Advertisement

ಭಾರತದಿಂದ ತೆರಳಿದೆ ಚಾರ್ಟರ್ಡ್‌ ಫ್ಲೈಟ್; ಚೋಕ್ಸಿ ಗಡೀಪಾರು ಖಚಿತ?

07:43 AM May 31, 2021 | Team Udayavani |

ಹೊಸದಿಲ್ಲಿ: ಡೊಮಿನಿಕ್‌ ಗಣರಾಜ್ಯದಲ್ಲಿ ಸೆರೆ ಸಿಕ್ಕಿರುವ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ವಂಚನೆ ಆರೋಪಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ. ಕೇಂದ್ರ ಸರಕಾರ ಡೊಮಿನಿಕ್‌ ಗಣರಾಜ್ಯಕ್ಕೆ ಚೋಕ್ಸಿ ವಿರುದ್ಧದ ದಾಖಲೆಗಳು ಮತ್ತು ಚಾರ್ಟರ್ಡ್‌ ವಿಮಾನವನ್ನು ಕಳುಹಿಸಿಕೊಟ್ಟಿದೆ. ಈ ಬಗ್ಗೆ ಸ್ವತಃ ಆ್ಯಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್‌ ಬ್ರೌನ್‌ ಅವರೇ ಮಾಹಿತಿ ನೀಡಿದ್ದಾರೆ.

Advertisement

“ಭಾರತ ಸರಕಾರದ ವತಿಯಿಂದ ಡೊಮಿನಿಕ್‌ಗೆ ವಿಮಾನ ಮತ್ತು ಚೋಕ್ಸಿ ವಿರುದ್ಧದ ದಾಖಲೆಗಳನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಗಡೀಪಾರು ಮಾಡಬೇಕು ಎಂದು ಡೊಮಿನಿಕ್‌ ಗಣರಾಜ್ಯಕ್ಕೆ ಮನವಿ ಮಾಡುತ್ತೇನೆ. ಆ್ಯಂಟಿಗುವಾಕ್ಕೆ ಮರಳಿದರೆ, ಆತನಿಗೆ ಮತ್ತೆ ದೇಶದ ಪ್ರಜೆ ಎಂಬ ನೆಲೆಯಲ್ಲಿ ರಕ್ಷಣೆ ನೀಡಬೇಕಾಗುತ್ತದೆ. ನಮ್ಮ ದೇಶದಲ್ಲಿ ವಿಪಕ್ಷಗಳಿಗೆ ಚೋಕ್ಸಿ ವಿತ್ತೀಯ ನೆರವು ನೀಡುತ್ತಿದ್ದಾನೆ’ ಎಂದು ದೂರಿದ್ದಾರೆ.

ಕತಾರ್‌ನ ಖಾಸಗಿ ವಿಮಾನಯಾನ ಕಂಪೆನಿಯ ಚಾರ್ಟರ್ಡ್‌ ವಿಮಾನವನ್ನು ಡೊಮಿನಿಕ್‌ ಗಣರಾಜ್ಯಕ್ಕೆ ಹೊಸದಿಲ್ಲಿ ವಿಮಾನ ನಿಲ್ದಾಣದಿಂದ ಕಳುಹಿಸಿ ಕೊಡಲಾಗಿದೆ. ಆದರೆ ಕೇಂದ್ರ ಸರಕಾರ ಈ ಅಂಶವನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಡೊಮಿನಿಕಾ ಹೈಕೋರ್ಟ್‌ ದೇಶದಿಂದ ಚೋಕ್ಸಿಯನ್ನು ಗಡೀಪಾರು ಮಾಡಬೇಕು ಎಂದು ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆಸಿ ಸದ್ಯಕ್ಕೆ ತಡೆಯಾಜ್ಞೆ ನೀಡಿದೆ. ಜೂ.2ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

ಫೋಟೋ ಬಿಡುಗಡೆ: ಮತ್ತೂಂದು ಬೆಳವಣಿಗೆಯಲ್ಲಿ 62 ವರ್ಷದ ಚೋಕ್ಸಿಯದ್ದು ಎಂದು ಹೇಳಲಾಗಿರುವ ಊದಿಕೊಂಡಿರುವ ಕೈಗಳು, ಕಣ್ಣುಗಳು ಮತ್ತು ದೇಹದ ಮೇಲೆ ಗಾಯಗಳಿರುವ ಫೋಟೋಗಳು ಬಹಿರಂಗಗೊಂಡಿವೆ. ಜಾಲ್ಲ ಹಾರ್ಬರ್‌ ನಿಂದ ಪೊಲೀಸರು ಚೋಕ್ಸಿಯನ್ನು ಅಪಹರಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ವಕೀಲರು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next