Advertisement

17ರಂದು ಶರಣಬಸವೇಶ್ವರ ರಥೋತ್ಸವ

03:52 PM Mar 14, 2017 | Team Udayavani |

ಕಲಬುರಗಿ: ಕಲ್ಯಾಣ ನಾಡಿನ ಆರಾಧ್ಯ ದೈವ, ಮಹಾದಾಸೋಹಿ, ಐತಿಹಾಸಿಕ ಶರಣಬಸವೇಶ್ವರ 195ನೇ ಯಾತ್ರಾ ಮಹೋತ್ಸವಕ್ಕೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರ ನೇತೃತ್ವ ಹಾಗೂ ಸನ್ನಿಧಾನದಲ್ಲಿ ಸಿದ್ಧತೆಗಳು ನಡೆದಿದ್ದು, ಮಾ. 16ರಂದು ಸಂಜೆ 6:00ಕ್ಕೆ ಉಚ್ಚಾಯಿ ಹಾಗೂ 17ರಂದು ಸಂಜೆ 6:00ಕ್ಕೆ ಮಹಾರಥೋತ್ಸವ ನಡೆಯಲಿದೆ. 

Advertisement

ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಾಡಿನ ಜನರಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದು, ಜಾತ್ರಾ ಮಹೋತ್ಸವ ಯುಗಾದಿ ಹಬ್ಬದ ದಿನದವರೆಗೂ ನಡೆಯುತ್ತದೆ. ಯಾತ್ರಾ ಮಹೋತ್ಸವ ಅಂಗವಾಗಿ ಮಾ. 13ರಿಂದ 18ರ ವರೆಗೆ ಶಿವಾನುಭವ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ.

ಮಾ. 14ರಂದು ಸಂಜೆ 6:00ಕ್ಕೆ ಶರಣಬಸವೇಶ್ವರ ಲೀಲಾವಿಲಾಸ ಪುರಾಣವನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಧಿಪತಿಗಳಾದ ಪರಮಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬಿಡುಗಡೆ ಮಾಡುವರು. ಹಿಂದಿ ಭಾಷೆಯಲ್ಲಿ ಈ ಪುರಾಣವನ್ನು ಹಾವಗಿಸ್ವಾಮಿ ಶಾಸ್ತ್ರೀಯವರು ಭಾವಾನುವಾದ ಮಾಡಿದ್ದಾರೆ ಮತ್ತು ಮರಾಠಿ ಭಾಷೆಯಲ್ಲಿ ಸಂತಕವಿ ಸದ್ಗುರು ಬಸವಲಿಂಗ ಶಾಸ್ತ್ರೀ ಮಹಾರಾಜ ಹಣೆಗಾಂವ ರಚಿಸಿದ್ದಾರೆ.

ಅಲ್ಲದೆ ಶರಣಬಸವೇಶ್ವರರ ಪುರಾಣವು ಸಂಸ್ಕೃತ, ತೆಲುಗುಭಾಷೆಯಲ್ಲಿ ಸಹ ರಚನೆಯಾಗಿರುವುದು ಮತ್ತೂಂದು ವಿಶೇಷವಾಗಿದೆ.ಮಾ. 14ರಂದು ಶರಣಬಸವರ ಕಾಯಕ ದಾದೋಹ ಕುರಿತಾಗಿ ಪ್ರೊ| ಕ್ಷೇಮಲಿಂಗ ಬಿರಾದಾರ ಉಪನ್ಯಾಸ ನೀಡುವರು. 15ರಂದು ಶರಣಬಸವೇಶ್ವರ ಮಹಾದಾಸೋಹ ಯಾತ್ರೆ ಕುರಿತು ಡಾ| ನೀಲಾಂಬಿಕಾ ಪೊಲೀಸ್‌ ಪಾಟೀಲ ಉಪನ್ಯಾಸ ನೀಡುವರು.

ಅದೇ ರೀತಿ 16ರಂದು ಸಂಜೆ 6:00ಕ್ಕೆ ಕಲಬುರಗಿಯಲ್ಲಿ ಶರಣಬಸವರು ಕುರಿತು ಪ್ರೊ| ವೆಂಕಣ್ಣ ದೊನೆಗೌಡರು, 17ರಂದು ಶರಣಬಸವರ ಲಿಂಗೈಕ್ಯ ಲೀಲೆ ಕುರಿತು ಪ್ರೊ| ಆನಂದ ಸಿದ್ಧಾಮಣಿ, 18ರಂದು ಶರಣಬಸವರು ಮತ್ತು ಪ್ರಸ್ತುತ ಸಮಾಜ ಕುರಿತು ಡಾ| ಸೋಮಶಂಕರಯ್ಯ ವಿಶ್ವನಾಥಮಠ ಉಪನ್ಯಾಸ ನೀಡುವರು.

Advertisement

ಡಾ| ಕಲಾವತಿ ದೊರೆ, ಪ್ರೊ| ಶ್ರೀಶೈಲ ಹಿರೇಮಠ, ಚನ್ನಮ್ಮ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಪ್ರೊ| ಎಂ.ಎಸ್‌. ಪಾಟೀಲ ಹಾಗೂ ವೀರಭದ್ರಯ್ಯ ಸ್ಥಾವರಮಠ ಅವರು ತಬಲಾಸಾಥ್‌ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next