Advertisement
ಕುಂತರೂ, ಹೋದರೂ, ನಡೆದ್ದದು, ನಿಂತಿದ್ದು ಮನುಷ್ಯನ ಜೀವನದ ಸಾಮಾನ್ಯ ಸಂಗತಿಗಳೆಲ್ಲವನ್ನೂ ಹಾಸ್ಯವಾಗಿ, ರಸವತ್ತಾಗಿ ಬಿಂಬಿಸುವುದರಲ್ಲಿ ಈತ ಎತ್ತಿದ ಕೈ.
ಚಾರ್ಲಿ ಹೆತ್ತವರೂ ಕಲಾವಿದರಾದ ಕಾರಣ ಚಿಕ್ಕಂದಿನಿಂದಲೇ ಕಲಾ ಪ್ರತಿಭೆ ಇವರಲ್ಲಿ ಚಿಗುರೊಡೆದಿತ್ತು. ಹೂ ಮಾರುವುದು, ಡಾಕ್ಟರ್‌ನೊಂದಿಗೆ ಕ್ಲರ್ಕ್, ಹಾಡುಗಾರನಾಗಿ, ನಾಟಕ ಕಲಾವಿದ ಹೀಗೆ ಮಾಡಿದ ಕಾಯಕಗಳೆಲ್ಲದರಲ್ಲೂ ನಿಸ್ಸಿಮರಾಗಿದ್ದರು. ಸಮಾಜದ ನೈಜತೆಯನ್ನು ಎತ್ತಿ ಹಿಡಿದು ತನ್ನ ನಟನಾ ಕೌಶಲದಿಂದಲೇ ಜನಪ್ರಿಯತೆ ಪಡೆದನು. “ನನಗೆ ಮಳೆಯಲ್ಲಿ ನೆನೆಯುವುದು ಇಷ್ಟ ಯಾಕೆಂದರೆ ನಾನು ಮಳೆಯಲ್ಲಿ ಅಳುವುದು ಯಾರಿಗೂ ಕಾಣದು’ ಎಂಬ ಅವರ ನುಡಿಮುತ್ತಿನಿಂದಲೇ ಜೀವನವನ್ನು ಅವರು ಸ್ವೀಕರಿಸಿದ ರೀತಿ ನಮಗೆ ಅರಿವಾಗುತ್ತದೆ.
Related Articles
ಜಗತ್ತಿನಲ್ಲಿ ಯಾವುದು, ಯಾರು ಕೂಡ ಶಾಶ್ವತವಲ್ಲ. ಎಲ್ಲವೂ ಕ್ಷಣಿಕ. ಅಂತೆಯೇ ಈ ವಿಚಾರವಾಗಿ ಚಾರ್ಲಿ ಚಾಪ್ಲಿನ್ ಹೇಳುವಂತೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಸಮಸ್ಯೆಗಳು ಕೂಡ. ಅದಕ್ಕೆ ಒಂದು ದಿನ ಪರಿಹಾರ ಸಿಕ್ಕೆ ಸಿಗುತ್ತದೆ. ಅದನ್ನು ನೀವು ಹುಡುಕಬೇಕು ಎಂದು ಹೇಳಿದ್ದರು.
Advertisement
ಪ್ರತಿಭೆಯ ಕುಲುಮೆಚಾರ್ಲಿ ತನ್ನ ಸ್ವಂತ ನಿರ್ದೇಶನವನ್ನು ಮಾಡುವ ಮುನ್ನ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಜಗತ್ತಿಗೆ ಪರಿಚಿತರಾಗಿದ್ದಾನೆಂದರೆ ಅದಕ್ಕೆ ಫೋರ್ಡ್ ಸ್ಟೆರ್ಲಿಂಗ್‌ನ ಪ್ರಭಾವವು ಇರುವುದನ್ನು ಕಾಣಬಹುದು. ಫೋರ್ಡ್ ಸ್ಟೆರ್ಲಿಂಗ್ ಆಂಗಿಕ ಅಭಿನಯದ ಮೂಲಕವೇ ಪ್ರಸಿದ್ಧ ನಟರೆಂದು ಗುರುತಿಸಿಕೊಂಡಿದ್ದರು. ಅವರಿದ್ದ ಕಂಪನಿಯನ್ನು ತೊರೆದ ಬಳಿಕ ಅವರ ಅನುಪಸ್ಥಿತಿಯನ್ನು ಚಾರ್ಲಿ ತುಂಬಬೇಕೆಂದು ಸ್ಟೆರ್ಲಿಂಗ್‌ನನ್ನು ಅನುಕರಣೆ ಮಾಡುವಂತೆ ಕಂಪನಿಯೂ ತಿಳಿಸುತ್ತದೆ. ಇಂತಹ ಪಾತ್ರ ತನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಲೇ ಇರುತ್ತಿತಂತೆ. ನಿರ್ದೇಶಕ ಸೆನೆಟ್ ಸಾಮಾನ್ಯ ಚಿತ್ರವೊಂದಕ್ಕೆ ಚಾರ್ಲಿಯನ್ನು ಹಾಸ್ಯನಟನಾಗಿ ಆಯ್ಕೆ ಮಾಡಿದ ಬಳಿಕ ಚಾರ್ಲಿಗೆ ತೋಚಿದಂತೆ ಮೇಕ್ ಮಾಡಿ ಬಂದು ಹಾಸ್ಯಮಾಡಲು ಹೇಳುತ್ತಾನೆ. ಈ ಸ್ವಂತಿಕೆ ಆತನಿಗೆ ಸಿಕ್ಕಿದ್ದೆ ತಡ ಹಲವು ವರ್ಷಗಳಿಂದ ಬಚ್ಚಿಟ್ಟ ತನ್ನ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ದೊರೆತಂತಾಯಿತು. ಆ ದಿನ ಆತ ತೊಟ್ಟ ಉಡುಗೆ ತೊಡುಗೆ ಆಂಗಿಕ ಅಭಿನಯವೇ ಇಂದಿಗೂ ಚಾರ್ಲಿಯ ಅನುಪಸ್ಥಿತಿಯನ್ನು ಮರೆಮಾಚುವಂತೆ ಮಾಡಿದೆ.
ಚಾರ್ಲಿ ಚಾಪ್ಲಿನ್ ಅವರು ತಮ್ಮ ಹಾವಭಂಗಿಯಿಂದಲೇ ಇಡೀ ಜನಸಮೂಹವನ್ನು ಹೊಟ್ಟೆ ಹುಣ್ಣಾಗುವಷ್ಟು ನಗುಸುತ್ತಿದ್ದರು. ಇದರಿಂದ ನಾನು ನೋವು ಮರೆತೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು ಅವರೇ ಹೇಳುವಂತೆ “ಬದುಕಿನಲ್ಲಿ ನಗದ ದಿನ ವ್ಯರ್ಥ’ ಎಂದಿದ್ದಾರೆ. ನಗು ಎಂಬುದು ಜೀವಾನುಮೃತ ಇದ್ದಂತೆ. ಅದನ್ನು ಎಷ್ಟು ಪಸರಿಸುತ್ತೇವೆಯೋ ಅಷ್ಟು ಆರೋಗ್ಯವಾಗಿರುತ್ತೇವೆ ಎಂಬುದು ಚಾರ್ಲಿಯ ಬದುಕಿನ ತಿರುಳು. ಆಸ್ಕರ್ ಪ್ರಶಸ್ತಿ ಮತ್ತು ಭಾವನಾತ್ಮಕ ಭಾಷಣ
ಚಾರ್ಲಿ ಚಾಪ್ಲಿನ್ ಅವರಿಗೆ “ದಿ ಸರ್ಕಸ್’ ಎಂಬ ಚಿತ್ರಕ್ಕೆ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆಯುತ್ತದೆ. 1972ರಲ್ಲಿ ಅವರು ಆಸ್ಕರ್ ಪ್ರಶಸ್ತಿ ಪಡೆಯಲು ಸಭಾಂಗಣಕ್ಕೆ ಬಂದು ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಕೇವಲ 45 ಸೆಕೆಂಡ್‌ಗಳಲ್ಲಿ ತಮ್ಮ ಭಾಷಣವನ್ನು ಮುಗಿಸಿದ್ದರು. ಆದರೆ ಸುಮಾರು 40 ನಿಮಿಷಗಳ ಕಾಲ ಇವರ ಭಾಷಣಕ್ಕೆ ಕರತಾಡನ ಹಾಕಲಾಗಿತ್ತು. ಇವರ ಸಾಧನೆಗೆ ಜನರ ಕರತಾಡನ ಸಭಾಂಗಣದಿಂದ ಮುಗಿಲು ಮುಟ್ಟಿತ್ತು. ಆ ಭಾಷಣದ ಭಾವನುವಾದ ಹೀಗಿದೆ. “ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಇಂದು ನಾನು ಅತ್ಯಂತ ಹೆಮ್ಮೆಯ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ಈ ಘಳಿಗೆಯನ್ನು ವರ್ಣಿಸಲು ಪದಗಳು ಕೂಡ ಸೋಲುತ್ತೀವೆ. ನಾನು ಧನ್ಯವಾದ ಅಂತ ಮಾತ್ರ ಹೇಳಬಲ್ಲೇ. ಥ್ಯಾಂಕ್ಯೂ, ಥ್ಯಾಂಕ್ಯೂ..! ಇಂಗ್ಲೆಡ್‌ನ ಕಡು ಬಡತನದ ಕುಟುಂಬದಲ್ಲಿ ಜನಿಸಿ ಅಮೆರಿಕದಲ್ಲಿ ಅಗ್ರಗಣ್ಯ ಶ್ರೀಮಂತನೆನೆಸಿದ ಚಾರ್ಲಿ ಡಿಸೆಂಬರ್ 25, 1977ರಂದು ನಿಧನ ಹೊಂದಿದನು. ಫೋಲ್ಯಾಂಡ್, ಐರ್ಲ್ಯಾಂಡ್, ಸಿಟ್ಜರ್‌ಲ್ಯಾಂಡ್, ಭಾರತ ಕೂಡ ಸೇರಿ ಹತ್ತು ಹಲವು ರಾಷ್ಟ್ರಗಳು ಆತನ ಪ್ರತಿಮೆಯನ್ನು ನಿರ್ಮಿಸಿದ್ದು ಆತನ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ. ಸಿನೆಮಾಗಳು
ಸಿಟಿ ಲೈಟ್ಸ್, ದಿ ಟ್ರಾಂಪ್, ಪೊಲೀಸ್, ಟ್ರಿಪಲ್ ಟ್ರಬಲ್, ದಿ ಗ್ರೇಟ್ ಡಿಕ್ಟೆಟರ್, ದಿ ಕಿಂಗ್ ಆಫ್ ನ್ಯೂಯಾರ್ಕ್, ದಿ ಸರ್ಕಸ್, ದಿ ಫೈರ್ ಮ್ಯಾನ್, ಸೋಲ್ಡರ್ ಆಮ್ಸ್ì, 1922 ಪೇ ಪೇ, ದಿ ಬಂಡ್, ದಿ ಕ್ಯುರ್, ದಿ ಅಡ್ವೆಂಚರ್ ಸಹಿತ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಆತ ನಟಿಸಿದ್ದು ಅಂದಿನ ಹಾಸ್ಯನಟರಾದ ಹೆರಾಲ್ಡ್, ಬೂಸ್ಟನ್ ಕಿಟನ್ ಇವರಿಬ್ಬರಿಗಿಂತ ಒಂದು ಕೈ ಮೇಲೆಂದೆ ಜನಮನ್ನಣೆ ಪಡೆದಿದ್ದಾರೆ. ರಾಧಿಕಾ, ಕುಂದಾಪುರ