Advertisement

ಷಡ್ಯಂತ್ರ ಆರೋಪ; ಪೈವಳಿಕೆ  ಬೆರಿಪದವು ಪರಿಸರದಲ್ಲಿ ಜನ ಜಾಗೃತಿ ಸಭೆ

07:10 AM Jul 21, 2018 | |

ಉಪ್ಪಳ: ಕರ್ನಾಟಕದಿಂದ ಅಕ್ರಮವಾಗಿ ಕೇರಳಕ್ಕೆ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಕರ್ನಾಟಕದ ಯುವಕರು ವಿಚಾರಿಸಿದ ಘಟನೆಯನ್ನು ತಿರುಚಿ ಕೇರಳದ ಗಡಿಭಾಗದ ಹಿಂದೂ ಸಂಘಟನೆಯ ಯುವಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರಿಂದ ಬಂಧನ ಮಾಡಿಸುವ ಷಡ್ಯಂತ್ರದ ವಿರುದ್ಧ  ಕಾಸರಗೋಡು ಜಿಲ್ಲೆಯ ಪೈವಳಿಕೆಯ ಬೆರಿಪದವು ಪರಿಸರದಲ್ಲಿ ಜನ ಜಾಗೃತಿ ಸಭೆ ನಡೆಯಿತು.

Advertisement

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌ ಮಾತನಾಡಿ ಕೇರಳವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಕೊನೆಯ ಹಿಂದುವಿನ ಉಸಿರಿರುವ ವರೆಗೂ ಇದನ್ನು ಪಾಕಿಸ್ತಾನ ಆಗಲು ಬಿಡಲಾರೆವು ಎಂದರು. 

ರಾಜ್ಯದಲ್ಲಿ ಕಮ್ಯುನಿಸ್ಟ್‌ ಸರಕಾರ ಆಡಳಿತದಲ್ಲಿದ್ದರೂ ತನ್ನ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐಯ ಅಭಿಮನ್ಯು ಎನ್ನುವ ಯುವಕನನ್ನು ಎಸ್‌ಡಿಪಿಐ  ಕ್ಯಾಂಪಸ್‌ ಪ್ರಂಟ್‌ನಿಂದ ಕೊಲೆಯಾದಾಗ, ಅಭಿಮನ್ಯು ಮನೆಗೆ  ಭೇಟಿ ನೀಡದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇರಳದ ಗ್ರಾಮ ಪಂಚಾಯತ್‌ ಒಂದರಲ್ಲಿ ಅಧಿಕಾರಕ್ಕಾಗಿ ಅದೇ ಎಸ್‌ಡಿಪಿಐ ಜತೆ ಸೇರಿ ಸರಕಾರ ರಚಿಸುವ ಮೂಲಕ ತನ್ನ ಪಕ್ಷದ ಕಾರ್ಯಕರ್ತರ ಜೀವಕ್ಕೆ ಬೆಲೆ ಕೊಡದೆ ಅಧಿಕಾರಕ್ಕೆ ಅಂಟಿಕೊಂಡಿರುವುದು ನಾಚಿಕೆಯ ಸಂಗತಿ ಎಂದರು. 

ತೊಂಬತ್ತರ ದಶಕದಲ್ಲಿ ಕೇರಳ ಭಯೋತ್ಪಾದಕರ ಅಡಗುದಾಣವಾಗಿದೆ ಎಂದು ಬಿಜೆಪಿಯ ಕೆ.ಜಿ.ಮಾರಾರ್‌ ಹೇಳಿರುವುದು ಇಂದಿಗೆ ಸತ್ಯ ಎಂಬುದು ಎಲ್ಲರೂ ಒಪ್ಪುವಂತಾಗಿದೆ. ಸಂಘಟಿತವಾಗಿದ್ದು ಎಲ್ಲಾ ಆಕ್ರಮಣ ವನ್ನು ಎದುರಿಸಲು ಸಂಕಲ್ಪ ತೊಡೋಣ ಎಂದು ಅವರು ಹೇಳಿದರು.

ಸಭೆಯಲ್ಲಿ ಬಜರಂಗ ದಳದ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ  ವಿಶ್ವ ಹಿಂದೂ ಪರಿಷ ತ್ತಿನ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ, ವಿಹಿಂಪದ ಜಿಲ್ಲಾ ಕಾರ್ಯದರ್ಶಿ ಉಳುವಾನ ಶಂಕರ ಭಟ್‌, ವಿಹಿಂಪದ ಕಾಸರಗೋಡು  ಜಿಲ್ಲಾ ಉಪಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ, ವಿಹಿಂಪದ ಪೈವಳಿಕೆ ಪಂಚಾಯತ್‌ ಘಟಕದ ಅಧ್ಯಕ್ಷ ಮೋಹನ ಬಲ್ಲಾಳ್‌, ಬಜ ರಂಗ‌ದಳದ ಸುರೇಶ್‌ ಶೆಟ್ಟಿ ಪರಂಕಿ ಲ ಬಿಜೆಪಿ ನಾಯ ಕರಾದ  ಹರಿಶ್ಚಂದ್ರ ಮಂಜೇಶ್ವರ, ಎ.ಕೆ.ಕಯ್ಯಾರು, ಸರೋಜಾ ಆರ್‌.ಬಲ್ಲಾಳ್‌, ಸುಬ್ರಹ್ಮಣ್ಯ ಭಟ್‌, ಸದಾಶಿವ ಚೇರಾಲು, ಸುಂದರ ಶೆಟ್ಟಿ ಕಳಾಯಿ ಮೊದಲಾದವರು ಉಪಸ್ಥಿತರಿದ್ದರು.

Advertisement

“ರಕ್ಷಣೆಗೆ ಕಟಿಬದ್ಧ’
ಬಜರಂಗದಳದ ಪ್ರಾಂತ ಸಹ ಸಂಚಾಲಕ ಮುರಳೀ ಕೃಷ್ಣ ಹಸಂತ್ತಡ್ಕ ವಿಹಿಂಪ ಮತ್ತು ಬಜರಂಗದಳ ಹಿಂದೂ ಗಳ ರಕ್ಷಣೆಗೆ ಕಟಿಬದ್ಧವಾಗಿದೆ. ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿರಂತರ ಪ್ರೇರಣೆ ಎಂದರು. ರಕ್ಷಣೆಗೆ ನಾವು ಸಂಘಟಿ ತರಾಗಬೇಕು. ಮಾತೃಶಕ್ತಿ ಜಾಗೃತವಾದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಪ್ರತಿ ಮನೆ ಯಲ್ಲೂ ಶಿವಾಜಿ ಹಾಗೂ ಸಾವರ್ಕರ್‌ರಂತಹ ವೀರರು ನಿರ್ಮಾಣವಾಗಬೇಕು. ಆಗ ನಮ್ಮ ಮೇಲೆ ಯಾವ ಆಕ್ರಮಣ ಆಗಲಾರದು ಎಂದು ಅವರು ಅಭಿಪ್ರಾಯಪಟ್ಟರು.

ಹೆದರಬೇಕಾಗಿಲ್ಲ
ಹಿಂದೂ  ಯುವಕರ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಕಮ್ಯುನಿಸ್ಟ್‌ ಹಾಗೂ ಮುಸ್ಲಿಂ ಲೀಗ್‌  ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದರೆ ಹಿಂದೂ ಸಮಾಜ ಯಾವ ಕಾರಣಕ್ಕೂ ಹೆದರಬೇಕಾಗಿಲ್ಲ. ಸಂಘಟಿತವಾಗಿದ್ದು ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ.
– ಕೆ.ಶ್ರೀಕಾಂತ್‌
ಬಿಜೆಪಿ  ಕಾಸರಗೋಡು ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next