕಮಾನ್ ಚೆಕ್‌ಡ್ಯಾಂಗಳು ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ತುಂಬಿವೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿ ರೈತರು ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಸಹ ಸ್ಯಾಟಲೈಟ್ ಆಧರಿಸಿ ಮಳೆ ನೀರು ಸಂಗ್ರಹ ಮಾಡಲು ಚೆಕ್‌ಡ್ಯಾಂಗಳನ್ನು ನಿರ್ಮಿಸಲುಕ್ರಮಕೈಗೊಳ್ಳಲಾಗಿದೆ.-ಪಿ.ಶಿವಶಂಕರ್, ಜಿಪಂ ಸಿಇಒ, ಚಿಕ್ಕಬಳ್ಳಾಪುರ
-ಎಂ.ಎ.ತಮೀಮ್ ಪಾಷ