Advertisement

ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್‌ ಸುಲಭ

12:30 AM Jan 23, 2019 | |

ಹೊಸದಿಲ್ಲಿ: ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್‌ ಇನ್‌ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಡಿಜಿ ಯಾತ್ರಾ ಎಂಬ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿದೆ. ಇದರಿಂದ ದೇಶೀಯ ವಿಮಾನವನ್ನೇರಲು ಕಾಗದ ರಹಿತವಾಗಿ ಚೆಕ್‌ ಇನ್‌ ಮಾಡಬಹುದು. ಮೊದಲ ಬಾರಿ ವಿಮಾನಯಾನ ಸಚಿವಾಲಯದ ಪೋರ್ಟಲ್‌ನಲ್ಲಿ ಡಿವೈ ಐಡಿಯನ್ನು ಜನರೇಟ್‌ ಮಾಡಿಕೊಳ್ಳ ಬೇಕಿದ್ದು, ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿಸಿಕೊಂಡರೆ ಸಾಕು. ನಂತರ ಈ ಸಂಖ್ಯೆಯನ್ನು ಬಳಸಿ ಟಿಕೆಟ್‌ ಬುಕಿಂಗ್‌ ಮಾಡಿದರೆ ದಾಖಲೆ ಪತ್ರ ಗಳಿಲ್ಲದೆಯೇ ಪ್ರಯಾಣಿಸಬಹುದಾಗಿದೆ.ಆದರೆ ಈ ಸೌಲಭ್ಯ ದೇಶೀಯ ವಿಮಾನ ಗಳನ್ನು ಏರಲು ಮಾತ್ರ ಲಭ್ಯವಿರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next