ಹೊಸ ವರುಷ ಬಂತೆಂದು ಹರುಷದಿ ಕುಣಿಯುವ ನಾವು ಹಳೆ ವರುಷದ ದಿನಗಳ ಮರೆಯುತ್ತೇವೆ.ಅದೆಷ್ಟೋ ನೆನಪುಗಳು,ಅದೆಷ್ಟೋ ಸಂತೋಷದ ಕ್ಷಣಗಳು,ಹಾಗೆ ಮಾಡಿದ ಕೆಲವು ತಪ್ಪುಗಳು ಅವುಗಳೊಂದಿಗೆ ಹೊಸ ನಿರ್ಧಾರ ತೆಗೆದುಕೊಳ್ಳಲು ಹೊಸ ಅವಕಾಶ ಹೊಸ ವರ್ಷ.
ಪ್ರಸ್ತುತ ಪ್ರಪಂಚದಾದ್ಯಂತ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಎಲ್ಲರೂ ಜನವರಿ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತೇವೆ.ಹೊಸ ವರ್ಷದಲ್ಲಿ ಹೆಚ್ಚಾಗಿ ಭಾರತೀಯರು ಸಿಹಿ ಹಂಚಿ ಹೊಸ ದಿನದ ಆಗಮನವನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇವೆ. ಹೊಸ ವರ್ಷ ಪ್ರತಿ ವರ್ಷ ಬಂದೆ ಬರುತ್ತದೆ. ವರ್ಷಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತದೆ ಅದರೆ ಕಳೆದು ಹೋದ ದಿನಗಳು ಮರುಕಳಿಸಲು ಸಾಧ್ಯವೆ.
ಅದೆಷ್ಟೋ ಸಮಯ ಸುಮ್ಮನೆ ಕಾಲ ಕಳೆಯುತ್ತ ಕಳೆದ ವರ್ಷವನ್ನು ನೆನಪಿನ ದಾರಿಯಲ್ಲಿ ಬಿಟ್ಟಿದ್ದೇವೆ ಹೊಸವರ್ಷದಲ್ಲಿ ಹೊಸತನ್ನು ಕಲಿಯೋಣ, ನೆಮ್ಮದಿಯ ಜೀವನವಿದು ಮುಂಗಾರಿನಂತೆ ಬದುಕೋಣ, ಮುಂಗಾರು ಮಳೆ ತರುವ ಆನಂದ ಬಹಳ ಮುದ ಕೊಡುವಂತದ್ದಲ್ಲವೆ.
ಅದೆಷ್ಟೋ ದಿನಗಳು, ಗಂಟೆಗಳು, ನಿಮಿಷಗಳು ಕಳೆದರು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಬದುಕುತ್ತೇವೆ ಇಷ್ಟು ದಿನ ಹೇಗೆ ಬದುಕಿದ್ದೇವೆ ಎನ್ನುವುದನ್ನು ಹೊಸ ವರ್ಷಕ್ಕೆ ಆದರೂ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕನಸು ನೂರೊಂದು ಹೊತ್ತು ನನಸಾಗಿಸುವತ್ತ ಹೊಸ ವರ್ಷವನು ಸಾಗಿಸೋಣ. ಹೊಸ ವಿಚಾರ, ಹೊಸ ಪರಿಚಯ, ಹೀಗೆ ಹೊಸತನ್ನು ಕಲಿಯುತ್ತ ನೆಮ್ಮದಿಯ ನಗುವಿನತ್ತ ಹೆಜ್ಜೆ ಹಾಕಿದರೆ ದಿನವೂ ಹೊಸತೆ. ಕ್ಯಾಲೆಂಡರ್ ಬದಲಾಯಿತೆಂದರೆ ಹೋದ ದಿನಗಳು ಮರುಕಳಿಸದು ಎನ್ನುವ ಅರ್ಥವಲ್ಲವೇ, ಬದಲಾದ ಕ್ಯಾಲೆಂಡರ್ ಹೊಸ ದಿನದ ಪರಿಚಯ ನೀಡುತ್ತಿದೆ ಎಂದು ಸಂತಸದಿಂದ ಸಂಭ್ರಮಾಚರಣೆ ಮಾಡುತ್ತೇವೆ, ಕಳೆದ ದಿನಗಳ ತಪ್ಪು, ಕಳೆದುಕೊಂಡ ನೆನಪುಗಳು, ಕೆಲವು ಸಿಹಿ ಘಟನೆಗಳು, ಇದೆಲ್ಲವನ್ನು ಯೋಚಿಸಿದರೆ ಹೊಸ ವರ್ಷದಲ್ಲಿ ಏನಾದರೂ ಹೊಸತನ್ನು ಮಾಡಬಹುದಲ್ಲವೇ…! ಬಂತೊಂದು ವರುಷ ಹೊಸತನ್ನು ಚೆಲ್ಲುತ ಕನಸುಗಳು ನೂರಾರು ಯೋಚನೆಗಳು ಸಾವಿರಾರು ನಸುನಗುವ ಚೆಲ್ಲುತ್ತ ಸಾಧನೆಯೆಡೆಗೆಸಾಗೋಣ ಕನಸು ಹೇಗಿರಬೇಕೆಂದರೆ ಬಡಿಡೆಬ್ಬಿಸಬೇಕು ನಮ್ಮ ನಿದ್ದೆಯಲು, ಹೊಸ ವರ್ಷದ ದಿನಗಳು ಹೇಗೆ ಸಾಗಬೇಕು ಎಂದರೆ ಅಚ್ಚರಿಯಾಗಬೇಕು ನೀ ಕಳೆಯುವ ದಿನವ ನೀನೆ ನೋಡಿ. ಶಾಶ್ವತವಲ್ಲದ ಬದುಕಲ್ಲಿ ಶಾಶ್ವತವಾಗಿ ಉಳಿಯುವುದು ಹೆಸರೊಂದೇ ಅಲ್ಲವೆ..! ಉಳಿಸಿಕೊಳ್ಳಲು ಸಾಧನೆಯೊಂದೆ ಮೆಟ್ಟಿಲು, ನೆಮ್ಮದಿಯ ಯೋಚನೆಯೊಂದಿಗೆ ಸರಿಯಾದ ನಿರ್ಧಾರವಿ¨ªಾಗ ಎಲ್ಲವನ್ನೂ ಹೊಸತಾಗಿಸಬಹುದು.
-ರಕ್ಷಿತಾ ಚಪ್ಪರಿಕೆ, ಆಳ್ವಾಸ್ ಕಾಲೇಜು, ಮೂಡುಬಿದಿರೆ