Advertisement

ಹಗ್ಗ ಜಗ್ಗಾಟ ಶುರು

09:37 PM Jan 09, 2020 | mahesh |

ಕನ್ನಡ ಚಿತ್ರರಂಗದಲ್ಲಿ ಈಗ ಚಿತ್ರ-ವಿಚಿತ್ರ ಶೀರ್ಷಿಕೆಗಳ ಸರದಿ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರಂತೂ ಹೊಸ ಬಗೆಯ ಟೈಟಲ್‌ಗ‌ಳ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ “ಹಗ್ಗ’. ಹೀಗೊಂದು ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಹಿಂದೆ “ಜ್ಞಾನಂ’ ಸಿನಿಮಾ ನಿರ್ಮಾಣ ಮಾಡಿದ್ದ ವಸಂತ ಸಿನಿಕ್ರಿಯೇಶನ್ಸ್‌ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಹಿಂದೆ ಕಿರುಚಿತ್ರ ಮಾಡಿ, ಮೆಚ್ಚುಗೆ ಪಡೆದಿದ್ದ ಅವಿನಾಶ್‌ “ಹಗ್ಗ’ ಮೂಲಕ ನಿರ್ದೇಶಕರಾಗಿದ್ದಾರೆ. ನಿರ್ಮಾಪಕ­ರ­ಲ್ಲೊಬ್ಬರಾದ ವೇಣು ಭಾರಧ್ವಾಜ್‌ ಈ ಚಿತ್ರದ ಹೀರೋ.

Advertisement

ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆ­ಯುವ ಸಮಸ್ಯೆಯ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ. ನಿಗೂಢವಾಗಿ ಸಾವಿಗೀಡಾಗುವ ಹಾಗೂ ಅನೇಕ ಸಮಸ್ಯೆಗಳಿರುವ ಊರಿಗೆ ನಾಯಕನ ಎಂಟ್ರಿಕೊಡುತ್ತಾನೆ. ಈ ನಡುವೆಯೇ ಒಂದು ಲವ್‌ಸ್ಟೋರಿ. ಜೊತೆಗೆ ಆ ಊರಿನ ಸಮಸ್ಯೆಯನ್ನು ನಾಯಕ ಹೇಗೆ ಬಗೆಹರಿಸುತ್ತಾನೆ. ಈ ವೇಳೆ ಆತ ಏನೇನೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ “ಹಗ್ಗ’ ಚಿತ್ರ ಸಾಗುತ್ತದೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌, ಕಾಮಿಡಿ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನಿರ್ದೇಶಕರದು. ಚಿತ್ರದಲ್ಲಿ ನಾಯಕ ವೇಣು ಗೌಡರ ಮಗನಾಗಿ ಕಾಣಿಸಿಕೊಂಡರೆ ನಾಯಕಿ ಪ್ರಿಯಾಂಕಾ ಅರೋರ ವರದಿಗಾರ್ತಿಯಾಗಿ ನಟಿಸಿದ್ದಾರೆ. ತಬಲ ನಾಣಿ ನಾಯಕನ ಮಾವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಮಗಳೂರು ದಟ್ಟ ಕಾಡುಗಳು, ತೀರ್ಥಹಳ್ಳಿ, ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ 45 ದಿನಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂಬುದು ಚಿತ್ರತಂಡದ ಮಾತು. ಉಳಿದಂತೆ ಸಿಂಬ, ನಿಶಾಂತ್‌, ವಂದನಾ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಸನ್ನ ಅವರ ಸಂಗೀತ, ಅವಿನಾಶ್‌ ಛಾಯಾಗ್ರಹಣ, ಬಾಲ ಸಂಕಲನ, ಮನೋಹರ್‌ ಸಂಭಾಷಣೆ, ಅಲ್ಟಿಮೇಟ್‌ ಶಿವು ಸಾಹಸವಿದೆ. ಚಿತ್ರವನ್ನು ವಸಂತ್‌ ಸಿನಿಕ್ರಿಯೇಶನ್ಸ್‌ ನಡಿ ರಾಜ್‌ ಭಾರಧ್ವಾಜ್‌ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next